More

    ಶ್ರೇಯಸ್ ಅಯ್ಯರ್‌ಗೆ ಶತಕದ ಸಂಭ್ರಮ; ಶೀಘ್ರವೇ ಈಡೇರಲಿದೆ ಬಾಲ್ಯದ ಕೋಚ್ ನೀಡಿದ ಸವಾಲು

    ಕಾನ್ಪುರ: ಬಾಲ್ಯದ ಕೋಚ್ ಪ್ರವೀಣ್ ಸರ್ ಅವರನ್ನು ಊಟಕ್ಕೆ ಆಹ್ವಾನಿಸುವೆ. ನಮ್ಮ ಮನೆಯಲ್ಲಿ ರಾತ್ರಿ ಭೋಜನಕ್ಕೆ ವ್ಯವಸ್ಥೆ ಮಾಡುವೆ ಎಂದು ಪದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ಹೇಳಿಕೊಂಡಿದ್ದಾರೆ. ಇದಕ್ಕೂ ಕಾರಣವೂ ಇದೆ. ಅದೇನು ಅಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದರೆ ನೀನು ಇರುವ ಸ್ಥಳಕ್ಕೆ ಬಂದು ಊಟ ಮಾಡುವೆ ಎಂದು ಒಮ್ಮೆ ಪ್ರವೀಣ್ ಆಮ್ರೆ, ಶ್ರೇಯಸ್ ಅಯ್ಯರ್‌ಗೆ ಮಾತು ನೀಡಿದರಂತೆ. ಇದೀಗ ಧೈರ್ಯದಿಂದ ಅವರನ್ನು ಊಟಕ್ಕೆ ಕರೆಯಬಹುದು ಎಂದು ಶ್ರೇಯಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

    ಶ್ರೇಯಸ್ ಅಯ್ಯರ್, ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ 16ನೇ ಬ್ಯಾಟರ್ ಎನಿಸಿಕೊಂಡರು. ಶೀಘ್ರವೇ ಅವರಿಗೆ ಊಟಕ್ಕೆ ಬರಲು ಮೆಸೇಜ್ ಹಾಕುವೆ ಎಂದು ಶ್ರೇಯಸ್ ಸುದ್ದಿಗೋಷ್ಠಿಯಲ್ಲಿ ತಮ್ಮ ಬಹುದಿನಗಳ ಟಾಸ್ಕ್ ಕುರಿತು ಬಹಿರಂಗ ಪಡಿಸಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಲಾಲಾ ಅಮರ್‌ನಾಥ್, ಜಿಆರ್ ವಿಶ್ವನಾಥ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಾಲಿಗೆ ಶ್ರೇಯಸ್ ಸೇರ್ಪಡೆಗೊಂಡಿದ್ದಾರೆ.

    ಶ್ರೇಯಸ್ ಅಯ್ಯರ್ ತವರಿನಲ್ಲಿ ಪದಾರ್ಪಣೆ ಟೆಸ್ಟ್‌ನಲ್ಲೇ ಶತಕ ಸಿಡಿಸಿದ ಭಾರತದ 10ನೇ ಬ್ಯಾಟರ್ ಎನಿಸಿಕೊಂಡರು. ಅಲ್ಲದೆ, ದಿಗ್ಗಜ ಜಿಆರ್ ವಿಶ್ವನಾಥ್ ಬಳಿಕ ಕಾನ್ಪುರದಲ್ಲಿ ಪದಾರ್ಪಣೆ ಟೆಸ್ಟ್‌ನಲ್ಲೇ ಶತಕ ಬಾರಿಸಿದ 2ನೇ ಬ್ಯಾಟರ್. ಪದಾರ್ಪಣೆ ಟೆಸ್ಟ್‌ನಲ್ಲೇ ಶತಕ ಸಿಡಿಸಿದ ಬ್ಯಾಟರ್‌ಗಳ ಪೈಕಿ ಕಡೇ ಮೂವರು ಮುಂಬೈನವರೇ ಆಗಿರುವುದು ವಿಶೇಷ. ರೋಹಿತ್ ಶರ್ಮ, ಪೃಥ್ವಿ ಷಾ ಈ ಹಿಂದಿನ ಸಾಧಕರು.

    ಪದಾರ್ಪಣೆ ಪಂದ್ಯದಲ್ಲೇ ಶ್ರೇಯಸ್ ಸೆಂಚುರಿ; ಬಾಲ್ಯದ ಕೋಚ್ ಹಾದಿಯಲ್ಲೇ ಸಾಗಿದ ಮುಂಬೈ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts