More

    ಸಮುದ್ರ ಪ್ರವಾಸೋದ್ಯಮಕ್ಕೆ ಆದ್ಯತೆ

    ಗಂಗೊಳ್ಳಿ: ಕುಂದಾಪುರ ತಾಲೂಕಿನ ಪಂಚಗಂಗಾವಳಿ ನದಿಯ ಹಿನ್ನೀರು ಪ್ರದೇಶಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ನಿರ್ಮಿಸಲಾಗಿರುವ ಗಂಗೋತ್ರಿ ಕ್ರೂಸ್ ಬೋಟ್‌ನಲ್ಲಿ ಹೊಸ ಜಗತ್ತನ್ನೇ ನೋಡಿದ ಅನುಭವ ಆಗುತ್ತಿದೆ. ಕೇರಳದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಇಂಥ ಕ್ರೂಸ್ ಬೋಟ್‌ಗಳು ನಮ್ಮ ರಾಜ್ಯಕ್ಕೆ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ ಎಂದು ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್.ಅಂಗಾರ ಹೇಳಿದರು.

    ಗುಜ್ಜಾಡಿ ಗ್ರಾಮದ ಮಂಕಿಯಲ್ಲಿ ನೂತನ ನಿರ್ಮಿತ ಗಂಗೋತ್ರಿ ಕ್ರೂಸ್ ಬೋಟ್ ಸೋಮವಾರ ವೀಕ್ಷಿಸಿ ಮಾತನಾಡಿದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಗಂಗೊಳ್ಳಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಅಧ್ಯಕ್ಷ ಸದಾಶಿವ ಖಾರ್ವಿ, ನಿರ್ದೇಶಕ ಚಂದ್ರ ಖಾರ್ವಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಭೀಮಾಶಂಕರ ಎಸ್., ಮಣಿ ಖಾರ್ವಿ, ಅಶೋಕ ಎನ್.ಡಿ., ಅಶೋಕ ಪೂಜಾರಿ ಮತ್ತಿತರರಿದ್ದರು. ಸಚಿವ ಎಸ್. ಅಂಗಾರ ಮತ್ತು ಶಾಸಕ ಸುಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಗಂಗೋತ್ರಿ ಕ್ರೂಸ್ ಬೋಟ್‌ನ ಪಾಲುದಾರ ಟಿ.ವಾಸುದೇವ ದೇವಾಡಿಗ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts