More

    ಶ್ರೀಗಂಧದ ಸಿತಾರ್​​​​, ರೇಷ್ಮೆ ಸೀರೆ…ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಇತರ ನಾಯಕರಿಗೆ ಪ್ರಧಾನಿ ಮೋದಿ ಕೊಟ್ಟ ಉಡುಗೊರೆ ಏನು?

    ಫ್ರಾನ್ಸ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಫ್ರಾನ್ಸ್ ಪ್ರವಾಸದಲ್ಲಿದ್ದಾಗ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಶ್ರೀಗಂಧದ ಸಿತಾರ್ ಉಡುಗೊರೆಯಾಗಿ ನೀಡಿದರು. ಜತೆಗೆ ಅಧ್ಯಕ್ಷರ ಪತ್ನಿ, ಫ್ರಾನ್ಸ್ ಪ್ರಧಾನಿ, ಸೆನೆಟ್ ಅಧ್ಯಕ್ಷರು ಮತ್ತು ಫ್ರಾನ್ಸ್ ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಿಗೂ ಉಡುಗೊರೆಗಳನ್ನು ನೀಡಿದ್ದಾರೆ.

    ಅಧ್ಯಕ್ಷರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್‌ ಅವರಿಗೆ ಸ್ಯಾಂಡಲ್‌ವುಡ್ ಬಾಕ್ಸ್‌ನಲ್ಲಿ ಪೋಚಂಪಲ್ಲಿ ಇಕಾತ್ ಸೀರೆ ಉಡುಗೊರೆಯಾಗಿ ನೀಡಲಾಯಿತು. ತೆಲಂಗಾಣದ ಪೋಚಂಪಲ್ಲಿ ಪಟ್ಟಣದಿಂದ ಬಂದಿರುವ ಪೋಚಂಪಲ್ಲಿ ರೇಷ್ಮೆ ಇಕಾತ್ ಸೀರೆಯು ಭಾರತದ ಶ್ರೀಮಂತ ಜವಳಿ ಪರಂಪರೆಗೆ ಸಾಕ್ಷಿಯಾಗಿದೆ.

    ಫ್ರಾನ್ಸ್‌ನ ಪ್ರಧಾನ ಮಂತ್ರಿ ಎಲಿಸಬೆತ್ ಬೋರ್ನ್ ಅವರಿಗೆ ಮಾರ್ಬಲ್ ಇನ್ಲೇ ವರ್ಕ್ ಟೇಬಲ್ ಉಡುಗೊರೆಯಾಗಿ ನೀಡಲಾಯಿತು. ವರದಿಗಳ ಪ್ರಕಾರ, ಉತ್ತಮ ಗುಣಮಟ್ಟದ ಅಮೃತಶಿಲೆಗೆ ಹೆಸರುವಾಸಿಯಾದ ರಾಜಸ್ಥಾನದ ಮಕ್ರಾನಾ ಎಂಬ ಪಟ್ಟಣದಲ್ಲಿ ಈ ಮಾರ್ಬಲ್ ಕಂಡುಬರುತ್ತದೆ. ಜೊತೆಗೆ, ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರಿಗೆ ಶ್ರೀಗಂಧದ ಮರದಲ್ಲಿ ಕೈಯಿಂದ ಕೆತ್ತಿದ ಆನೆ ಅಂಬಾರಿಯನ್ನು ಉಡುಗೊರೆಯಾಗಿ ನೀಡಲಾಯಿತು. ಕೈಯಿಂದ ಹೆಣೆದ ಸಿಲ್ಕ್ ಕಾಶ್ಮೀರಿ ಕಾರ್ಪೆಟ್ ಅನ್ನು ಫ್ರೆಂಚ್ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಯಾಲ್ ಬ್ರಾನ್-ಪಿವೆಟ್ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.

    ಮೋದಿ ಅವರು ತಮ್ಮ ಎರಡು ದಿನಗಳ ಫ್ರಾನ್ಸ್ ಪ್ರವಾಸವನ್ನು ಮುಗಿಸಿದ ನಂತರ ಶನಿವಾರ ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಫ್ರಾನ್ಸ್ ಭೇಟಿಯನ್ನು ಮೋದಿ “ಸ್ಮರಣೀಯ” ಎಂದು ಹೇಳಿದ್ದಾರೆ. ಜೊತೆಗೆ ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts