More

    ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳನ್ನು ಹೊರಹಾಕಿದ ಖಾಸಗಿ ಶಾಲೆ ಆಡಳಿತ ಮಂಡಳಿ

    ಬೆಳಗಾವಿ: ಶುಲ್ಕ ಪಾವತಿ ಮಾಡದ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಖಾಸಗಿ ಶಾಲೆ ಆಡಳಿತ ಮಂಡಳಿ ಮಕ್ಕಳನ್ನು ತರಗತಿ ಕೊಠಡಿಯಿಂದ ಹೊರಗೆ ಹಾಕಿ ಅಮಾನವೀಯತೆ ಮೆರೆದಿದೆ.

    ಸಂತ ಫ್ರಾನ್ಸಿಸ್​ ಖಾಸಗಿ ಶಾಲೆಯ ಆಡಳಿತ ಮಂಡಳಿ ಅಂದಾಜು 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಹಾಕಿ ವಿವಾದ ಉಂಟು ಮಾಡಿದೆ.

    ಮಾರ್ಚ್​ 16ರ ರೊಳಗೆ ಎಲ್ಲ ಪರೀಕ್ಷೆಗಳನ್ನು ಮುಗಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿರುವುದರಿಂದ ಆಡಳಿತ ಮಂಡಳಿ ಬಾಕಿ ಶುಲ್ಕವನ್ನು ಪಾವತಿ ಮಾಡುವಂತೆ ಒತ್ತಡ ಹೇರುತ್ತಿದೆ. ಅಲ್ಲದೆ ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ ಎಂದು ಕೂಡ ಬೆದರಿಕೆ ಹಾಕಲಾಗಿದೆ ಎಂದು ಪಾಲಕರು ದೂರಿದ್ದಾರೆ.

    ಶುಲ್ಕ ಪಾವತಿ ಮಾಡಲು ಅಲ್ಪ ಸಮಯ ನೀಡುವಂತೆ ಕೋರಿದರೂ ಆಡಳಿತ ಮಂಡಳಿ ಒಪ್ಪುತ್ತಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

    ಒತ್ತುವರಿ ಮಾಡಿದ್ದಾರೆಂದು ರೈತನ ನಾಲ್ಕು ಎಕರೆ ತೋಟದಲ್ಲಿ ಹೂವು ಬಿಟ್ಟ ಕಾಫಿ ಗಿಡಗಳನ್ನು ಕತ್ತರಿಸಿದ ಅಧಿಕಾರಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts