More

    ಭೂಮಿಯತ್ತ ಮುಖ ಮಾಡದ ವರುಣ: ಸಾತನೂರು ಗ್ರಾಮದಲ್ಲಿ ಮಳೆರಾಯನಿಗೆ ವಿಶೇಷ ಪ್ರಾರ್ಥನೆ

    ಮಂಡ್ಯ: ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ… ಬಾರೋ ಬಾರೋ ಮಳೆರಾಯ ಬಾಳೆ ತೋಟಕೆ ನೀರಿಲ್ಲ ಎಂದು ತಾಲೂಕಿನ ಸಾತನೂರು ಗ್ರಾಮದಲ್ಲಿ ಮಳೆರಾಯನ ಮೂರ್ತಿ ಸ್ಥಾಪಿಸಿಕೊಂಡು ಮನೆ, ಮನೆಗೆ ತೆರಳಿ ತಣ್ಣೀರನ್ನು ತಲೆಮೇಲೆ ಸುರಿಸಿಕೊಂಡು ಪ್ರಾರ್ಥಿಸಿದ್ದಾರೆ.
    ಗ್ರಾಮದ ಬೀದಿಗಳಲ್ಲಿ ಮಳೆರಾಯನ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಲಾಗುತ್ತದೆ. ತಮಟೆ ಸದ್ದಿಗೆ ಮಕ್ಕಳು ಸಹ ನೃತ್ಯ ಮಾಡಿ ಮನೆಮನೆಯ ಬಳಿ ತಣ್ಣೀರನ್ನು ಸುರಿಸಿಕೊಂಡು ಮುಂದೆ ಸಾಗಲಾಗುತ್ತದೆ. ದಾರಿ ಉದ್ದಕ್ಕೂ ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ಎಂದು ಕೂಗುತ್ತಾ ಹೆಜ್ಜೆ ಹಾಕಿ ಮಳೆಗಾಗಿ ಪ್ರಾರ್ಥಿಸಲಾಗುತ್ತದೆ.
    ಮಳೆರಾಯನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿಕೊಂಡು ಅದನ್ನು ಗ್ರಾಮದ ಸುತ್ತ ಹೊತ್ತು ಮೆರೆಸಲಾಗುತ್ತದೆ. ಜತೆಗೆ ಮಕ್ಕಳು ಸಹ ಭಾಗವಹಿಸಿ ಬೇವಿನ ಸೊಪ್ಪನ್ನು ನಡುವಿಗೆ ಕಟ್ಟಿಕೊಂಡು ತಮಟೆ ಸದ್ದಿಗೆ ನೃತ್ಯ ಮಾಡುತ್ತಾ ಮಳೆರಾಯನ್ನನ್ನ ಕೂಗಿ ಕರೆಯಲಾಯಿತು. ಮನೆಗಳಲ್ಲಿ ಅಕ್ಕಿ, ಬೆಲ್ಲ ಸೇರಿದಂತೆ ಆಹಾರ ಪದಾರ್ಥಗಳನ್ನು ನೀಡುವುದನ್ನು ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಒಟ್ಟಾರೆ ಸೇರಿಸಿಕೊಂಡು ಅಡುಗೆ ತಯಾರಿಸಿ ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತದೆ. ಕಳೆದ 12 ವರ್ಷದ ಹಿಂದೆ ಈ ಮಳೆರಾಯನ ಮೂರ್ತಿಯನ್ನು ಮಣ್ಣಿನಲ್ಲಿ ತಯಾರಿಸಿ ಮೆರವಣಿಗೆ ಮಾಡಿ ಪೂಜೆ ಮಾಡುವ ಮೂಲಕ ಮಳೆ ಬೇಗ ಬರಬೇಕು ಎಂದು ಪ್ರಾರ್ಥನೆ ಮಾಡಿದ್ದೆವು. ಅದೇ ರೀತಿ ಪ್ರಸ್ತುತದಲ್ಲಿ ಬರಗಾಲ ಆವರಿಸಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಮಳೆಗಾಗಿ ಇಡೀ ಗ್ರಾಮಸ್ಥರೇ ಪೂಜೆ ಮಾಡುತ್ತಿರುವುದು ವಿಶೇಷವಾಗಿತ್ತು. ಇನ್ನು ಇಂತಹ ಆಚರಣೆಗೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts