More

    ಸಪ್ತಪದಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಿ

    ಹಾವೇರಿ: ಜಿಲ್ಲೆಯಲ್ಲಿ ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಧಾರ್ವಿುಕ ಪರಿಷತ್ ಸಭೆ ಹಾಗೂ ಧಾರ್ವಿುಕ ದತ್ತಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಇಳಿಮುಖವಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯಂತೆ ಸಪ್ತಪದಿ ಸರಳ ವಿವಾಹ ಆಯೋಜನೆ ಕುರಿತು ಜಿಲ್ಲೆಯ ಬೇರೆ ಬೇರೆ ದೇವಾಲಯಗಳನ್ನು ಗುರುತಿಸಿ ಸರ್ಕಾರದ ಆದೇಶದ ನಂತರ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

    ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯ ದೇವಾಲಯ ಜೀಣೋದ್ಧೋರಕ್ಕಾಗಿ ಯೋಜಿಸಲಾದ 1.50ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿ, ತ್ವರಿತವಾಗಿ ಕಾಮಗಾರಿ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೇವಾಲಯಗಳನ್ನು ಗುರುತಿಸಿ ಸರ್ಕಾರದ ಮಾರ್ಗಸೂಚಿಯಂತೆ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಬೇಕು. ಹೊಸ ದೇವಾಲಯಗಳ ನಿರ್ವಣ, ಸಭಾಭವನ, ದೇವಾಲಯಗಳಿಗೆ ರಸ್ತೆ, ಕುಡಿಯುವ ನೀರು, ಆವರಣ ಗೋಡೆ, ಮೂಲಸೌಕರ್ಯ ಕಲ್ಪಿಸುವಂತೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಸಮಿತಿಗೆ ಸಲ್ಲಿಸಿದರೆ ತಕ್ಷಣ ಅನುಮೋದನೆ ನೀಡಲಾಗುವುದು ಎಂದರು.

    ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ದೇವಾಲಯಗಳ ನಿರ್ವಣಕ್ಕೆ ಬಿಡುಗಡೆಯಾದ ಅನುದಾನವನ್ನು ತ್ವರಿತವಾಗಿ ಬಳಸದಿದ್ದರೆ ಕ್ರಮಕೈಗೊಳ್ಳವುದಾಗಿ ನಿರ್ಮಾಣ ಏಜೆನ್ಸಿ ಜಿಪಂ ಇಂಜಿನಿಯರಿಂಗ್ ವಿಭಾಗದವರಿಗೆ ಎಚ್ಚರಿಕೆ ನೀಡಿದರು.

    ಜಿಲ್ಲೆಯಲ್ಲಿ ಅಧಿಸೂಚಿತ ಬ ಹಾಗೂ ಸಿ ವರ್ಗದ ಏಳು ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತು ರ್ಚಚಿಸಲಾಯಿತು. ವ್ಯವಸ್ಥಾಪನಾ ಅರ್ಜಿ ಸಲ್ಲಿಸಿದವರ ಮಾಹಿತಿ ಸಂಗ್ರಹಿಸಬೇಕು. ತಹಸೀಲ್ದಾರರು ಸಮಗ್ರವಾಗಿ ಪರಿಶೀಲಿಸಿ ಜಿಲ್ಲಾ ಕೇಂದ್ರದ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾ ಧಾರ್ವಿುಕ ಪರಿಷತ್ ಸಮಿತಿ ಸಭೆಗೆ ಜುಲೈ 16ರೊಳಗೆ ಸಲ್ಲಿಸುವಂತೆ ಸೂಚಿಸಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಜಿಪಂ ಇಒ ಚನ್ನವೀರಸ್ವಾಮಿ, ತಹಸೀಲ್ದಾರ್ ಗಿರೀಶ ಸ್ವಾದಿ, ಶಿರಸ್ತೇದಾರ ಎ.ಬಿ. ಪಾಟೀಲ, ಜಿಲ್ಲಾ ಧಾರ್ವಿುಕ ಪರಿಷತ್ತಿನ ಸದಸ್ಯರಾದ ನಿಂಗಪ್ಪ ಹರಿಜನ, ಗುಡ್ಡಪ್ಪ ಮತ್ತೂರ, ನಿರಂಜನ ತಂಡೂರ, ಮರುಳಸಿದ್ಧಯ್ಯ ಮಠದ ಇತರರಿದ್ದರು.

    ಅರ್ಜಿ ಪರಿಶೀಲನೆ

    ರಟ್ಟಿಹಳ್ಳಿ ತಾಲೂಕು ಕಡೂರ ಗ್ರಾಮದ ಹನುಮಂತ ದೇವಸ್ಥಾನ, ರಾಣೆಬೆನ್ನೂರ ತಾಲೂಕಿನ ಮೆಡ್ಲೇರಿ ಹಾಗೂ ಮಾಗೋಡ ಗ್ರಾಮದ ಮಾರುತಿ ದೇವಸ್ಥಾನ, ಹಿರೇಕೆರೂರು ತಾಲೂಕಿನ ಹಳ್ಳೂರ ಗ್ರಾಮದ ರಂಗನಾಥ ದೇವಸ್ಥಾನ, ಬಾಳಂಬೀಡ ವಿಷಪರಿಹಾರೇಶ್ವರ ದೇವಸ್ಥಾನ ಹಾಗೂ ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಕಲ್ಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಸಲ್ಲಿಕೆಯಾದ ಅರ್ಜಿಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts