More

    ಪೇಜಾವರಶ್ರೀ-ಮುತಾಲಿಕ್ ಭೇಟಿ; ಹಿಂದು ಜಾಗೃತಿ ಕುರಿತು ಮಾತುಕತೆ..

    ಉಡುಪಿ: ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿರ್ಬಂಧದ ನಡುವೆಯೂ ಉಡುಪಿಗೆ ಭೇಟಿ ನೀಡಿದ್ದು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜ್ಯದ ಪ್ರಸಕ್ತ ಬೆಳವಣಿಗೆಗಳು ಹಾಗೂ ಹಿಂದು ಜಾಗೃತಿ ಕುರಿತು ಇಬ್ಬರ ನಡುವೆ ಮಾತುಕತೆ ನಡೆದವು.

    ಉಡುಪಿಯಲ್ಲಿ ಆರಂಭವಾದ ಘಟನೆ ಇಡೀ ರಾಜ್ಯವನ್ನು ಬಡಿದೆಬ್ಬಿಸಿದೆ. ಈ ಬೆಳವಣಿಗೆ ನಿಧಾನವಾಗಿ ತಣ್ಣದಾಗುತ್ತ ಹೋಗುತ್ತದೆ. ಆದರೆ ನಾವು ಹಿಂದುಗಳಲ್ಲಿ ನಿರಂತರ ಜನಜಾಗೃತಿ ಮಾಡುತ್ತಿರಬೇಕು ಎಂದು ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟರು.

    ಹಲಾಲ್ ಜಾಗೃತಿಯಿಂದ ಬೆಂಗಳೂರಿನಲ್ಲಿ 40ಕ್ಕೂ ಅಧಿಕ ಮುಸಲ್ಮಾನ ಅಂಗಡಿಗಳು ಮುಚ್ಚಲ್ಪಟ್ಟವು, ಮುಸ್ಲಿಮರಿಗೆ ಕೋಟ್ಯಂತರ ರೂಪಾಯಿ ನಷ್ಟವಾಯಿತು. ವ್ಯಾಪಾರಕ್ಕೆ ಸಮಸ್ಯೆಯಾದರೆ ಸೌಹಾರ್ದತೆ ಎನ್ನುತ್ತಾರೆ, ಹಿಂದುಗಳ ಕೊಲೆಯಾದರೆ ಯಾಕೆ ಸೌಹಾರ್ದತೆ ನೆನಪಿಗೆ ಬರಲ್ಲ ಎಂದು ಮುತಾಲಿಕ್ ಹೇಳಿದರು. ಗೋಕಳ್ಳರ ಬಗ್ಗೆ ಆತಂಕ ವ್ಯಕ್ತಪಡಿಸಿದ ಪೇಜಾವರ ಶ್ರೀ, ಗೋವಿನಲ್ಲಿ ಶ್ರೇಷ್ಠ ಎನಿಸಿರುವ ಕಪಿಲೆ ಹಸುವನ್ನೇ ಕದ್ದೊಯ್ಯುತ್ತಿದ್ದಾರೆ ಎಂದು ಪೇಜಾವರಶ್ರೀ ತೀವ್ರ ಬೇಸರ ವ್ಯಕ್ತಪಡಿಸಿದರು.

    ಇನ್ನು ಈ ಹಿಂದೆ ಮುಸ್ಲಿಂ ವ್ಯಾಪಾರಿಗಳು ಭೇಟಿಯಾಗಿದ್ದಾಗ ಪೇಜಾವರಶ್ರೀ ನೀಡಿದ್ದ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡ ಮುತಾಲಿಕ್, ಮುಸಲ್ಮಾನ ವ್ಯಾಪಾರಿಗಳಿಗೆ ನೀವು ಅಂದು ಕೊಟ್ಟ ಉತ್ತರ ಅದ್ಭುತವಾಗಿತ್ತು. ನಿಮ್ಮ ವರ್ತನೆಗಳನ್ನು ತಿದ್ದಿಕೊಂಡು ನಂತರ ಬನ್ನಿ ಎಂದು ಸರಿಯಾಗಿಯೇ ಇದೆ ಎಂದು ಶ್ರೀಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಅದನ್ನು ಉದ್ದೇಶಪೂರ್ವಕವಾಗಿ ಹೇಳಿರಲಿಲ್ಲ. ಆದರೆ ವಾಸ್ತವಾಂಶ ಹೇಳಿದ್ದೇನೆ ಎಂದು ಪೇಜಾವರಶ್ರೀಗಳು ಪ್ರತಿಕ್ರಿಯಿಸಿದರು.

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಬೆಟ್ಟದ ಇಳಿಜಾರಿನಲ್ಲಿ ಅಪಘಾತಕ್ಕೀಡಾಯ್ತು 90 ಜನರಿದ್ದ ಬಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts