More

    ಸಲಾರ್​ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಡಾನ್ಸ್?

    ಬೆಂಗಳೂರು: ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್​ನಲ್ಲಿ ಸಿದ್ಧವಾಗುತ್ತಿರುವ ‘ಸಲಾರ್’ ಚಿತ್ರ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಶ್ರುತಿ ಹಾಸನ್ ಅವರನ್ನು ನಾಯಕಿಯನ್ನಾಗಿ ಘೋಷಿಸಿದ್ದ ಚಿತ್ರತಂಡ, ಸದ್ದಿಲ್ಲದೆ ಚಿತ್ರೀಕರಣವನ್ನೂ ಆರಂಭಿಸಿತ್ತು. ಇದೀಗ ಇದೇ ಬಳಗಕ್ಕೆ ಪ್ರಸ್ತುತ ಹಾಲಿವುಡ್​ನಲ್ಲಿಯೇ ಬಿಜಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆದಿದೆಯಂತೆ!

    ಹಾಗಾದರೆ, ‘ಸಲಾರ್’ ಚಿತ್ರದಲ್ಲಿ ಪ್ರಿಯಾಂಕಾಗೇನು ಕೆಲಸ? ಹೈ-ಆ್ಯಕ್ಷನ್​ ‘ಸಲಾರ್’ನಲ್ಲಿ ವಿಶೇಷ ಹಾಡೊಂದನ್ನು ಸೃಷ್ಟಿಸಲು ತಂಡ ಪ್ಲಾನ್ ಮಾಡಿದೆ. ಆ ಹಾಡಿಗೆ ಪ್ರಿಯಾಂಕಾ ಅವರನ್ನು ಕರೆತರುವ ಬಗ್ಗೆ ಚರ್ಚೆಯಾಗಿದೆ. ಒಂದು ಹಂತದ ಮಾತುಕತೆ ನಡೆದಿದೆ ಎಂಬ ಮಾತುಗಳು ಟಾಲಿವುಡ್ ಅಂಗಳದಿಂದ ಕೇಳಿಬಂದಿದ್ದು, ಇನ್ನೇನು ಅವರಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ, ಚಿತ್ರಕ್ಕೆ ಮತ್ತಷ್ಟು ಮೈಲೇಜ್ ದಕ್ಕಲಿದೆ.

    ಸಲಾರ್​ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಡಾನ್ಸ್?ಪ್ರಭಾಸ್​ಗೆ ಕನ್ನಡಿಗ ಮಧು ಗುರುಸ್ವಾಮಿ ವಿಲನ್: ಖಡಕ್ ಖಳನಟರ ಸಾಲಿನಲ್ಲಿರುವ ಕನ್ನಡದ ಮಧು ಗುರುಸ್ವಾಮಿ ‘ಸಲಾರ್’ ಸಿನಿಮಾ ತಂಡ ಸೇರಿಕೊಂಡಿ ದ್ದಾರೆ. ಪ್ರಭಾಸ್ ಎದುರು ಖಳನಾಗಿ ಅಬ್ಬರಿಸಲಿದ್ದಾರೆ. ಕನ್ನಡದಲ್ಲಿ ‘ಮಫ್ತಿ’, ‘ವಜ್ರಕಾಯ’ ಸೇರಿ ಹಲವು ಸಿನಿಮಾ ಮಾಡಿದ್ದ ಮಧು ಗುರುಸ್ವಾಮಿ, ಇದೇ ಮೊದಲ ಬಾರಿಗೆ ಹೊಂಬಾಳೆ ಫಿಲಂಸ್ ನಿರ್ವಿುಸುತ್ತಿರುವ ಚಿತ್ರದ ಭಾಗವಾಗಿದ್ದಾರೆ.

    ನದಿ ದಂಡೆಗೆ ಹೆಂಡತಿಯನ್ನು ಕರೆಸಿಕೊಂಡು ಸೆಕ್ಸ್ ಮಾಡಿದ; ಅದಾದ ಕೆಲವೇ ಗಂಟೆಗಳಲ್ಲಿ ಹೆಣವಾದ ಹೆಂಡತಿ!

    ಇದು ಸೆಕ್ಸ್​ ಚೇಂಜ್​ನ ಸೈಡ್ ಇಫೆಕ್ಟ್​: ಈಗ ಒಂದಕ್ಕೊಂದು ತಾಳೆ ಆಗುತ್ತಿಲ್ಲವಂತೆ..!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts