More

    ಹಿಂದುಗಳ ರಕ್ಷಣೆಗಾಗಿ ಕೇಸರಿ ಒಕ್ಕೂಟ ರಚನೆಗೆ ಚಿಂತನೆ

    ಹುಬ್ಬಳ್ಳಿ: ಹಿಂದು ಧರ್ಮ ಹಾಗೂ ಹಿಂದುಗಳ ರಕ್ಷಣೆಗಾಗಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಅಗಸ್ಟ್​ 6ರಂದು ಬೆಂಗಳೂರಿನಲ್ಲಿ ಸಂ ಪರಿವಾರ, ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಪಕ್ಷ ಹೊರತುಪಡಿಸಿ ಇನ್ನುಳಿದ ಎಲ್ಲ ಹಿಂದುಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಅಂದು ಕೇಸರಿ ಒಕ್ಕೂಟ ರಚನೆಯ ಕುರಿತು ನಿರ್ಧರಿಸಲಾಗುವುದು ಎಂದು ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದಶಿರ್ ಧಮೇ0ದ್ರ ಹೇಳಿದರು.
    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ರಾಜಕೀಯ ವ್ಯವಸ್ಥೆ ಅಸ್ಥಿರಗೊಂಡಿದೆ. ಕಾನೂನು ಸುವ್ಯವಸ್ಥೆ ಸಂರ್ಪೂಣವಾಗಿ ನಿರ್ನಾಮಗೊಂಡಿದೆ. ಹಿಂದುಗಳು ಹಾಗೂ ಹಿಂದು ಕಾರ್ಯಕರ್ತರು ನಿರ್ಭಯದಿಂದ ಬದುಕು ನಡೆಸುವುದೇ ಕಷ್ಟವಾಗಿದೆ. ರಾಜ್ಯದಲ್ಲಿ ಹರ್ಷ, ಚಂದ್ರು, ಪ್ರವಿಣನ ಹತ್ಯೆಯ ಹಿಂದೆ ಜಿಹಾದಿ ಮನಸ್ಥಿತಿ ಎದ್ದು ಕಾಣುತ್ತಿದೆ. ಈ ಎಲ್ಲ ಘಟನೆಗಳ ಹಿಂದೆ ಎಸ್​ಡಿಪಿಐ, ಪಿಎಫ್​ಐ ಸಂಟನೆಗಳ ಕೈವಾಡ ಇರುವುದು ಮೇಲ್ನೋಟದ ತನಿಖೆಯಿಂದ ಕಂಡುಬಂದಿದೆ. ಆದರೂ ಸರ್ಕಾರ ನಿಷೇಧಿಸುವ ಎದೆಗಾರಿಕೆ ಆಡಳಿತ ಪಕ್ಷಕ್ಕೆ ಇಲ್ಲದೇ ಇರುವುದು ಖೇದಕರ ಎಂದರು.
    ಬಿಜೆಪಿ ಡಬಲ್​ ಇಂಜಿನ್​ ಸರ್ಕಾರ ಮತೀಯ ಶಕ್ತಿಯನ್ನು ತೊಡೆದು ಹಾಕುವ ಬದಲಾಗಿ, ಅವುಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿವೆ. ಬಿಜೆಪಿ ಯಾವತ್ತೂ ಕೇಸರಿ ಪಕ್ಷವಾಗುವುದಿಲ್ಲ. ಅದರಲ್ಲಿ ಅಲ್ಪಸಂಖ್ಯಾತ ಟಕಗಳಿವೆ. ತಮ್ಮ ಸ್ವಾರ್ಥ ರಾಜಕಾರಣಕ್ಕೆ ಹಿಂದು ಕಾರ್ಯಕರ್ತರನ್ನು ಬಿಜೆಪಿ ಬಲಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದು ಕಾರ್ಯಕರ್ತರ ಜೀವ, ಗೋಮಾತೆ, ಆಸ್ತಿಪಾಸ್ತಿ ರಕ್ಷಣೆಗಾಗಿ ಹಿಂದು ಶಕ್ತಿಗಳು ಒಂದಾಗಿ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದರು.
    ಬೆಂಗಳೂರಿನಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್​ ಅವರ ನೇತೃತ್ವದಲ್ಲಿ ಹಿಂದು ಮಹಾಸಭಾ, ಶಿವ ಸೇನೆ, ಹಿಂದು ಜನಜಾಗೃತಿ ಹಾಗೂ ಸನಾತನ ಸಂಸ್ಥೆ ಸೇರಿದಂತೆ ಇನ್ನಿತರ ಹಿಂದುಪರ ಸಂಟನೆಗಳ ಪ್ರಮುಖರ ಸಭೆ ನಡೆಸಲಾಗುತ್ತಿದೆ. ಅಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸುದೀರ್ ಚರ್ಚೆ ನಡೆಸಿ, ಪ್ರಮುಖ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
    ಸುದ್ದಿಗೋಷ್ಠಿಯಲ್ಲಿ ಶಿವಸೇನೆ ರಾಜ್ಯಾಧ್ಯಕ್ಷ ಕುಮಾರ ಹಕ್ಕಾರಿ, ಅಖಿಲ ಭಾರತ ಹಿಂದು ಮಹಾಸಭಾದ ರಾಜ್ಯ ಕಾರ್ಯದಶಿ ಪ್ರೇಮ್​ ಪೊಳಲಿ, ಪ್ರತಾಪ ಸೌಕೂರು, ಮಂಜುನಾಥ ಸಾವಂತ, ಚಂದ್ರಶೇಖರ ಪಟ್ಟಣಶೆಟ್ಟಿ, ಅರುಣ ಕುಮಾರ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts