More

    ಪಾಳು ಬಿದ್ದಿವೆ ಆರೋಗ್ಯ ಕೇಂದ್ರದ ವಸತಿ ಗೃಹ

    ಡಂಬಳ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಸಿಬ್ಬಂದಿ ವಸತಿ ಗೃಹಗಳು ಸಂಪೂರ್ಣ ಶಿಥಿಲ ಗೊಂಡಿದ್ದು, ಸುತ್ತಲೂ ಮುಳ್ಳುಕಂಟಿ ಬೆಳೆದಿವೆ.

    ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅನುಕೂಲಕ್ಕಾಗಿ 11 ವಸತಿ ಗೃಹಗಳನ್ನು ನಿರ್ವಿುಸಲಾಗಿದೆ. ಸದ್ಯ 4 ವಸತಿ ಗೃಹಗಳಲ್ಲಿ ಮಾತ್ರ ಸಿಬ್ಬಂದಿ ವಾಸವಾಗಿದ್ದಾರೆ. ಉಳಿದ 7 ಗೃಹಗಳು ಸಂಪೂರ್ಣ ಪಾಳುಬಿದ್ದಿವೆ. ವಾಸವಿದ್ದ ವಸತಿ ಗೃಹಗಳಲ್ಲಿ ನಿತ್ಯವೂ ಸಿಮೆಂಟ್ ಪದರು ಉದುರಿ ಬೀಳುತ್ತಿವೆ. ಕಿಟಕಿ, ಬಾಗಿಲು ಮುರಿದಿವೆ.

    ಮಳೆ ಬಂದರೆ ಮನೆಗಳು ಸೋರುತ್ತವೆ. ವಸತಿ ಗೃಹಗಳನ್ನು ದುರಸ್ತಿಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಹಲವಾರು ಸಲ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸಿಬ್ಬಂದಿಯ ಆರೋಪವಾಗಿದೆ.

    ಕುಡುಕರ ತಾಣ: ಪಾಳುಬಿದ್ದ ವಸತಿ ಗೃಹಗಳಲ್ಲಿ ರಾತ್ರಿ ವೇಳೆ ಕುಡುಕರು ಬಾಟಲಿಗಳನ್ನು ಅಲ್ಲಿಯೇ ಎಸೆಯುತ್ತಾರೆ. ಒಮ್ಮೊಮ್ಮೆ ಕುಡುಕರು ದಾಂಧಲೆ ಮಾಡುವುದರಿಂದ ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.

    ಆರೋಗ್ಯ ಕೇಂದ್ರದ ಸುತ್ತಲೂ ಮುಳ್ಳುಕಂಟಿ ಬೆಳೆದಿರುವುದರಿಂದ ಹಾವು, ಚೇಳುಗಳು ಕಾಟ ಹೆಚ್ಚಾಗಿದೆ. ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಹಿಂಜರಿಕೆಯಾಗುತ್ತದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

    ಡಂಬಳ ಆರೋಗ್ಯ ಕೇಂದ್ರದ ವಸತಿ ಗೃಹಗಳ ಪಾಳು ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ವಸತಿ ಗೃಹಗಳನ್ನು ಪರಿಶೀಲಿಸಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
    | ಡಾ. ಸತೀಶ ಬಸರೀಗಿಡ , ಜಿಲ್ಲಾ ಆರೋಗ್ಯಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts