More

  ಕ್ಷಯರೋಗ ಮುಕ್ತ ಭಾರತಕ್ಕೆ ಕೈ ಜೋಡಿಸಿ

  ಸಂಡೂರು: ಪ್ರಧಾನ ಮಂತ್ರಿಗಳ ಆಶಯದಂತೆ 2025ಕ್ಕೆ ಕ್ಷಯರೋಗ ಮುಕ್ತ ಭಾರತ ನಿರ್ಮಾಣಕ್ಕೆ ಸರ್ವ ವಿಧಾನದಲ್ಲೂ ಎಲ್ಲರೂ ಕೈ ಜೋಡಿಸಲು ಸಿದ್ಧ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಾಯಣ್ಣ ತಿಳಿಸಿದರು.

  ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೆಎಚ್‌ಪಿಟಿ ಸಂಸ್ಥೆ ಬಳ್ಳಾರಿ, ಗ್ರಾಪಂ, ಸರ್ಕಾರಿ ಪ್ರೌಢಶಾಲೆ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಕ್ಷಯರೋಗ ನಿರ್ಮೂಲನಾ ಗ್ರಾಮ ರೂಪಿಸುವ ಕುರಿತು ಶನಿವಾರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯ ತ್ವರಿತವಾಗಿದೆ ಎಂದರು.

  ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ರೋಗ ಪತ್ತೆ ಹಚ್ಚುವ ಕೆಲಸವನ್ನು ಮುಂದುವರಿಸಲಾಗುವುದು. ಕ್ರಮೇಣ ಹೊಸ ರೋಗಗಳು ಕಡಿಮೆಯಾಗಬಹುದು. ಸೂಕ್ತ ಡಾಟ್ಸ್ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರ ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು. ಹಸಿವು ಇಲ್ಲದಿರುವವರು ಸ್ವಯಂ ಪ್ರೇರಣೆಯಿಂದ ತಪಾಸಣೆ ಒಳಗಾಗಬೇಕು ಎಂದು ಸಲಹೆ ನೀಡಿದರು.

  ನಿ-ಕ್ಷಯ್ ಮಿತ್ರ ಯೋಜನೆಯಂತೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಆಹಾರ ಸಾಮಗ್ರಿಗಳನ್ನು ನೀಡಲು ಸಮುದಾಯ ಮುಂದಾಗಬೇಕು. ಕ್ಷಯ ರೋಗವನ್ನು ದೂರ ಇಡಬೇಕೇ ಹೊರತು ಕ್ಷಯರೋಗಿಯನ್ನಲ್ಲ ಎಂದು ತಿಳಿಸಿದರು.

  ಕೆಎಚ್‌ಪಿಟಿ ಸಂಸ್ಥೆಯಿಂದ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಪುಷ್ಟಿ ಪೌಡರ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ಗ್ರಾಪಂ ಸದಸ್ಯ ಗಣೇಶ್, ಆಪ್ತ ಸಮಾಲೋಚಕ ಪ್ರಶಾಂತ್, ಆರೋಗ್ಯ ನಿರೀಕ್ಷಣಾಧಿಕಾರಿ ಇಸ್ಮಾಯಿಲ್, ಕೆಎಚ್‌ಪಿಟಿ ಸಂಯೋಜಕ ರಾಜು, ಪ್ರೌಢ ಶಾಲೆ ಶಿಕ್ಷಕ ರಾಜಶೇಖರ್, ಸಿಎಚ್‌ಒ ಎರ‌್ರಿಸ್ವಾಮಿ, ರೇಣುಕಾ, ಆಶಾ ಕಾರ್ಯಕರ್ತೆ ಮಾಂತಮ್ಮ, ಜ್ಯೋತಿ, ಶ್ರೀದೇವಿ, ಲತಾ ಇದ್ದರು.

  See also  ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts