More

    ಲೋಕಸಭೆಯಲ್ಲಿ ಅನಂತ್​ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದು…

    ನವದೆಹಲಿ: ಬಿಜೆಪಿ ಸಂಸದ ಅನಂತ್​ ಕುಮಾರ್ ಹೆಗಡೆ ಅವರು ಇತ್ತೀಚೆಗೆ ಸ್ವಾಂತಂತ್ರ್ಯ ಹೋರಾಟಗಾರರ ಬಗ್ಗೆ ಆಡಿದ ಮಾತುಗಳು ವಿಪರೀತ ವಿವಾದ ಸೃಷ್ಟಿಸಿದೆ.

    ಮಹಾತ್ಮ ಗಾಂಧೀಜಿಯವರನ್ನು ಅನಂತ್​ಕುಮಾರ್ ಹೆಗಡೆ ಅವಹೇಳನ ಮಾಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್​ ಸೇರಿ ಹಲವರು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ಅವರಿಗೆ ಬಿಜೆಪಿ ಹೈಕಮಾಂಡ್​ ಶೋಕಾಸ್​ ನೋಟಿಸ್​ ನೀಡಿತ್ತು.
    ಅದಕ್ಕೆ ಉತ್ತರಿಸಿದ್ದ ಅನಂತ್​ಕುಮಾರ್​ ಹೆಗಡೆ, ನಾನು ಗಾಂಧಿಯ ಹೆಸರನ್ನು ಉಲ್ಲೇಖಿಸಿಲ್ಲ, ಅವರಿಗೆ ಅವಮಾನ ಆಗುವ ಮಾತುಗಳನ್ನು ಭಾಷಣದಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಉತ್ತರಿಸಿದ್ದರು.

    ಆದರೆ ಪ್ರತಿಪಕ್ಷಗಳು ಮಾತ್ರ ಅನಂತ್ ಕುಮಾರ್ ಹೆಗಡೆ ಮಹಾತ್ಮಾ ಗಾಂಧಿಯನ್ನು ಅವಮಾನಿಸಿದ್ದಾರೆ ಪ್ರತಿಭಟಿಸುತ್ತಲೇ ಇದೆ. ಹೆಗಡೆ ಬೇಷರತ್​ ಕ್ಷಮೆ ಕೋರಬೇಕು ಎಂದು ಆಗ್ರಹಿಸುತ್ತಿದ್ದಾರೆ.

    ಹಾಗೇ ಇಂದೂ ಕೂಡ ಸಂಸತ್ತಿನಲ್ಲಿ ಕಾಂಗ್ರೆಸ್​ ನೇತೃತ್ವದಲ್ಲಿ ಪ್ರತಿಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

    ಮೊದಲಿಗೆ ಪ್ರತಿಪಕ್ಷದವರ ಬಳಿ, ನಿಮ್ಮ ಆರೋಪಗಳು ಮುಗಿದವಾ? ಇನ್ನೇನಾದರೂ ಇದೆಯಾ ಎಂದು ಮೋದಿಯವರು ಪ್ರಶ್ನಿಸಿದರು. ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌಧರಿ ಮೋದಿಯವರಿಗೆ ಉತ್ತರ ನೀಡುತ್ತ, ಇದಿನ್ನೂ ಟ್ರೇಲರ್​ ಅಷ್ಟೇ..ಉಳಿದಿದ್ದು ಇನ್ನೂ ಇದೆ ಎಂದು ಹೇಳಿದರು.

    ಮೋದಿ ಮಾತನಾಡಲು ಎದ್ದು ನಿಲ್ಲುತ್ತಲೇ ವಿಪಕ್ಷಗಳ ಕಡೆಯಿಂದ ಮಹಾತ್ಮ ಗಾಂಧಿ ಅಮರ್​ ರಹೇ ಎನ್ನುವ ಘೋಷಣೆಗಳು ಹೆಚ್ಚಾದವು.

    ರಂಜನ್​ ಚೌಧರಿ ಅವರ ಉತ್ತರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಮೋದಿಯವರು, ಮಹಾತ್ಮ ಗಾಂಧಿ ನಿಮಗೆಲ್ಲ ಟ್ರೇಲರ್​ ಆಗಿರಬಹುದು. ಆದರೆ ನಮಗೆ ಅವರೇ ಜೀವನ ಎಂದು ಹೇಳಿದರು.

    ಅದಾದ ಬಳಿಕ ಮೋದಿಯವರು ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಲೋಕಸಭಾ ಚುನಾವಣೆಯ ಸೋಲನ್ನು ನೆನಪಿಸಿದರು.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts