ವಿಪಕ್ಷಗಳ ವಿಭಜಕ ಅಜೆಂಡಾ- ಪ್ರಧಾನಿ ಮೋದಿ ಎಚ್ಚರಿಕೆ: ಏನಿದು ‘ಉತ್ತರ vs ದಕ್ಷಿಣ’ ಫೈಟ್​’?

blank

ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ‘ಉತ್ತರ – ದಕ್ಷಿಣ’ ಕೆಸರೆರೆಚಾಟಕ್ಕೆ ಸಂಸತ್ತಿನಲ್ಲಿ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ರಾಢಿ ಮಾಡಿದ ನಂತರ ಈಗ ‘ಗೌಮುತ್ರ ರಾಜ್ಯಗಳು’ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ದನಿಗೋಡಿಸಿದ್ದಾರೆ.

ಇದನ್ನೂ ಓದಿ: ರಜಪೂತ ಸಂಘಟನೆ ಮುಖ್ಯಸ್ಥನ ಹತ್ಯೆ ವಿರೋಧಿಸಿ ರಾಜಸ್ಥಾನ ಬಂದ್‌ – ಪೊಲೀಸರ ಕಟ್ಟೆಚ್ಚರ

ಲೋಕಸಭೆ ಅಧಿವೇಶನದಲ್ಲಿ ಡಿಎಂಕೆ ಸಂಸದ ಡಿ.ಎನ್‌.ವಿ.ಸೆಂಥಿಲ್ ಕುಮಾರ್ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಾತ್ರ ಬಿಜೆಪಿಗೆ ಮತಹಾಕುತ್ತಾರೆ. ಈ ರಾಜ್ಯಗಳಲ್ಲಿ ಅನಕ್ಷರತೆ ಹೆಚ್ಚಾಗಿದೆ. ಇವು “ಗೋಮೂತ್ರ ರಾಜ್ಯಗಳು” ಎಂದು ಟೀಕಿಸಿ ‘ಉತ್ತರ vs ದಕ್ಷಿಣ’ ವಿವಾದದ ಬೆಂಕಿಗೆ ಕಿಡಿ ಹೊತ್ತಿಸಿದ್ದರು. ಈಗ ಅದು ದೇಶಾದ್ಯಂತ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ದಕ್ಷಿಣದ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿಯ ಏಕೈಕ ನೆಲೆಯನ್ನು ಕಸಿದುಕೊಂಡಿತು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ದಕ್ಷಿಣದಲ್ಲಿ ಸ್ಥಾನವನ್ನು ಗಟ್ಟಿಗೊಳಿಸಿದೆ. ಕೇರಳ ಮತ್ತು ತಮಿಳುನಾಡು ಕ್ರಮವಾಗಿ ಎಡಪಕ್ಷಗಳು ಮತ್ತು ಡಿಎಂಕೆ ವಶದಲ್ಲಿವೆ. ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಆಳುತ್ತಿದೆ, ಇದೇ ವಿಷಯವನ್ನು ತಿಳಿಸುವ ಭರದಲ್ಲಿ ಸೆಂಥಿಲ್ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚುನಾವಣೆ ಬಳಿಕ ಕಾಂಗ್ರೆಸ್ ನ ಪ್ರೊಫೆಷನಲ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ವಿಭಾಗದ ಅಧ್ಯಕ್ಷ ನಾಯಕ ಪ್ರವೀಣ್ ಚಕ್ರವರ್ತಿ ‘X'(ಎಕ್ಸ್‌)ನಲ್ಲಿ, “ದಕ್ಷಿಣ-ಉತ್ತರ ಗಡಿ ರೇಖೆ ದಪ್ಪವಾಗುರ್ಥಥೀಋಊಔಊಧೂ ಸ್ಪಷ್ಟವಾಗುತ್ತಿದೆ” ಏಮಧೂ ಪೋಸ್ಟ್ ಮಾಡಿದ್ದರು. ಬಳಿಕ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹಾಕಿರುವ ಪೋಸ್ಟ್​ನಲ್ಲಿ ಸಹ ದಕ್ಷಿಣದ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ವಿರುದ್ಧ ಸಹ ವ್ಯಾಪಕ ಟೀಕೆಗಳು ಕೇಳಿ ಬಂದು ಕಡೆಗೆ ಸ್ಪಷ್ಟನೆ ನೀಡಿದರು.

ಈ ಪೋಸ್ಟ್‌ಗಳು ದೊಡ್ಡ ಗದ್ದಲವನ್ನು ಹುಟ್ಟುಹಾಕಿದವು, ಬಿಜೆಪಿ ನಾಯಕರು, ಚಕ್ರವರ್ತಿ ವಿಭಜಕ ರಾಜಕೀಯವನ್ನು ತರುತ್ತಿದ್ದಾರೆ. ಎಂದು ಆರೋಪಿಸಿದರು. ಅವರು ನಂತರ ಪೋಸ್ಟ್ ಅನ್ನು ಅಳಿಸಿದರು. ಆದರೆ ಚರ್ಚೆಯು ನಿಲ್ಲಲಿಲ್ಲ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತನಾಡಿ, ಕಾಂಗ್ರೆಸ್​ನವರು​ ‘ಎರಡು ಕಾರ್ಡ್ ಗಳನ್ನು ಸದಾ ಸಿದ್ಧವಾಗಿ ಇಟ್ಟುಕೊಳ್ಳುತ್ತಾರೆ, ಈಗ ಎರಡನೇ ಕಾರ್ಡ್ ತೆಗೆದಿದ್ದಾರೆ. ಅದು ವಿಭಜನೆ ಕಾರ್ಡ್​ ಎಂದು ಟೀಕಿಸಿದರು.

ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರು, ಕಾಂಗ್ರೆಸ್ ತಮ್ಮ ನಿಯಮಿತ ಕ್ಯಾಪ್ಸೂಲ್‌ಗಳಾದ ಹಿಂದೂ ಪಕ್ಷ, ಜಾತಿ ರಾಜಕೀಯ, ಇವಿಎಂಗಳು ಮತ್ತು ಉಚಿತ ಕೊಡುಗೆಗಳಲ್ಲಿ ವಿಫಲವಾದ ನಂತರ “ಪ್ರತ್ಯೇಕವಾದ ನಿರೂಪಣೆ” ಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು “ಹಿಂದೂ, ಹಿಂದಿ ಮತ್ತು ಸನಾತನ ಧರ್ಮ” ವನ್ನು ಅವಮಾನಿಸಿದ್ದಾರೆ ಮತ್ತು ವಿಭಜಕ ವಿಚಾರಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ‘ಇಂಡಿಯಾ’ ಬಣವನ್ನು ಟೀಕೆಗಳ ಮೇಲೆ ಟೀಕಿಸಿದರು.

ಇದೆಲ್ಲ ಬೆಳವಣಿಗೆಗಳ ಬಳಿಕ ಮಧ್ಯಪ್ರವೇಶಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ‘X’ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಚರ್ಚೆಗೆ ಸೇರಿಕೊಂಡರು. ‘ಉತ್ತರ ಮತ್ತು ದಕ್ಷಿಣ’ ವಾದದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ, “ಅವರು ತಮ್ಮ ದುರಹಂಕಾರ, ಸುಳ್ಳು, ನಿರಾಶಾವಾದ ಮತ್ತು ಅಜ್ಞಾನದಿಂದ ವರ್ತಿಸುತ್ತಿದ್ದಾರೆ. ಬಳಸಿದ ಎಲ್ಲ ಎಮೋಜಿಗಳಿಗೆ ಧನ್ಯವಾದಗಳು, ಸಂತೋಷವಾಗಿರಲಿ. ಆದರೆ, ಅವರ ವಿಭಜಕ ಅಜೆಂಡಾದ ಬಗ್ಗೆ ಎಚ್ಚರದಿಂದಿರಿ. 70 ವರ್ಷಗಳ ಹಳೆಯ ಅಭ್ಯಾಸವು ಅಷ್ಟು ಸುಲಭವಾಗಿ ಹೋಗಲಾರದು. ಅಲ್ಲದೆ, ಮುಂದೆ ಇನ್ನೂ ಅನೇಕ ಕರಗುವಿಕೆಗಳಿಗೆ ಅವರು ಸಿದ್ಧರಾಗಿರಬೇಕು. ಇದು ಜನರ ಬುದ್ಧಿವಂತಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಬೆಂಕಿ ಹಚ್ಚಿದ ಡಿಎಂಕೆ ಸಂಸದರು ಕ್ಷಮೆಯಾಚಿಸಿದ್ದಾರೆ. “ಇತ್ತೀಚಿನ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಕುರಿತು ಕಾಮೆಂಟ್ ಮಾಡುತ್ತಾ, ನಾನು ಅನುಚಿತ ರೀತಿಯಲ್ಲಿ ಪದವನ್ನು ಬಳಸಿದ್ದೇನೆ. ಯಾವುದೇ ಉದ್ದೇಶದಿಂದ ಆ ಪದವನ್ನು ಬಳಸಿಲ್ಲ, ತಪ್ಪು ಅರ್ಥ ಬಂದಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

1 ರಿಂದ 9ನೇ ತರಗತಿ ವಿಶೇಷ ಚೇತನ ಮಕ್ಕಳಿಗೆ ಪರೀಕ್ಷಾ ನಿಯಮದಲ್ಲಿ ಬದಲಾವಣೆ

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…