More

    ನರೇಂದ್ರ ಮೋದಿ ಅಪರೂಪದ ಪ್ರಧಾನಮಂತ್ರಿ

    ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ರೈತರ ಹಾಗೂ ಗ್ರಾಮೀಣ ಜನರ ಭವಿಷ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೂಲಕ ಪ್ರತಿ ಗ್ರಾಮಗಳಿಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

    ಗೋಕಾಕ ತಾಲೂಕಿನ ಸುಲಧಾಳ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಒಬ್ಬ ಪ್ರಧಾನಿಯಾಗಿ ಜನಪರ, ಅಭಿವೃದ್ಧಿಪರ ಕೆಲಸಗಳನ್ನು ಯಾವ ರೀತಿ ಮಾಡಬಹುದು ಎಂಬುದನ್ನು ನರೇಂದ್ರ ಮೋದಿ ಅವರು ತೋರಿಸಿದ್ದಾರೆ. ಅನೇಕ ಐತಿಹಾಸಿಕ ನಿರ್ಧಾರ ಕೈಗೊಂಡು ದೇಶವನ್ನು ಆರ್ಥಿಕ ಸಾಮಾಜಿಕವಾಗಿ ಬಲಪಡಿಸಿ, ಪ್ರಪಂಚದ ಮುಂಚೂಣಿ ರಾಷ್ಟ್ರವನ್ನಾಗಿಸಿದ್ದಾರೆ. ಆರ್ಟಿಕಲ್ 370 ಹಾಗೂ ತ್ರಿವಳಿ ತಲಾಖ್ ರದ್ದು, ರಾಮ ಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯ್ದೆ, ಆತ್ಮನಿರ್ಭರ್ ಭಾರತದಂತಹ ಅನೇಕ ಪ್ರಮುಖ ಕ್ರಮ ಹಾಗೂ ಕಾನೂನು ಜಾರಿ ಮಾಡಿದ್ದಾರೆ. ಮದ್ಯವರ್ತಿಗಳ ಹಾವಳಿ ಇಲ್ಲದೆಯೂ ಸೌಲಭ್ಯಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತೆ ಮಾಡಿದ್ದಾರೆ. ಜನರು ಲಾಭ ಪಡೆಯಬೇಕು ಎಂದು ಕವಟಗಿಮಠ ಕೋರಿದರು.

    ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರಗೌಡ ಗೌಡಪ್ಪಗೋಳ, ಉಪಾಧ್ಯಕ್ಷ ವೀರನಗೌಡ ಈಶ್ವರಪ್ಪಗೋಳ, ಗ್ರಾಪಂ ಅಧ್ಯಕ್ಷ ಲಗಮಣ್ಣ ತಳವಾರ, ಮಾರುತಿ ಗೋಡಲಕುಂದರಗಿ, ರುದ್ರಪ್ಪ ಬಸ್ಸಾಪುರೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts