More

    ಸೋಂಕಿತ ಗರ್ಭಿಣಿಯರು ಅತಂತ್ರ

    ಬೆಳ್ತಂಗಡಿ: ಕರೊನಾ ಖಚಿತಗೊಂಡ ಗರ್ಭಿಣಿಯರಿಗೆ ಯಾವ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆಗೆ ದಾಖಲಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆ ಲಭಿಸದೆ ತಾಲೂಕಿನ ಇಬ್ಬರು ಗರ್ಭಿಣಿಯರು ಆಸ್ಪತ್ರೆ ಸೇರಲಾಗದೆ ಮನೆಯಲ್ಲೇ ಕಾಲಕಳೆಯಬೇಕಾಗಿ ಬಂದಿದೆ.

    ಉಪ್ಪಿನಂಗಡಿ ಮೊಗ್ರು ಸನಿಹದ ಕೆರೆಮೂಲೆಯ ಒಂದೇ ಮನೆಯ 23 ಮತ್ತು 29 ವರ್ಷದ ಇಬ್ಬರು ತುಂಬು ಗರ್ಭಿಣಿಯರಿಗೆ ಜು.17ರಂದೇ ಕರೊನಾ ದೃಢಪಟ್ಟಿದೆ. ಎರಡು ವಾರಗಳ ಅಂತರದಲ್ಲಿ ಹೆರಿಗೆಯಾಗಲಿರುವ ಅವರನ್ನು ತಾಲೂಕು ಅಥವಾ ಜಿಲ್ಲೆಯ ಯಾವುದೇ ಆಸ್ಪತ್ರೆಗೆ ಇನ್ನೂ ದಾಖಲಿಸಿಲ್ಲ. ಮನೆಯನ್ನು ಸೀಲ್‌ಡೌನ್ ಮಾಡಿ ಆರೋಗ್ಯ ಇಲಾಖೆ ಕೈ ತೊಳೆದುಕೊಂಡಿದೆ. ಲೇಡಿಗೋಷನ್, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
    ‘ಗರ್ಭಿಣಿಯರಿಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂಬ ಸೂಚನೆ ಬಂದಿಲ್ಲ. ಹಾಗಾಗಿ ಅವರನ್ನು ಬೆಳ್ತಂಗಡಿ ಆಸ್ಪತ್ರೆಯಲ್ಲಿ ನಾವು ದಾಖಲಿಸಿಕೊಳ್ಳುವಂತಿಲ್ಲ. ಗರ್ಭಿಣಿಯರಿಗೆ ತುರ್ತು ಸಂದರ್ಭ ಎದುರಾದರೆ ವೈದ್ಯಾಧಿಕಾರಿಗಳು, ದಾದಿಯರು, ತುರ್ತು ಸಂಪರ್ಕಿಸಬೇಕಾದವರ ನಂಬರ್‌ಗಳನ್ನು ನೀಡಿದ್ದೇವೆ’ ಎಂದು ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ.ಕಲಾಮಧು ತಿಳಿಸಿದ್ದಾರೆ.

    6 ತಿಂಗಳ ಒಳಗಿನ ಗರ್ಭಿಣಿಯರಾಗಿದ್ದು ಅವರಿಗೆ ಕೋವಿಡ್ ಸೋಂಕು ಉಂಟಾದರೆ ಅವರನ್ನು 10 ದಿನಗಳ ಆಸ್ಪತ್ರೆಯಲ್ಲಿಟ್ಟು ಗಮನಿಸಬೇಕಾಗುತ್ತದೆ. ತುಂಬು ಗರ್ಭಿಣಿಯರಾದರೆ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಸೇರಿಸಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಹೆರಿಗೆ ಮಾಡಿಸಬಹುದು.
    – ಡಾ.ರತ್ನಾಕರ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts