More

    ಗಾಂಧೀಜಿ, ಲಾಲ್​ ಬಹದೂರ್​ ಶಾಸ್ತ್ರಿ ಜಯಂತಿಗೆ ಪ್ರಧಾನಿ, ರಾಷ್ಟ್ರಪತಿ ಶುಭಾಶಯ: ಬಾಪೂ ಸ್ಮಾರಕಕ್ಕೆ ಮೋದಿ​ ಪುಷ್ಪನಮನ

    ನವದೆಹಲಿ: ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಟ್ವೀಟ್​ ಮೂಲಕ ಶುಭಕೋರಿದ್ದಾರೆ.

    ಗಾಂಧಿ ಜಯಂತಿಯಂದು ನಾವು ಪ್ರೀತಿಯ ಬಾಪುವಿಗೆ ತಲೆಬಾಗಬೇಕು. ಗಾಂಧಿ ಅವರ ಜೀವನದಿಂದ ಮತ್ತವರ ಚಿಂತನೆಗಳಿಂದ ಸಾಕಷ್ಟು ಕಲಿಯಬೇಕಿದೆ. ಸಮೃದ್ಧ ಮತ್ತು ಸಹಾನುಭೂತಿಯ ಭಾರತವನ್ನು ಸೃಷ್ಟಿಸಲು ಬಹುಶಃ ಬಾಪು ಅವರ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಿರುತ್ತವೆ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಶುಭಕೋರಿದ್ದಾರೆ.

    ಲಾಲ್​ ಬಹದೂರ್​ ಶಾಸ್ತ್ರಿ ಅವರು ವಿನಯ ಸಂಪನ್ನ ಮತ್ತು ಅಚಲ ವ್ಯಕ್ತಿತ್ವ ಉಳ್ಳವರು. ಸರಳತೆಯನ್ನು ನಿರೂಪಿಸಿ, ದೇಶದ ಕಲ್ಯಾಣಕ್ಕಾಗಿ ಜೀವಿಸಿದವರು. ಭಾರತಕ್ಕಾಗಿ ಎಲ್ಲವನ್ನು ದುಡಿದ ಕೃತಜ್ಞತಾ ಭಾವವಾಗಿ ಅವರ ಜಯಂತಿಯಂದು ನಾವು ಅವರನ್ನು ನೆನೆಯೋಣ ಎಂದು ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

    ಮಾನವೀಯತೆಯ ಸ್ಪೂರ್ತಿ
    ರಾಷ್ಟ್ರದ ಜನತೆಯ ಪರವಾಗಿ ಗಾಂಧಿ ಜಯಂತಿಯಂದು ಬಾಪುವಿಗೆ ಗೌರವ ಸಲ್ಲಿಸುತ್ತೇನೆ. ಅವರ ಸತ್ಯ, ಅಹಿಂಸೆ ಮತ್ತು ಪ್ರೀತಿಯ ಸಂದೇಶವು ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯನ್ನು ತರುವ ಮೂಲಕ ವಿಶ್ವದ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಬಾಪು ಎಲ್ಲಾ ಮಾನವೀಯತೆಗೆ ಸ್ಫೂರ್ತಿಯ ಮೂಲವಾಗಿ ಉಳಿದಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಟ್ವೀಟ್​ ಮೂಲಕ ಶುಭಕೋರಿದ್ದಾರೆ.

    ಮತ್ತೊಂದು ಟ್ವೀಟ್​ನಲ್ಲಿ ಗಾಂಧಿ ಜಯಂತಿಯ ಸುದಿನದಂದು ಅಹಿಂಸ ಮತ್ತು ಸತ್ಯದ ಮಂತ್ರವನ್ನು ಅನುಸರಿಸುವ ಮೂಲಕ ರಾಷ್ಟ್ರದ ಕಲ್ಯಾಣ ಮತ್ತು ಪ್ರಗತಿಗೆ ನಮ್ಮನ್ನು ಸಮರ್ಪಿಸಲು ನಿರ್ಧರಿಸೋಣ ಮತ್ತು ಸ್ವಚ್ಛ, ಸಮರ್ಥ, ಶಕ್ತಿಯುತ ಮತ್ತು ಉಜ್ವಲ ಭಾರತವನ್ನು ನಿರ್ಮಿಸುವ ಮೂಲಕ ಗಾಂಧಿ ಕನಸನ್ನು ನನಸು ಮಾಡೋಣ ಎಂದು ಕರೆ ನೀಡಿದ್ದಾರೆ.

    ಲಾಲ್​ ಬಹದೂರ್​ ಶಾಸ್ತ್ರಿಗೆ ಗೌರವ
    ಮಾಜಿ ಪ್ರಧಾನಿ ಲಾಲ್​ ಬಹದೂರ್​ ಶಾಸ್ತ್ರಿ ಅವರ ಜಯಂತಿಯಂದು ನಾವು ಅವರನ್ನು ನೆನೆಯಬೇಕಿದೆ. ಶಾಸ್ತ್ರಿ ಭಾರತ ಓರ್ವ ಹೆಮ್ಮೆಯ ಮಗ. ತುಂಬಾ ಸಮರ್ಪಣಾ ಮನೋಭಾವದಿಂದ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ ಮತ್ತು ಯುದ್ಧಕಾಲದ ನಾಯಕತ್ವದಲ್ಲಿ ಅವರ ಮೂಲಭೂತ ಪಾತ್ರವು ರಾಷ್ಟ್ರವನ್ನು ಪ್ರೇರೇಪಿಸುತ್ತಿದೆ ಎಂದಿದ್ದಾರೆ.

    ರಾಜ್​ ಘಾಟ್​ಗೆ ಭೇಟಿ ನೀಡಿದ ಪ್ರಧಾನಿ
    ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ರಾಜ್​ ಘಾಟ್​ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಮಹಾತ್ಮ ಗಾಂಧೀಜಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಜಯ್​ ಘಾಟ್​ನಲ್ಲಿರುವ ಲಾಲ್​ ಬಹದೂರ್​ ಶಾಸ್ತ್ರಿಯವರ ಸ್ಮಾರಕಕ್ಕೂ ಪುಷ್ಪನಮನ ಸಲ್ಲಿಸಿ ವಂದಿಸಿದರು. (ಏಜೆನ್ಸೀಸ್​)

    ಭರವಸೆಯ ಊರುಗೋಲು ಗಾಂಧೀಜಿ

    ದೇಶಭಕ್ತಿ, ಪ್ರಾಮಾಣಿಕತೆಯ ಧೀಮಂತ ಶಕ್ತಿ ಶಾಸ್ತ್ರೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts