More

    ಟ್ರೋಲ್​ಗೆ ಪ್ರಿಯಾಂಕಾ ಚೋಪ್ರಾ ಫಿದಾ!

    ಸಿನಿಮಾ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್​ಗೆ ಆಹಾರವಾಗುತ್ತಿರುತ್ತಾರೆ. ಅದ್ಯಾವ ಮಟ್ಟಿಗೆ ಅಂದರೆ, ಒಂದಷ್ಟು ಮಂದಿ ಟ್ರೋಲ್​ಗೆ ಬೇಸತ್ತು ಮತ್ತೆ ಜಾಲತಾಣಕ್ಕೆ ಬರುವುದೇ ಬೇಡ ಎಂದು ನಿರ್ಧರಿಸಿದ್ದೂ ಉಂಟು! ಆದರೆ, ಪ್ರಿಯಾಂಕಾ ಚೋಪ್ರಾ ಮಾತ್ರ ಅದೆಲ್ಲದಕ್ಕಿಂತ ವಿಭಿನ್ನ. ಟ್ರೋಲ್ ಆದರೂ, ನಗುಮೊಗದಲ್ಲೇ ಅದನ್ನು ಸ್ವೀಕರಿಸಿದ್ದಾರೆ.

    ಹೌದು, ಬಾಂಬ್ ರೀತಿಯಲ್ಲಿ ಬಟ್ಟೆ ಸುತ್ತಿಕೊಂಡು ನಿಂತಿರುವ ಫೋಟೋದಲ್ಲಿ ಇರುವವರು ನಟಿ ಪ್ರಿಯಾಂಕಾ ಚೋಪ್ರಾ. ಈ ಉಡುಪು ನೋಡಿದ ತಕ್ಷಣ ಕುತೂಹಲ ಮೂಡದೇ ಇರದು. ಆ ಕುತೂಹಲವನ್ನೇ ಟ್ರೋಲಿಗರು ಬಗೆಬಗೆ ರೀತಿಯಲ್ಲಿ ಬಿಂಬಿಸಿ ಟ್ರೆಂಡ್ ಮಾಡುತ್ತಿದ್ದಾರೆ. ಆ ಟ್ರೋಲ್​ಗಳನ್ನು ಟ್ವಿಟರ್​ನಲ್ಲಿ ಪ್ರಿಯಾಂಕಾ ಶೇರ್ ಮಾಡಿಕೊಂಡು, ‘ತುಂಬ ಮಜವಾಗಿದೆ. ನನ್ನ ಈ ದಿನವನ್ನು ಪರಿಪೂರ್ಣವಾಗಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ’ ಟ್ರೋಲ್​ಗೇ ಫಿದಾ ಆಗಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಇನ್​ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಮುಖ ಮತ್ತು ಕಾಲುಗಳೆರಡು ಮಾತ್ರ ಕಾಣುವಂಥ ಹಸಿರು ಬಣ್ಣದ ವಿಚಿತ್ರ ಬಟ್ಟೆ ತೊಟ್ಟಿದ್ದರು. ಆ ಫೋಟೋ ವೈರಲ್ ಆಗುತ್ತಿದ್ದಂತೆ, ಆಟೋ ರಿಕ್ಷಾದ ಹಾರ್ನ್, ಪ್ಯಾರಾಚೂಟ್, ಉಷ್ಟ್ರಪಕ್ಷಿ, ದೀಪಾವಳಿ ಬಾಂಬ್, ಪಫರ್ ಮೀನಿಗೆ ಹೋಲಿಸಿ ತಮಾಷೆ ಮಾಡುತ್ತಿದ್ದಾರೆ. ಅಂದಹಾಗೆ, ಬಟ್ಟೆ ವಿಚಾರದಲ್ಲಿ ಪ್ರಿಯಾಂಕಾ ಈ ಹಿಂದೆಯೂ ಸಾಕಷ್ಟು ಸಲ ಟ್ರೋಲ್​ಗೆ ಗುರಿಯಾಗಿದ್ದರು. –ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts