More

    VIDEO: ವಿಶ್ವ ಚಾಂಪಿಯನ್​ ಸಿಂಧು ರಕ್ಷಾಬಂಧನ​ ಸಂದೇಶಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ..

    ಬೆಂಗಳೂರು: ರಕ್ಷಾ ಬಂಧನ್​ ಹಬ್ಬವನ್ನು ದೇಶದಾದ್ಯಂತ ಆಗಸ್ಟ್​ 3 (ಸೋಮವಾರ) ಆಚರಿಸಲಾಯಿತು. ಕರೊನಾ ವೈರಸ್​ ಅಟ್ಟಹಾಸದ ನಡುವೆಯೂ ಅಣ್ಣ-ತಮ್ಮಂದಿರಿಗೆ ಸಹೋದರಿಯರು ರಾಖಿ ಕಟ್ಟಿ, ಸಹಿ ತಿನಿಸಿ ಸಂಭ್ರಮಿಸಿದರು. ವಿಶ್ವ ಚಾಂಪಿಯನ್​ ಪಿವಿ ಸಿಂಧು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಹಬ್ಬಕ್ಕೆ ಶುಭಾಶಯ ಕೋರಿ ಟ್ವಿಟರ್​ನಲ್ಲಿ ವಿಡಿಯೋ ಪ್ರಕಟಿಸಿದ್ದರು. ಇದಕ್ಕೆ ಪ್ರಧಾನಿ ಪ್ರತಿಕ್ರಿಯಿಸಿ ಧನ್ಯವಾದ ಅಪಿರ್ಸಿದ್ದಾರೆ. ದೇಶಕ್ಕೆ ಹಲವು ಉಡುಗೊರೆ ನೀಡಿದ್ದೀರಿ, ಮುಂದಿನ ದಿನಗಳಲ್ಲೂ ಮುಂದುವರಿಸಿ, ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮಾಜಿ ಅಥ್ಲೀಟ್ ಪಿಟಿ ಉಷಾ, ಷಟ್ಲರ್ ಸೈನಾ ನೆಹ್ವಾಲ್, ಭಾರತ ಮಹಿಳಾ ಹಾಕಿ ತಂಡದ ನಾಯಕ ರಾಣಿ ರಾಂಪಾಲ್, ಅಥ್ಲೀಟ್ ಹಿಮಾ ದಾಸ್ ಸೇರಿದಂತೆ ಮಹಿಳಾ ಕ್ರೀಡಾಪಟುಗಳು ಕಳುಹಿಸಿರುವ ರಕ್ಷಾ ಬಂಧನ ಸಂದೇಶಕ್ಕೂ ಮೋದಿ ಪ್ರತಿಕ್ರಿಯಿಸಿ ಧನ್ಯವಾದ ಅರ್ಪಿಸಿದ್ದಾರೆ.

    ಇದನ್ನೂ ಓದಿ:

    ಕರೊನಾ ವೈರಸ್​ ಭೀತಿಯಿಂದಾಗಿ 2020ರ ಟೋಕಿಯೊ ಒಲಿಂಪಿಕ್ಸ್​ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಇದರಿಂದ ಕ್ರೀಡಾಪಟುಗಳು ಮಾತ್ರ ತಮ್ಮ ತಾಲೀಮು ಮುಂದುವರಿಸಿದ್ದಾರೆ. ರಾಖಿ ಹಬ್ಬದ ಪ್ರಯುಕ್ತ ಪ್ರಧಾನಿಗೆ ವಿಡಿಯೋ ಸಂದೇಶ ಕಳುಹಿಸಿದ ಸಿಂಧು, ರಕ್ಷಾ ಬಂಧನದ ಶುಭಾಶಯಗಳು ಸರ್​, ನೀವು ದೇಶಕ್ಕಾಗಿ ಸಾಕಷ್ಟು ಸೇವೆ ಮಾಡಿರುವಿರಿ. ಕೋವಿಡ್​-19 ರಿಂದಾಗಿ ಈ ವರ್ಷ ಒಲಿಂಪಿಕ್ಸ್​ ನಡೆಯಲಿಲ್ಲ. ಮುಂದಿನ ವರ್ಷ ನಿಗದಿಯಾಗಿದ್ದು, ಮತ್ತಷ್ಟು ಪದಕಗಳೊಂದಿಗೆ ನಿಮಗೆ ಉಡುಗೊರೆ ನೀಡಲಿದ್ದೇವೆ ಎಂದು ಸಿಂಧು ಹೇಳಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ, ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು, ದೇಶಕ್ಕೆ ನೀವು ಈಗಾಗಲೇ ಹಲವು ಉಡುಗೊರೆ ನೀಡಿದ್ದೀರಿ, ಇದೇ ಲಯ ಮುಂದುವರಿಸುತ್ತೀರಿ ಎಂದು ಭಾವಿಸಿದ್ದೇನೆ. ಪ್ರತಿಯೊಬ್ಬ ಭಾರತೀಯ ನಿಮ್ಮ ಬಗ್ಗೆ ಹೆಮ್ಮೆಪಡುತ್ತಾನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ:

    25 ವರ್ಷದ ಪಿವಿ ಸಿಂಧು ಕಳೆದ ವರ್ಷ ಸ್ವಿರ್ಜಲೆಂಡ್​ನಲ್ಲಿ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು. ಈ ಸಾಧನೆ ಮಾಡಿದ ಭಾರತ ಮೊದಲ ಷಟ್ಲರ್​ ಎನಿಸಿದ್ದಾರೆ. ಒಟ್ಟಾರೆ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 5 (1 ಸ್ವರ್ಣ, 2 ಬೆಳ್ಳಿ, 2 ಕಂಚು) ಪದಕ ಗೆದ್ದಿರುವ ವಿಶ್ವದ ಏಕೈಕ ಮಹಿಳಾ ಷಟ್ಲರ್​ ಎಂಬ ಹಿರಿಮೆ ಹೊಂದಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲೂ ಸಿಂಧು ರಜತ ಪದಕಕ್ಕೆ ಭಾಜನರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts