More

  ಕನ್ನಡದಲ್ಲೇ ಮನವಿ ಮಾಡಿದ ಕಣ್ಸನ್ನೆ ಬೆಡಗಿ … ‘ವಿಷ್ಣು ಪ್ರಿಯ’ ಚಿತ್ರಕ್ಕೆ ಹಾರೈಸಲು ಕೋರಿದ ಪ್ರಿಯಾ ವಾರಿಯರ್

  ತಮ್ಮ ಕಣ್ಸನ್ನೆಯಿಂದ ರಾತ್ರೋರಾತ್ರಿ ಜನಪ್ರಿಯವಾದವರು ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಅವರ ಕಣ್ಸನ್ನೆ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಬರೀ ಮಲಯಾಳಂ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಸೆನ್ಸೇಶನ್ ಆಗಿಬಿಟ್ಟರು ಪ್ರಿಯಾ.

  ಈಗ್ಯಾಕೆ ಪ್ರಿಯಾ ವಿಷಯ ಎಂದರೆ ಈಗ ಪ್ರಿಯಾ, ಶ್ರೇಯಸ್ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ವಿಷ್ಣು ಪ್ರಿಯಾ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಈಗ ಚಿತ್ರದ ಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯಾ ಮೂಲಕ ಏಪ್ರಿಲ್ 5ರಂದು ಬಿಡುಗಡೆಯಾಗಲಿದೆ. ಈ ವಿಷಯವಾಗಿ ಪ್ರಿಯಾ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ವಿಶೇಷ ಎಂದರೆ, ಪ್ರಿಯಾ ಕನ್ನಡದಲ್ಲೇ ಪೋಸ್ಟ್ ಮಾಡಿರುವುದು.

  ‘ನನ್ನ ಮೊದಲನೇ ಕನ್ನಡದ ಚಿತ್ರವಾದ ‘ವಿಷ್ಣು ಪ್ರಿಯಾ’ದ ಸ್ಟ್ ಲುಕ್ ಪೋಸ್ಟರ್ ಇದೇ ಏಪ್ರಿಲ್ 5ಕ್ಕೆ ಬಿಡುಗಡೆಯಾಗಲಿದೆ. ಎಲ್ಲರೂ ದಯವಿಟ್ಟು ಶೇರ್ ಮಾಡಿ ಮತ್ತು ಸಪೋರ್ಟ್ ಮಾಡಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮತ್ತು ನನ್ನ ತಂಡದ ಮೇಲೆ ಇರಲಿ …’ ಎಂದು ಪ್ರಿಯಾ ಪೋಸ್ಟ್ ಹಾಕಿದ್ದಾರೆ.

  ‘ವಿಷ್ಣು ಪ್ರಿಯಾ’ ಚಿತ್ರವನ್ನು ಹಿರಿಯ ನಿರ್ಮಾಪಕ ಕೆ. ಮಂಜು ನಿರ್ಮಿಸುತ್ತಿದ್ದು, ವಿ.ಕೆ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಪಡ್ಡೆ ಹುಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಕೆ. ಮಂಜು ಅವರ ಮಗ ಶ್ರೇಯಸ್, ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ.

  ಮತ್ತೆ ಯಡವಟ್ಟು ಮಾಡಿಕೊಂಡ ‘ಐರಾವತ’ ಬೆಡಗಿ … ಕಾಪಿ-ಪೇಸ್ಟ್ ಮಾಡಿ ನೆಟ್ಟಿಗರಿಂದ ಟ್ರೋಲ್ ಆದ ಊರ್ವಶಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts