More

    ಗ್ರಾನೈಟ್ ಸ್ಲರಿ ಸುರಿವಿಕೆ ತಡೆಗಟ್ಟಿ: ಕೃಷ್ಣದೊಡ್ಡಿಗೆ ಭೇಟಿ ನೀಡಿದ ಅರಣ್ಯ ಸಚಿವ ಆನಂದ್ ಸಿಂಗ್ ಆದೇಶ

    ಆನೇಕಲ್: ಬನ್ನೇರುಘಟ್ಟ ಕಾಡಂಚಿನ ಕೃಷ್ಣದೊಡ್ಡಿ ಗ್ರಾಮದ ಸುತ್ತಮುತ್ತಲ ಸರ್ಕಾರಿ ಜಮೀನಿನಲ್ಲಿ ಜಿಗಣಿ ಕೈಗಾರಿಕಾ ಪ್ರದೇಶದ ಗ್ರಾ್ಯನೈಟ್ ಕಾರ್ಖಾನೆಗಳು ಕಲ್ಲು ಕತ್ತರಿಸುವಾಗ ಮತ್ತು ಹೊಳಪು ಮಾಡುವಾಗ ಬರುವ ಗಸಿ (ಸ್ಲರಿ) ಸುರಿಯುವುದಕ್ಕೆ ತಡೆ ಹಾಕಬೇಕು ಎಂದು ಅಧಿಕಾರಿ ಗಳಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಆದೇಶಿಸಿದ್ದಾರೆ.

    ಕೃಷ್ಣದೊಡ್ಡಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ಸಚಿವರು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಳನ್ನು ತರಾಟೆ ತೆಗೆದುಕೊಂಡರು. ಕಾರ್ಖಾನೆಗಳ ರಾಸಾಯನಿಕದಿಂದ ಕೊಳವೆಬಾವಿಗಳಲ್ಲಿ ನೀರು ಕಲುಷಿತ ವಾಗುತ್ತಿದೆ. ಪ್ರಾಣಿಪಕ್ಷಿಗಳ ಜೀವಕ್ಕೆ ಅದು ಮಾರಕವಾಗುತ್ತಿದ್ದು, ಅಂತರ್ಜಲ ವಿಷವಾಗುತ್ತಿದೆ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

    ಅಧಿಕಾರಿಗಳು ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸ ಬೇಕು. ಕಾರ್ಖಾನೆ ಮಾಲೀಕರೊಂದಿಗೆ ರ್ಚಚಿಸಿ ಎಚ್ಚರಿಕೆ ನೀಡಬೇಕು. ಇಂಥ ಕೃತ್ಯ ಎಸಗುವ ಕಾರ್ಖಾನೆಗಳಿಗೆ ಬೀಗ ಹಾಕಬೇಕು. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾ್ಯನೈಟ್ ರಾಸಾಯನಿಕ ಸುರಿಯಲು ಈಗಾಗಲೇ ಎಸ್ ಬಿಂಗೀಪುರದಲ್ಲಿ ಜಾಗ ಗುರುತು ಮಾಡಲಾಗಿದೆ. ಕೃಷ್ಣ ದೊಡ್ಡಿಯಲ್ಲಿ ಅಕ್ರಮವಾಗಿ ರಾಸಾಯನಿಕ ಸುರಿಯುತ್ತಿರುವುದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಸಚಿವರು ಎಲ್ಲ ಇಲಾಖೆ ಅಧಿಕಾರಿಗಳನ್ನು ಒಗ್ಗೂಡಿಸಿ ಸಮಿತಿ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಮಹದೇವಯ್ಯ ಹೇಳಿದರು.

    ರಾಸಾಯನಿಕ ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ವಾಹನಗಳು ಎಲ್ಲಿ ಹೋಗುತ್ತವೆ ಎನ್ನುವ ಬಗ್ಗೆ ನಿಗಾವಹಿಸ ಲಾಗುವುದು. ಪ್ರತಿವಾರ ಮಾಲಿನ್ಯ ಮಂಡಳಿ ಅಧಿಕಾರಿಗಳಿಂದ ಈ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು.

    | ಬಸವರಾಜು ಪಾಟೀಲ್ ಕೆಎಸ್​ಪಿಸಿಬಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts