More

    ದೆಹಲಿ ಬಂಗಲೆ ಖಾಲಿ ಮಾಡಿ ಲಖನೌನತ್ತ ಮುಖ ಮಾಡಿದ ಪ್ರಿಯಾಂಕಾ?

    ನವದೆಹಲಿ: ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸದ್ಯದಲ್ಲೇ ನವದೆಹಲಿಯ ಸರ್ಕಾರಿ ಬಂಗಲೆಯ ಆಸರೆ ಕಳೆದುಕೊಳ್ಳಲಿದ್ದಾರೆ. ಇಲ್ಲಿಂದ ಅವರು ಎಲ್ಲಿಗೆ ತೆರಳಬಹುದು ಎಂಬ ಪ್ರಶ್ನೆಗೆ ಲಖನೌ ಎಂಬ ಉತ್ತರ ದೊರೆತಿದೆ.

    ಎಸ್​ಪಿಜಿ ಭದ್ರತೆಯುಳ್ಳ ಮುಖಂಡರಿಗೆ ಮೀಸಲಾಗಿರುವ ಲೋಧಿ ರಸ್ತೆಯ ಲುಟಯೆನ್ಸ್​ ಬಂಗಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆದರೆ, ಈಗ ಎಸ್​ಪಿಜಿ ಭದ್ರತೆಯನ್ನು ಹಿಂಪಡೆದು Z+ ಭದ್ರತೆ ಒದಗಿಸುತ್ತಿರುವುದರಿಂದ, ಈ ಬಂಗಲೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹಾಗಾಗಿ ಆ.1ರೊಳಗೆ ಬಂಗಲೆಯನ್ನು ತೆರವುಗೊಳಿಸಿ ಎಂದು ಕೇಂದ್ರ ಸರ್ಕಾರ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬುಧವಾರ ನೋಟಿಸ್​ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಬಂಗಲೆಯನ್ನು ತೆರವುಗೊಳಿಸಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.

    ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ಪ್ರಿಯಾಂಕಾ ಗಾಂಧಿ ವಾದ್ರಾ ಬಯಸಿದ್ದರೆ ನವದೆಹಲಿಯಲ್ಲೇ ಬೇರೊಂದು ಮನೆ ಹುಡುಕಿಕೊಂಡು ಅಲ್ಲಿಗೆ ಸ್ಥಳಾಂತರಗೊಳ್ಳಬಹುದಿತ್ತು. ಆದರೆ, ಅವರು ಹಾಗೆ ಮಾಡದೆ ಲಖನೌನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ.

    2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್​ಗೆ ಒಂದು ಬಲಿಷ್ಠವಾದ ತಳಹದಿ ನಿರ್ಮಿಸುವ ಉದ್ದೇಶದಿಂದ ಅವರು ಲಖನೌನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಪೊಲೀಸರ ಡಬಲ್ ಸ್ಟ್ಯಾಂಡರ್ಡ್: ಹಿಂದುಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ

    ಉತ್ತರ ಪ್ರದೇಶ ಕಾಂಗ್ರೆಸ್​ನ ಉಸ್ತುವಾರಿಯನ್ನೂ ಹೊತ್ತಿರುವ ಅವರು, ಅಲ್ಲಿನ ರಾಜಕೀಯ ವಲಯದಲ್ಲಿ ನಿಧಾನವಾಗಿ ಅಂಬೆಗಾಲು ಊರಲು ಆರಂಭಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರದ ಆಡಳಿತವನ್ನು ಟೀಕಿಸುತ್ತಾ, ಅದು ಕೈಗೊಳ್ಳುವ ನಿರ್ಧಾರಗಳನ್ನು ಪರಾಮರ್ಶೆಗೆ ಒಳಪಡಿಸುತ್ತಾ ಸಾಕಷ್ಟು ಮುಜುಗರ ಉಂಟು ಮಾಡುತ್ತಿದ್ದಾರೆ. ಕೋವಿಡ್​-19 ಲಾಕ್​ಡೌನ್​ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡುವುದರಿಂದ ಹಿಡಿದು ಸೋನಭದ್ರಾ ಹತ್ಯಾಕಾಂಡದವರೆಗೆ ಅವರು ಟೀಕೆಗಳ ಸುರಿಮಳೆಯನ್ನೇ ಗೈದಿದ್ದಾರೆ.

    ಇಂದಿರಾ ಅವರ ಮಾಮಿಯ ಮನೆಗೆ ಶಿಫ್ಟ್​: ಲಖನೌಗೆ ಸ್ಥಳಾಂತರಗೊಳ್ಳಲು ಪ್ರಿಯಾಂಕಾ ಗಾಂಧಿ ನಿರ್ಧರಿಸಿದ್ದೇ ಆದಲ್ಲಿ ಇಲ್ಲಿ ಅವರಿಗೆ ಸರ್ಕಾರಿ ಬಂಗಲೆ ಏನೂ ಸಿಗುವುದಿಲ್ಲ. ಹಾಗಾಗಿ ಇಲ್ಲಿ ಉಳಿದುಕೊಳ್ಳಲು ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ.

    ಈ ಹಿನ್ನೆಲೆಯಲ್ಲಿ ಅವರು ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರ ಮಾಮಿ ಶೀಲಾ ಕೌಲ್​ ಅವರಿದ್ದ ಗೋಖಲೆ ಮಾರ್ಗ್​ನ ಕೌಲ್​ ಹೌಸ್​ನಲ್ಲಿ ನೆಲೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷದ ಕೆಲಸದ ಮೇಲೆ ಉತ್ತರ ಪ್ರದೇಶಕ್ಕೆ ಬಂದಾಗಲೆಲ್ಲ ಅವರು ಈ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಈ ಮನೆಗೆ ಈಗ ಸುಣ್ಣಬಣ್ಣ ಬಳಿದು ಶೃಂಗಾರಗೊಳಿಸಲಾಗುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ.

    ಇಂದು ಡಿಕೆಶಿ ಪದಗ್ರಹಣ | ಮೂವರು ಕಾರ್ಯಾಧ್ಯಕ್ಷರಿಂದಲೂ ಅಧಿಕಾರ ಸ್ವೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts