More

    ಹೆರಿಗೆ ನೋವಲ್ಲೂ ನಡೆದೇ ಸೇತುವೆ ದಾಟಿದ ಗರ್ಭಿಣಿ; ನದಿ ನೀರಿನ ಮಟ್ಟ ಹೆಚ್ಚಾಗಿ ಸಿಲುಕಿಕೊಂಡ ಆ್ಯಂಬುಲೆನ್ಸ್​

    ಗುತ್ತಲ: ಸೇತುವೆ ಮೇಲೆ ಆ್ಯಂಬುಲೆನ್ಸ್ ಸಿಲುಕಿದ ಕಾರಣ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ ತುಂಬು ಗರ್ಭಿಣಿಯೊಬ್ಬರು ಹೆರಿಗೆ ನೋವಿನಲ್ಲೇ ಸೇತುವೆ ದಾಟಿ ಆಸ್ಪತ್ರೆಗೆ ದಾಖಲಾದ ಘಟನೆ ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಬೆಳವಿಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.

    ಗುಯಿಲಗುಂದಿ ಗ್ರಾಮದ ಗರ್ಭಿಣಿ ದೀಪಾ ಭೀಮಪ್ಪ ದೊಡ್ಡಮನಿ ಅವರಿಗೆ ಶನಿವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಕುಟುಂಬಸ್ಥರು ಆ್ಯಂಬುಲೆನ್ಸ್​​ಗೆ ಕರೆ ಮಾಡಿದ್ದಾರೆ. ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಿಂದ ಬಂದ ಆ್ಯಂಬುಲೆನ್ಸ್ ವಾಹನ ಬೆಳವಿಗಿ ಗ್ರಾಮದ ವರದಾ ಸೇತುವೆ ದಾಟಿ ಗುಯಿಲಗುಂದಿ ಗ್ರಾಮಕ್ಕೆ ಬಂದಿತ್ತು. ಆಗ ಸೇತುವೆ ಮೇಲೆ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಗರ್ಭಿಣಿಯನ್ನು ಕರೆದುಕೊಂಡು ಮರಳಿ ಬರುವಷ್ಟರಲ್ಲಿ ಸೇತುವೆ ಮೇಲೆ ವಾಹನ ತೆರಳಲು ಆಗದಷ್ಟು ನೀರು ಹರಿಯಲಾರಂಭಿಸಿತ್ತು.

    ಇದನ್ನೂ ಓದಿ: ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್​ಡಿಎನಿಂದ ಜಗದೀಪ್​ ಧನಕರ್

    ಇದರಿಂದಾಗಿ ವಾಹನದಿಂದ ಇಳಿದ ಗರ್ಭಿಣಿ ಮೊಣಕಾಲುದ್ದ ಹರಿಯುತ್ತಿದ್ದ ನೀರಿನಲ್ಲಿ ನಡೆದು ಸೇತುವೆ ದಾಟಬೇಕಾಯಿತು. ಆಕೆಗೆ ಆಶಾ ಕಾರ್ಯಕರ್ತೆ ಗೀತಾ ಬದನಿಕಾಯಿ, ಆ್ಯಂಬುಲೆನ್ಸ್ ವಾಹನ ಚಾಲಕ ಬಸವರಾಜ ಗೊರವರ, ಸಿಬ್ಬಂದಿ ಅರುಣಕುಮಾರ ಸನದಿ ಸಹಾಯ ಮಾಡಿದರು. ಸೇತುವೆ ದಾಟಿದ ನಂತರ ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಚಿಕಿತ್ಸೆ ಪಡೆದ ದೀಪಾ ದೊಡ್ಡಮನಿ, ನಂತರ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts