More

    ಜೂ.1ರಿಂದ ಖಾಸಗಿ ಬಸ್‌ಗಳು ರಸ್ತೆಗೆ

    ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಿಟಿ, ಸರ್ವೀಸ್, ಎಕ್ಸ್‌ಪ್ರೆಸ್ ಖಾಸಗಿ ಬಸ್‌ಗಳು ಜೂನ್ 1ರಿಂದ ಸೀಮಿತ ಸಂಖ್ಯೆಯಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ ಷರತ್ತಿನೊಂದಿಗೆ ಭಾಗಶಃ ಕಾರ್ಯಾರಂಭಿಸಲಿವೆ.
    ಸರ್ಕಾರ ಬಸ್ ಕಾರ್ಯಾಚರಣೆಗೆ ಈಗಾಗಲೇ ಅನುಮತಿ ನೀಡಿರುವ ನಿಟ್ಟಿನಲ್ಲಿ ಜಿಲ್ಲಾ ಸಾರಿಗೆ ಪ್ರಾಧಿಕಾರ ನಡೆಸಿದ ದ.ಕ ಜಿಲ್ಲಾ ಬಸ್ ಮಾಲೀಕರ ಸಂಘದವರ ಸಭೆಯಲ್ಲಿ ಈ ಸೂಚನೆ ಸಿಕ್ಕಿದೆ.
    ಬಸ್ಸಿನಲ್ಲಿ 30 ಪ್ರಯಾಣಿಕರು ಮಾತ್ರ ಪ್ರಯಾಣಿಸಬೇಕು, ಪ್ರತಿಯೊಬ್ಬ ಪ್ರಯಾಣಿಕ, ನಿರ್ವಾಹಕ ಮತ್ತು ಚಾಲಕ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಇರಿಸಬೇಕೆಂಬ ಷರತ್ತುಗಳಿವೆ, ಆದರೆ ಪ್ರತಿ ಪ್ರಯಾಣಿಕರ ದೇಹದ ಉಷ್ಣತೆ ಅಳೆಯುವುದು ನಮಗೆ ಕಷ್ಟ ಎನ್ನುವುದನ್ನು ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.

    ಪ್ರಾರಂಭದಲ್ಲಿ ಕೆಲವು ಬಸ್: ಪ್ರಾರಂಭಿಕ ಹಂತದಲ್ಲಿ ಕೆಲವೇ ಬಸ್ಸುಗಳ ಓಡಾಟವನ್ನು ಪ್ರಾರಂಭಿಸಿ, ಪ್ರಯಾಣಿಕರ ಬೇಡಿಕೆ ಮೇರೆಗೆ, ಜನಸಂದಣಿಯಾಗದಂತೆ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಬಸ್ಸುಗಳ ಸಂಖ್ಯೆ ಕ್ರಮೇಣ ಜಾಸ್ತಿ ಮಾಡಲು ಖಾಸಗಿ ಬಸ್ಸುಗಳ ಮಾಲೀಕರಿಗೆ ಸಭೆಯಲ್ಲಿ ತಿಳಿಸಲಾಗಿದೆ.
    ಪ್ರಯಾಣಿಕರು ಗುರುತಿನ ಚೀಟಿ/ಆಧಾರ್ ಕಾರ್ಡ್ ಹೊಂದಿರಬೇಕು. ವಾಹನಗಳ ಮಾರ್ಗಸೂಚಿ ಪ್ರಕಾರ ಬಸ್ ಸ್ಯಾನಿಟೈಸೇಶನ್, ಡ್ರೈವರ್/ನಿರ್ವಾಹಕರು ಹ್ಯಾಂಡ್‌ಗ್ಲೌಸ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ ವೈದ್ಯಕೀಯ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್ ತಿಳಿಸಿದ್ದಾರೆ.

    ಮಂಗಳೂರು-ಉಡುಪಿ ನಡುವೆ: ಮಂಗಳೂರು – ಉಡುಪಿ ಮಧ್ಯೆ ಸರ್ವೀಸ್, ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ ಜೂನ್ 1ರಿಂದ ಶುರು ಮಾಡುವ ಇರಾದೆ ಇದೆ, ಆದರೆ ನಮಗಿನ್ನೂ ಸರ್ಕಾರದಿಂದ ಪರಿಷ್ಕೃತ ಟಿಕೆಟ್ ದರ ಬಂದಿಲ್ಲ ಎಂದು ರಾಜ್ಯ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ. ಹಳೇ ದರದಂತೆ 30 ಜನರನ್ನು ಹಾಕಿಕೊಂಡು ಬಸ್ ಓಡಿಸಲಾಗದು. ಹೊಸ ದರ ಬಾರದಿದ್ದರೆ ನಾವೇ ದರ ಏರಿಕೆ ಮಾಡಿ ಬಸ್ ಸಂಚಾರ ಆರಂಭಿಸುವುದಾಗಿ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಉಡುಪಿಯಲ್ಲೂ ಸಿದ್ಧತೆ
    ಉಡುಪಿ: ಜಿಲ್ಲೆಯಲ್ಲಿ ಜೂ.1ರಿಂದ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಿಸಲು ಕೆನರಾ ಬಸ್ ಮಾಲಕರ ಸಂಘ ನಿರ್ಧರಿಸಿದ್ದು, ಶನಿವಾರ ನಡೆಯುವ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ. ಕುಂದಾಪುರ-ಉಡುಪಿ-ಮಂಗಳೂರಿಗೆ ಎಕ್ಸ್‌ಪ್ರೆಸ್ ಹಾಗೂ ಸರ್ವೀಸ್ ಬಸ್‌ಗಳು ಆರಂಭಗೊಳ್ಳಲಿವೆ. ಉಡುಪಿ- ಕುಂದಾಪುರ- ಕಾರ್ಕಳ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಉಡುಪಿ- ಕುಂದಾಪುರ ಮಾರ್ಗದಲ್ಲಿ 6 ಖಾಸಗಿ ಭಾರತಿ ಬಸ್ ಸೇವೆ ಮುಂದುವರಿದಿದ್ದು, ಆಯ್ದ ಮಾರ್ಗಗಳಲ್ಲಿ ವಾರದಿಂದ 10 ಸಿಟಿ ಬಸ್ ಸೇವೆಯೂ ನಡೆಯುತ್ತಿದೆ. ಜೂ.1ರಿಂದ 20 ಬಸ್‌ಗಳು ಸಂಚರಿಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts