More

    ಟೀಮ್ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧಕೃಷ್ಣ

    ಪುಣೆ: ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಬಳಿಕ ಟೀಮ್ ಇಂಡಿಯಾಗೆ ಕರ್ನಾಟಕದ ಮತ್ತೋರ್ವ ವೇಗಿಯ ಪ್ರವೇಶವಾಗಿದೆ. ಅದೂ ಕನಸಿನ ಪದಾರ್ಪಣೆಯ ಮೂಲಕ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಪ್ರಸಿದ್ಧಕೃಷ್ಣ ಅವರೇ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಹೊಸ ಕೊಡುಗೆಯಾಗಿದ್ದಾರೆ. ಪದಾರ್ಪಣೆಯ ಪಂದ್ಯದಲ್ಲೇ 8.1 ಓವರ್‌ಗಳ ದಾಳಿಯಲ್ಲಿ 54 ರನ್‌ಗೆ 4 ವಿಕೆಟ್ ಕಬಳಿಸುವ ಮೂಲಕ ಬೆಂಗಳೂರಿನ ವೇಗಿ ಹೊಸ ದಾಖಲೆಯನ್ನೂ ಬರೆದಿದ್ದಾರೆ.

    ಪ್ರಸಿದ್ಧಕೃಷ್ಣ ಅವರು ಭಾರತ ಏಕದಿನ ಕ್ರಿಕೆಟ್ ಪದಾರ್ಪಣೆಯ ಪಂದ್ಯದಲ್ಲೇ 4 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿದ್ದಾರೆ. ಈ ಹಿಂದೆ ಭಾರತದ 9 ಬೌಲರ್‌ಗಳು ಪದಾರ್ಪಣೆಯ ಪಂದ್ಯದಲ್ಲೇ ತಲಾ 3 ವಿಕೆಟ್ ಕಬಳಿಸಿದ್ದೇ ಗರಿಷ್ಠವೆನಿಸಿತ್ತು. 25 ವರ್ಷದ ಪ್ರಸಿದ್ಧಕೃಷ್ಣ ಅವರು ಇದೀಗ ಹೊಸ ಇತಿಹಾಸ ಬರೆದಿದ್ದಾರೆ.

    ಇದನ್ನೂ ಓದಿ: ಫೋಟೋಶೂಟ್​ನಲ್ಲಿ ಮಹಿಳಾ ಕ್ರಿಕೆಟರ್ ಜೂಲನ್​​ಗೆ ಅವಮಾನ ಮಾಡಿದರೇ ಬಾಲಿವುಡ್​ ನಟಿ ಅಹನಾ?

    ಪ್ರಸಿದ್ಧ ಕೃಷ್ಣ ಪದಾರ್ಪಣೆ ಪಂದ್ಯದಲ್ಲಿ ಎಸೆದ ಇಂಗ್ಲೆಂಡ್ ಇನಿಂಗ್ಸ್‌ನ 6ನೇ ಓವರ್‌ನಲ್ಲಿ ಬೇರ್‌ಸ್ಟೋ ತಲಾ 2 ಸಿಕ್ಸರ್, 4 ಬೌಂಡರಿ ಒಳಗೊಂಡಂತೆ 22 ರನ್ ಕಸಿದರು. ಬಳಿಕ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಪ್ರಸಿದ್ಧಕೃಷ್ಣ ಅವರೇ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಆಂಗ್ಲರ ದಿಕ್ಕು ತಪ್ಪಿಸಿದರು. ಆರಂಭಿಕ 19 ಎಸೆತಗಳಲ್ಲಿ 41 ರನ್ ಚಚ್ಚಿಸಿಕೊಂಡಿದ್ದ ಬೆಂಗಳೂರಿನ ಬೌಲರ್, ಬಳಿಕ 17 ಎಸೆತಗಳಲ್ಲಿ ಕೇವಲ 5 ರನ್ ನೀಡಿ 2 ವಿಕೆಟ್ ಕಬಳಿಸಿದರು.

    ಪ್ರಸಿದ್ಧ ಕೃಷ್ಣ ಭಾರತ ಪರ ಆಡಿದ ಕರ್ನಾಟಕದ 32ನೇ ಕ್ರಿಕೆಟಿಗ ಎನಿಸಿದರು. ಪ್ರಸಿದ್ಧ ಕೃಷ್ಣ ಭಾರತದ ಪರ ಏಕದಿನ ಕ್ರಿಕೆಟ್ ಆಡಿದ 234ನೇ ಆಟಗಾರರೆನಿಸಿದರು. ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಪರ ಮಿಂಚಿದ್ದ ಪ್ರಸಿದ್ಧಕೃಷ್ಣ, ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ಪರ 7 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ ಸಾಧನೆಯ ಬಲದೊಂದಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಈ ಮುನ್ನ ನಾಯಕ ವಿರಾಟ್ ಕೊಹ್ಲಿ ಅವರ ಗಮನವನ್ನೂ ಸೆಳೆದಿದ್ದ ಪ್ರಸಿದ್ಧಕೃಷ್ಣ, ಇದೀಗ ಮೊದಲ ಪಂದ್ಯದಲ್ಲೇ ‘ಪ್ರಸಿದ್ಧ ಗೆಲುವು’ ಕೊಡಿಸುವ ಮೂಲಕ ಎಲ್ಲರ ಭರವಸೆಗಳನ್ನು ಉಳಿಸಿಕೊಂಡಿದ್ದಾರೆ.

    ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ ತಂಡ, 66 ರನ್​ಗಳಿಂದ ಇಂಗ್ಲೆಂಡ್​ ವಿರುದ್ಧ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts