More

    ‘ರೈತರ ದಾರಿ ತಪ್ಪಿಸಿದವರನ್ನೇ ಮುಖಂಡನಾಗಿ ಮಾಡಿಕೊಂಡಿರುವ ಸಾರಿಗೆ ನೌಕರರು ದಾರಿ ತಪ್ಪದೆ ಇರ್ತಾರಾ?’

    ಮೈಸೂರು: ರೈತರ ದಾರಿ ತಪ್ಪಿಸಿದವರನ್ನೇ ಸಾರಿಗೆ ನೌಕರರು ತಮ್ಮ ನಾಯಕನಾಗಿ ಮಾಡಿಕೊಂಡಾಗ ಅವರು ದಾರಿ ತಪ್ಪದೆ ಇರುತ್ತಾರಾ? ಎಂದು ಸಾರಿಗೆ ನೌಕರರ ಪ್ರತಿಭಟನೆಯ ಬಗ್ಗೆ ವ್ಯಂಗ್ಯವಾಡಿದ ಸಂಸದ ಪ್ರತಾಪ್​ ಸಿಂಹ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಡೆಯನ್ನು ಟೀಕಿಸಿದರು. ​

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ಕೆಎಸ್ಆರ್​ಟಿಸಿ ನೌಕರರು ತಮ್ಮ ನಾಯಕನಾಗಿ ಮಾಡಿಕೊಂಡಿದ್ದು ತಪ್ಪು ಎಂದು ಹೆಸರೇಳದೆ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರೊ.‌ನಂಜುಂಡಸ್ವಾಮಿ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಖಂಡರು ಮತ್ತು ಅವರ ಹೋರಾಟದ ಬಗ್ಗೆ ಗೌರವವಿತ್ತು. ಅವರಿಬ್ಬರು ಅಸ್ತಂಗತ ಆದ ನಂತರ ಈಗ ಅಂತಹ ಮುಖ ಹೋರಾಟಗಳಲ್ಲಿ ಇಲ್ಲ. ಈಗ ಇರುವವರು ಖಾಲಿ ಹೋರಾಟಗಾರರು. ಹಾಗಾಗಿ ಇಂತಹ ಹೋರಾಟಗಾರರನ್ನು ನಂಬಿದರೆ ನೌಕರರು ಸಹ ದಾರಿ ತಪ್ಪುತ್ತಾರೆ ಎಂದರು.

    ಇದನ್ನೂ ಓದಿರಿ: ಚಾಣಕ್ಯನ ಈ ನೀತಿಯನ್ನು ಅನುಸರಿಸಿದರೆ ನಿಮಗೆಂದೂ ಸೋಲಿನ ಅನುಭವ ಆಗುವುದೇ ಇಲ್ಲ!

    ನಾವು ಎಲ್ಲ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಸಂಕಷ್ಟದಲ್ಲಿ ಇರುವಾಗ ಕೆಎಸ್ಆರ್​ಟಿಸಿ ನೌಕರರು ಈ ರೀತಿ ಹೋರಾಟಕ್ಕೆ ಇಳಿಯುವುದು ತಪ್ಪು. ಇದು ಮುಂದುವರಿದರೆ ಜನರೇ ಈ ವಿಭಾಗದಲ್ಲೂ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನ ಈ ಬಗ್ಗೆ ಧ್ವನಿ ಎತ್ತುವಂತೆ ಮಾಡಬೇಡಿ ಎಂದು ಹೇಳಿದರು.

    ಜಾಸ್ತಿ ಕೆಲಸ ಮಾಡುವ ನಿಮ್ಮ ಮೇಲೆ ಜನ ಪ್ರೀತಿ ಇಟ್ಟಿದ್ದಾರೆ. ಆ ಪ್ರೀತಿ ಕಳೆದು ಕಳೆದುಕೊಳ್ಳಬೇಡಿ. ಎಸ್ಮಾ ಜಾರಿ ಮಾಡಿ ಬಲವಂತವಾಗಿ ಕೆಲಸಕ್ಕೆ ಹಾಜರಾಗುವಂತಹ ಪರಿಸ್ಥಿತಿ ತಂದು ಕೊಳ್ಳಬೇಡಿ. ಎಸ್ಮಾ ಜಾರಿಯ ಅನಿರ್ವಾಯತೆಯನ್ನು ಸರಕಾರಕ್ಕೆ ತಂದಿಡಬೇಡಿ ಎಂದರು.

    ಸಿದ್ದರಾಮಯ್ಯ ಈಗ ಬೇಡಿಕೆ ಈಡೇರಿಸಿ ಎನ್ನುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲೇ ಆ ಕೆಲಸ ಮಾಡಬಹುದಿತಲ್ವಾ? ಸಿದ್ದರಾಮಯ್ಯ ಅವರ ಇವತ್ತಿನ ಮಾತನ್ನು ಜನರು ಮೆಚ್ಚಲ್ಲ. ಅವರ ಆತ್ಮಸಾಕ್ಷಿಯೂ ಮೆಚ್ಚಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿದರು. (ದಿಗ್ವಿಜಯ ನ್ಯೂಸ್​)

    ಕರೊನಾ ಲಸಿಕೆಯ ಎರಡನೇ ಡೋಸ್​ ಪಡೆದ ಪ್ರಧಾನಿ ಮೋದಿ: ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳಲು ಕರೆ!

    ವಿಜಯವಾಣಿ ವರದಿ ಪರಿಣಾಮ: ಕುಡಿವ ನೀರಿಗೆ 100 ಕೋಟಿ ರೂ. ಅನುದಾನ ನೀಡಿದ ಸರ್ಕಾರ

    ವಿಗ್ರಹಾರಾಧನೆ ಹಿಂದಿನ ಉದ್ದೇಶ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts