More

    ಡಿಸ್ನಿ ಹಾಟ್​ಸ್ಟಾರ್​ ಪ್ಲಸ್​ ಒಟಿಟಿಗೆ ಕೋಟಿ ಕೋಟಿ ಮೊತ್ತಕ್ಕೆ ಮಾರಾಟವಾಯ್ತು ಹಂಗಾಮಾ 2!

    ಮುಂಬೈ: ಬಹುಭಾಷಾ ನಟಿ, ಕನ್ನಡತಿ ಪ್ರಣೀತಾ ಸುಭಾಷ್ ಬಾಲಿವುಡ್​ಗೆ ಪದಾರ್ಪಣೆ ಮಾಡಿರುವುದು ಗೊತ್ತಿರುವ ವಿಚಾರ. ಈಗಾಗಲೇ ಅಜಯ್ ದೇವಗನ್ ಜತೆಗೆ ‘ಭುಜ್ – ದಿ ಪ್ರೈಡ್ ಆಫ್ ಇಂಡಿಯಾ’ ಚಿತ್ರದಲ್ಲಿ ನಟಿಸಿದ್ದಾರವರು. ಅದೇ ರೀತಿ ‘ಹಂಗಾಮಾ 2’ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಇದೀಗ ವಿಷಯ ಏನೆಂದರೆ, ಈ ಎರಡು ಸಿನಿಮಾಗಳ ಪೈಕಿ ‘ಹಂಗಾಮಾ 2’ ಸಿನಿಮಾ ಇನ್ನೇನು ಶೀಘ್ರದಲ್ಲಿ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಅಷ್ಟೇ ಅಲ್ಲ 30 ಕೋಟಿಯ ದೊಡ್ಡ ಮೊತ್ತಕ್ಕೆ ಈ ಚಿತ್ರ ಸೋಲ್ಡ್​ ಔಟ್ ಆಗಿದೆ.

    ಇದನ್ನೂ ಓದಿ: ಗಾಯಕಿ ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ರು ಉತ್ತರ

    ಪ್ರಿಯದರ್ಶನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹಂಗಾಮಾ 2’ ಹಾಸ್ಯಪ್ರಧಾನ ಸಿನಿಮಾ. ಈ ಚಿತ್ರದಲ್ಲಿ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ, ಪ್ರಣೀತಾ, ಮಿಜಾನ್ ಜೆಫ್ರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ, ಶಿಲ್ಪಾ ಶೆಟ್ಟಿಗಿದು ಕಂಬ್ಯಾಕ್ ಚಿತ್ರವಾದರೆ, ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಪ್ರಣೀತಾ ಅವರ ಮೊದಲ ಚಿತ್ರವೂ ಇದೇ. ಇನ್ನೇನು ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ‘ಹಂಗಾಮಾ 2’ ಚಿತ್ರ ಸ್ಟ್ರೀಮ್ ಆಗಲಿದೆ. ಯಾವಾಗ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದ್ದು, ಇದೀಗ ವಹಿವಾಟಿನ ವಿಚಾರ ಹೊರಬಿದ್ದಿದೆ.

    ಕೇವಲ ಒಟಿಟಿಗಷ್ಟೇ 30ಕೋಟಿಗೆ ಮಾರಾಟವಾಗಿದ್ದು, ಇನ್ನೂ ಟಿವಿ ಹಕ್ಕುಗಳನ್ನು ಸೇರಿಸಿದರೆ 36 ಕೋಟಿ ಗಳಿಕೆ ಈ ಚಿತ್ರದ್ದು. ಇನ್ನುಳಿದಂತೆ ಆಡಿಯೋ ಸೇರಿ ಅನ್ಯ ಮೂಲಗಳ ಆದಾಯವನ್ನೂ ಲೆಕ್ಕ ಹಾಕುವುದಾದರೆ, 50 ಕೋಟಿ ರೂಪಾಯಿ ಈ ಚಿತ್ರದ ಬೊಕ್ಕಸಕ್ಕೆ ಬಂದು ಬಿದ್ದಿದೆ.

    ಇದನ್ನೂ ಓದಿ: ಶಾರುಖ್​ ಖಾನ್ ‘ಪಠಾಣ್’ ಚಿತ್ರದಲ್ಲಿ ಪ್ರಭಾಸ್​ಗೂ ಇದೆಯಂತೆ ವಿಶೇಷ ಪಾತ್ರ!

    ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ ಸಾಲುಸಾಲು ಚಿತ್ರಗಳನ್ನು ತನ್ನ ವೇದಿಕೆಯಲ್ಲಿ ಬಿಡುಗಡೆ ಮಾಡುವುದಾಗಿ ಡಿಸ್ನಿ ಹಾಟ್​ಸ್ಟಾರ್ ಪ್ಲಸ್ ಹೇಳಿಕೊಂಡಿತ್ತು. ಅದರಂತೆ ‘ದಿಲ್​ಬೇಚಾರ’, ‘ಲಕ್ಷ್ಮೀ ಬಾಂಬ್’, ‘ಸಡಕ್ 2’, ‘ಖುದಾ ಹಫೀಸ್’, ಲೂಟ್ ಕೇಸ್’… ಚಿತ್ರಗಳು ಬಿತ್ತರವಾಗಿದ್ದವು. ಇದೀಗ ಈ ವರ್ಷವೂ ಇನ್ನೇನು ಹಲವು ಸಿನಿಮಾಗಳನ್ನು ಘೋಷಿಸಿಕೊಳ್ಳಲಿದೆ. ಆ ಪೈಕಿ ‘ಭೂತ್ ಪೊಲೀಸ್’, ‘ಮಿಮಿ’, ‘ಶಿದ್ದತ್’ ಸೇರಿ ಹಲವು ಚಿತ್ರಗಳು ಡಿಸ್ನಿಯಲ್ಲಿ ಸ್ಟ್ರೀಮ್ ಆಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts