More

    ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

    ಮೂಡಲಗಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಅರಬಾವಿ ಮತಕ್ಷೇತ್ರದ ಜೆಡಿಎಸ್ ವತಿಯಿಂದ ಪಟ್ಟಣ ಕಲ್ಮೇಶ್ವರ ವೃತ್ತದಲ್ಲಿ ಮಹಿಳೆಯರು ತಲೆ ಮೇಲೆ ಗ್ಯಾಸ್ ಸಿಲೆಂಡರ್ ಹೊತ್ತು ಪ್ರತಿಭಟಿಸಿ ತಹಸೀಲ್ದಾರ್ ಡಿ.ಜಿ.ಮಹಾತ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲಾಗಿದೆ. ಬೆಲೆ ಏರಿಕೆಯಾಗುತ್ತಿದ್ದು, ಬಡ ಜನರು ಬದುಕುವುದಕ್ಕೂ ಸಾಧ್ಯವಾಗುತ್ತಿಲ್ಲ. ಶೀಘ್ರವಾಗಿ ಬೆಲೆ ಕಡಿಮೆ ಮಾಡದೇ ಹೋದರೆ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

    ಗೋಕಾಕ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ಸಾಮಾನ್ಯರ ಪರವಾಗಿ ನಿಂತು ದಿನಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

    ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಮಾತನಾಡಿ, ಅಗತ್ಯ ವಸ್ತುಗಳ ದರ ಏರಿಕೆ ಮಾಡುತ್ತಿರುವುದರಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ದರ ಏರಿಕೆ ಕಡಿಮೆ ಮಾಡದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಚನ್ನಪ್ಪ ಅಥಣಿ, ಗುರು ಗಂಗಣ್ಣವರ, ಮಲ್ಲಪ್ಪ ಮದಗುಣಕಿ, ಶ್ರೀಕಾಂತ ಪರುಶೆಟ್ಟಿ, ಗಂಗಾಧರ ಮಠಪತಿ, ಚಿದಾನಂದ ಶೆಟ್ಟರ, ರಾಚಪ್ಪ ಅಂಗಡಿ, ಮಾರುತಿ ಸುಂಕದ, ಸಂಗಪ್ಪ ಕಳ್ಳಿಗುದ್ದಿ, ಐ.ಎಸ್.ಕೊಣ್ಣುರ, ಆದಮ್ ತಾಂಬೋಳಿ, ಪರಪ್ಪ ಮುನ್ಯಾಳ, ಶಿವು ಸಣ್ಣಕ್ಕಿ, ಬಸವರಾಜ ಗುಲಗಾಜಂಬಗಿ, ಸೂರಜ ಸೋನವಾಲ್ಕರ್, ಶಿವಲಿಂಗ ಹಾದಿಮನಿ, ಪಾರೀಸ್ ಉಪ್ಪಿನ, ದರೇಪ್ಪ ಖಾನಗೌಡರ, ಮಲ್ಲಿಕಾರ್ಜುನ ಅರಬಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts