More

    ಪ್ರಧಾನಿ ನರೇಂದ್ರ ಮೋದಿ ನ್ಯಾಯ ಒದಗಿಸಲಿ

    ಲಿಂಗಸುಗೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಪ್ರಾಧಿಕಾರದ ಆದೇಶದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ತಜ್ಞರ ಸಹಕಾರದೊಂದಿಗೆ ಕರ್ನಾಟಕ ರೈತರ ಹಿತ ಕಾಪಾಡುವಂತೆ ಒತ್ತಾಯಿಸಿ ಸಹಾಯಕ ಆಯುಕ್ತ ರಾಹುಲ್ ಶಿಂಧೆಗೆ ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡ ಬಣ) ಹಾಗೂ ಕನ್ನಡ ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

    ತಮಿಳುನಾಡಿಗೆ ಅ.15ರವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಲು ನಿರ್ದೇಶನ ನೀಡಿರುವುದು ಕರ್ನಾಟಕದ ರೈತರ ಪಾಲಿಗೆ ಮರಣ ಶಾಸನ ಬರೆದಂತಾಗಿದೆ. ರಾಜ್ಯದಲ್ಲಿ ಮಳೆಯ ಅಭಾವದಿಂದ ಕಾವೇರಿ ನದಿ ಪಾತ್ರದ 4 ಜಲಾಶಯಗಳಲ್ಲಿ ನೀರಿನ ಒಳ ಹರಿವು ಕಡಿಮೆಯಾಗಿದ್ದು, ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ರಾಜ್ಯದ ರೈತರು ಮತ್ತು ಜನತೆಗೆ ಕುಡಿಯುವ ನೀರಿನ ಗಂಡಾಂತರ ಎದುರಾಗಲಿದೆ. ಈ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಕರ್ನಾಟಕದ ಜನತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.

    ಪ್ರಮುಖರಾದ ಮಹಾಂತೇಶ ಹೂಗಾರ, ಜಗನ್ನಾಥ ಜಾಧವ, ಜೀವಾನಾಯಕ, ಅಂಜಿ ನಾಯಕ, ಮೌನೇಶ, ಗಂಗಾಧರ ನಾಯಕ, ಮಂಜುನಾಥ, ಮಲ್ಲು, ಜಗನ್ನಾಥ, ಅಮರೇಶ, ತಿಪ್ಪಣ್ಣ, ಆದಪ್ಪ ಇತರರಿದ್ದರು. ಕನ್ನಡ ಸೇನೆ ಪರವಾಗಿ ತಾಲೂಕು ಅಧ್ಯಕ್ಷ ಶರಣೋಜಿ ಪವಾರ, ಹನುಮಂತ್ರಾಯ ನೇಲೋಗಿ, ಮೌನೇಶ ಬಳ್ಳಾರಿ, ಸುಭಾಸ ಗೌಡೂರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts