More

    ಪ್ರವಾಹದ ನಡುವೆ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ್ದು ಹೀಗೆ ನೋಡಿ…

    ಪಟನಾ: ಮಳೆಗಾಲ ಬಂತೆಂದರೆ ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದು ಸಾಮಾನ್ಯ. ಈ ಸಮಸ್ಯೆಯಿಂದ ಪಾರಾಗಲು ಜನರು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಾರೆ. ಇದು ಕೂಡ ಪ್ರತಿವರ್ಷದ ಮಳೆಗಾಲದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಆದರೆ ಸ್ವಲ್ಪ ಎತ್ತರದ ಸ್ಥಳದಲ್ಲಿ ಇರುವವರು ಪ್ರವಾಹದ ಪರಿಸ್ಥಿತಿಯ ನಡುವೆಯೇ ಬದುಕು ಸಾಗಿಸುತ್ತಾರೆ.

    ಹೀಗೆ ಸ್ವಲ್ಪ ಎತ್ತರದ ಪ್ರದೇಶದಲ್ಲಿದ್ದು ಪ್ರವಾಹ ಪರಿಸ್ಥಿತಿಯಲ್ಲೇ ಜೀವನಸಾಗಿಸುತ್ತಿದ್ದ ಒಂದು ಮನೆಯಲ್ಲಿ ತುಂಬು ಗರ್ಭಿಣಿಗೆ ಪ್ರಸವಬೇನೆ ಆರಂಭವಾಯಿತು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ಆದರೆ ತಕ್ಷಣಕ್ಕೆ ಯಾವುದೇ ಬೋಟು ದೊರೆಯದ ಕಾರಣ ಏನು ಮಾಡಬೇಕೆಂದು ಆಲೋಚಿಸುತ್ತಿದ್ದಾಗ ನಾಲ್ಕೈದು ಟ್ಯೂಬ್​ಗಳನ್ನು ಕಟ್ಟಿ ಅದರ ಮೇಲೆ ಗರ್ಭಿಣಿಯನ್ನು ಕೂರಿ ಕರೆದೊಯ್ಯುವುದು ಎಂದು ತೀರ್ಮಾನವಾಯಿತು. ಅಂತೆಯೇ ಸಿದ್ಧವಾದ ಟ್ಯೂಬ್​ನ ದೋಣಿಯಲ್ಲಿ ಕರೆದೊಯ್ದು, ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿ ಸುಖ ಪ್ರಸವಕ್ಕೆ ಅವಕಾಶ ಮಾಡಿಕೊಡಲಾಯಿತು.

    ಸಾರ್ವಜನಿಕರೊಬ್ಬರು ಈ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಟ್ವಿಟ್ಟರ್​ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​ ಸೇರಿ ಸಹಸ್ರಾರು ಜನರು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋವನ್ನು ಗಮನಿಸಿದಾಗ ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರ ಸಂಕಷ್ಟವನ್ನು ಪರಿಹರಿಸಲು ಸಾಕಷ್ಟು ಕ್ರಮ ಕೈಗೊಂಡಿರುವುದಾಗಿ ಸರ್ಕಾರಗಳು ನೀಡುತ್ತಿರುವ ಹೇಳಿಕೆಯ ಹುಳುಕುಗಳು ಬಹಿರಂಗಕ್ಕೆ ಬರುತ್ತಿವೆ ಎಂದು ಸ್ವಾತಿ ಮಲಿವಾಲ್​ ಹೇಳಿದ್ದಾರೆ.

    ಕೋವಿಡ್​-19 ಸ್ಕ್ರೀನಿಂಗ್​ಗೆ ಬಂದವು ಸ್ಮಾರ್ಟ್​ ಹೆಲ್ಮೆಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts