More

    ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ 30ಕ್ಕೆ

    ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ನ.30ರಂದು ಹಮ್ಮಿಕೊಂಡ ತಾಲೂಕು ಮಟ್ಟದ ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಯುವ ವೈದ್ಯ ಡಾ.ಅಭಿಷೇಕ ಸ್ವಾಮಿ ಹೇರೂರು ಅವರನ್ನು ಅಧಿಕೃತವಾಗಿ ಶಾಲಾಡಳಿತ ಮಂಡಳಿ ಭಾನುವಾರ ಆಹ್ವಾನಿಸಿತು.

    ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ನೇತೃತ್ವದ ಸದಸ್ಯರು ಮತ್ತು ಶಿಕ್ಷಕರು, ಅಭಿಷೇಕ ಹೇರೂರು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸುವ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಿದರು.

    ಒಂದು ದಿನ ಸಮ್ಮೇಳನ ನಿಮಿತ್ತ ಸರ್ವಾಧ್ಯಕ್ಷರನ್ನು ನಗರದ ಎಪಿಎಂಸಿ ಗಂಜ್ ಆವರಣದ ಶ್ರೀ ಚನ್ನಬಸವ ಸ್ವಾಮಿ ದೇವಾಲಯದಿಂದ ಮೆರವಣಿಗೆ ಮೂಲಕ ಶಾಲಾವರಣಕ್ಕೆ ಕರೆ ತರಲಾಗುವುದು. ಕನ್ನಡ ನಾಡು, ನುಡಿ, ನೆಲ, ಜಲ ಸಂಬಂಧಿಸಿದ ಸ್ತಬದ್ಧ ಚಿತ್ರಗಳು, ಮಕ್ಕಳ ನತ್ಯ, ವಾದ್ಯ ಮೇಳದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸಾಹಿತಿಗಳು, ವಿವಿಧ ಕ್ಷೇತ್ರದ ಸಾಧಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

    ನಂತರ ವೇದಿಕೆಯಲ್ಲಿ ಮಕ್ಕಳಿಂದ ಕಾವ್ಯ ಸೇರಿ ವಿವಿಧ ಗೋಷ್ಠಿ , ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ತಿಳಿಸಿದರು.

    ಸದಸ್ಯ ರಾಮರಾವ್ ಆಲಂಪಲ್ಲಿ, ಮುಖ್ಯಶಿಕ್ಷಕಿ ಎಂ.ಪ್ರಿಯಾ ಕುಮಾರಿ, ಶಿಕ್ಷಕರಾದ ನೀಲಕಂಠಪ್ಪ ಅರಹುಣಸಿ, ರಾಧಿಕಾ ಪೊಲಿನಾ, ಪ್ರದೀಪ್, ವಕೀಲರಾದ ಅಶೋಕಸ್ವಾಮಿ ಹೇರೂರು, ಸಂಧ್ಯಾಪಾರ್ವತಿ ಇತರರಿದ್ದರು.

    ಪರಿಚಯ: ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಓದಿರುವ ಡಾ.ಅಭಿಷೇಕ ಸ್ವಾಮಿ ಹೇರೂರು ಗಂಗಾವತಿ ನಿವಾಸಿಯಾಗಿದ್ದು, ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎಂಡಿ ಅಭ್ಯಾಸ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts