More

    ನೆಲದ ಮೇಲೇ ಗರ್ಭಿಣಿ-ಬಾಣಂತಿಯರ ಬಿಡಾರ! ಈ ಜಿಲ್ಲಾಸ್ಪತ್ರೆಯಲ್ಲಿ ನೀಗದ ಬೆಡ್​ ಕೊರತೆ

    ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳ ಕೊರತೆಯಾಗಿದ್ದು, ಗರ್ಭಿಣಿಯರು ಮತ್ತು ಹಸಿಬಾಣಂತಿಯರು ನೆಲದ ಮೇಲೆ ಚಾಪೆ, ಜಮಖಾನ ಹಾಸಿಕೊಂಡು ಮಲಗುವ ಪರಿಸ್ಥಿತಿ ಉಂಟಾಗಿದೆ. ಹೆರಿಗೆಗೆ ಬಂದ ಮಹಿಳೆಯರು ಕಾರಿಡಾರಿನಲ್ಲಿಯೇ ಬೀಡು ಬಿಟ್ಟಿರುವ ದೃಶ್ಯಗಳು ಕಂಡುಬಂದಿವೆ.

    ಜಿಲ್ಲಾ ಕೇಂದ್ರದಲ್ಲಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದರೂ ಹಳೇ ಆಸ್ಪತ್ರೆಯಲ್ಲಿ ಗರ್ಭಿಣಿ ಬಾಣಂತಿಯರ ಬವಣೆ ನಿಂತಿಲ್ಲ. ಹಳೇ ಜಿಲ್ಲಾಸ್ಪತ್ರೆಯ ಲೇಬರ್ ವಾರ್ಡಿನಲ್ಲಿ ಕೇವಲ 60 ಬೆಡ್​ಗಳಿದ್ದು, ದಿನನಿತ್ಯ ಸರಾಸರಿ 20 ಹೆರಿಗೆಗಳು ನಡೆಯುತ್ತಿವೆ. ಹೀಗಾಗಿ ಬೆಡ್ ಸಿಗದೆ ಗರ್ಭಿಣಿ ಬಾಣಂತಿಯರು ಪರದಾಟ ನಡೆಸುವಂತಾಗಿದೆ.

    ಇದನ್ನೂ ಓದಿ: ಮಟ್ಕಾ ದಂಧೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸ್​ ಮೇಲೇ ಹಲ್ಲೆ

    ಈ ಮಹಿಳೆಯರ ಮನೆಯವರು ಕೂಡ ಆಸ್ಪತ್ರೆ ಕಾರಿಡಾರ್​ನಲ್ಲೇ ಬೀಡುಬಿಟ್ಟಿರುವ ಪ್ರಸಂಗ ಉಂಟಾಗಿದ್ದು, ಗರ್ಭಿಣಿಯರು, ಹಸಿಬಾಣಂತಿಯರು ಮತ್ತು ಹಸುಗೂಸುಗಳು ಸೋಂಕಿಗೆ ತುತ್ತಾಗುವ ಆತಂಕ ಕೂಡ ಕಾಡುತ್ತಿದೆ.

    ನಾಲ್ಕನೇ ದಿನವೂ ಏರಿದ ಇಂಧನ ಬೆಲೆ: 3 ನಗರಗಳಲ್ಲಿ 100 ರೂಪಾಯಿ ದಾಟಿದ​ ಡೀಸಲ್!

    ಪ್ರತಿ ಬಾರಿ ವಿಮಾನ ನಿಲ್ದಾಣದಲ್ಲಿ ಹಿಂಸೆ! ಪ್ರಧಾನಿ ಮೋದಿಗೆ ಹಿರಿಯ ನಟಿಯ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts