More

    ಕೆವಿಎಸ್‌ನಂತೆಯೇ ವಿಜಯಾನಂದ ಪ್ರಾಮಾಣಿಕ: ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಟಿ.ವೀರಪ್ಪ ಹೇಳಿಕೆ

    ಮಂಡ್ಯ: ಪಿಇಎಸ್ ಸಂಸ್ಥಾಪಕ ಕೆ.ವಿ.ಶಂಕರಗೌಡರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಆದ್ದರಿಂದ ಅವರ ಋಣ ತೀರಿಸುವ ಸಕಾಲ ಈಗ ಮತದಾರರ ಮುಂದಿದೆ. ತಾತನಂತೆ ವಿಜಯಾನಂದ ಪ್ರಾಮಾಣಿಕತೆ ಮತ್ತು ಮೌಲ್ಯಯುತ ಜೀವನದ ಅಂಶಗಳನ್ನು ಬೆಳೆಸಿಕೊಂಡಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಟಿ.ವೀರಪ್ಪ ಹೇಳಿದರು.
    ಪಿಇಎಸ್ ಸಂಸ್ಥೆಯ ನಿವೃತ್ತ ಉದ್ಯೋಗಿಗಳು ಆ ಸಂಸ್ಥೆ ಜಿಲ್ಲೆ ಹಾಗೂ ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರ ಸೇವೆಗಾಗಿ ವಿಜಯಾನಂದ ಪರ ಮತಯಾಚನೆ ಮಾಡುತ್ತಿದ್ದೇವೆ. ಕಡು ಕಷ್ಟದಲ್ಲಿದ್ದ ಅನೇಕ ಪ್ರತಿಭಾವಂತರಿಗೆ ಶಂಕರಗೌಡರು ಉಚಿತವಾಗಿ ಶಿಕ್ಷಣ ನೀಡಿ ಅವರ ಬದುಕಿಗೆ ಆಧಾರವಾಗಿದ್ದಾರೆ. ಅನೇಕ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪ್ರಸ್ತುತ ಸನ್ನಿವೇಶದಲ್ಲಿ ಹಲವು ಪಕ್ಷಗಳಲ್ಲಿ ಅಭ್ಯರ್ಥಿಗಳು ಅಪರಾಧ ಮೊಕದ್ದಮೆಗಳ ಹಿನ್ನೆಲೆ ಉಳ್ಳವರಾಗಿದ್ದಾರೆ. ಜಿಲ್ಲೆಯಲ್ಲಿ ಗಣಿ ಅಕ್ರಮ, ಭೂ ಅಕ್ರಮ, ಹಾಲು ನೀರು ಬೆರೆಸಿದ ಅಕ್ರಮ, ಜೂಜು ದಂಧೆ ಹಿನ್ನೆಲೆಯವರೂ ಅಭ್ಯರ್ಥಿಗಳಾಗಿರುವುದನ್ನು ಜನರು ಕಾಣುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಜಯಾನಂದ ಸೇರಿದಂತೆ ಕೆಲವರು ಪಕ್ಷೇತರರು ಸ್ಪರ್ಧಿಸಿದ್ದು, ಅವರು ಗೆದ್ದು ಬಂದರೆ ಭವಿಷ್ಯದ ದೃಷ್ಠಿಯಿಂದ ಒಳ್ಳೆಯದು. ವಿಜಯಾನಂದ ಕ್ಷೇತ್ರದ ಜನಪ್ರತಿನಿಧಿಯಾದರೆ ಶಂಕರಗೌಡರು ಮತ್ತೆ ಕ್ಷೇತ್ರವನ್ನು ಪ್ರತಿನಿಧಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    ನಿವೃತ್ತ ಪ್ರಾಧ್ಯಾಪಕರಾದ ಡಾ.ಜಿ.ಪಿ.ಶಿವಶಂಕರ್, ಡಾ.ವಿ.ಕೆ.ಕೃಷ್ಣಪ್ಪ, ಪ್ರೊ.ಕೆ.ಆರ್.ಶಿವಾನಂದ, ಪ್ರೊ.ಎಚ್.ಎಸ್.ನರಸಿಂಹಮೂರ್ತಿ, ಡಾ.ರಾಮಲಿಂಗಯ್ಯ, ಪ್ರೊ.ಎಂ.ಶಿವಮಂಚಯ್ಯ, ಪ್ರೊ.ನಿಂಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts