More

    ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರಾಷ್ಟ್ರಪತಿಗಳಿಂದ ಅರವಿಂದ್​​ ಕೇಜ್ರಿವಾಲ್​ ನೇಮಕ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಶುಕ್ರವಾರ ಅಧಿಕೃತವಾಗಿ ನೇಮಕ ಮಾಡಿದರು.

    ಅಧಿಸೂಚನೆ ಪ್ರಕಾರ ಮುಖ್ಯಮಂತ್ರಿಗಳು ಸಲಹಾ ಮೇರೆಗೆ ಇತರೆ ಆರು ಶಾಸಕರನ್ನು ದೆಹಲಿ ಸರ್ಕಾರದ ಸಚಿವರನ್ನಾಗಿ ರಾಷ್ಟ್ರಪತಿಗಳು ಇದೇ ವೇಳೆ ನೇಮಕ ಮಾಡಿದ್ದಾರೆ.

    ಫೆ. 16ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅರವಿಂದ್ ಕೇಜ್ರಿವಾಲ್​ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವರೊಂದಿಗೆ ಮನೀಶ್​ ಸಿಸೋಡಿಯಾ, ಸತ್ಯೇಂದರ್​ ಜೈನ್​, ಗೋಪಾಲ್​ ರೈ, ಕೈಲಾಶ್​​ ಗೆಹ್ಲೋಟ್​, ಇಮ್ರಾನ್​ ಹುಸೈನ್​ ಮತ್ತು ರಾಜೇಂದ್ರ ಗೌತಮ್​ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿಯಾಗಿ ಶ್ರೀ ಅರವಿಂದ್​ ಕೇಜ್ರಿವಾಲ್ ಅವರನ್ನು ನೇಮಕ ಮಾಡಲು ಸಂತಸವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಸಿಎಂ ಆಗಿ ಕಾರ್ಯಾರಂಭ ಮಾಡಲಿದ್ದಾರೆ ಎಂದು ರಾಷ್ಟ್ರಪತಿಗಳ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್​ ಪ್ರಚಂಡ ಬಹುಮತ ಸಾಧಿಸಿದೆ. ಒಟ್ಟು 70 ಕ್ಷೇತ್ರಗಳಲ್ಲಿ ಬರೋಬ್ಬರಿ 62 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಮೂರನೇ ಬಾರಿಗೆ ದೆಹಲಿ ಗದ್ದುಗೆಯನ್ನು ಆಪ್​ ಏರಿದೆ. ಬಿಜೆಪಿ 8 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಂಡರೆ, ಕಾಂಗ್ರೆಸ್​ ಖಾತೆ ತೆರೆಯದೇ ಹೀನಾಯ ಸೋಲು ಅನುಭವಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts