More

    ರೌಡಿಗಳು ಬಿಜೆಪಿ ಸೇರ್ಪಡೆ ಶೋಭೆ ತರುವುದಿಲ್ಲ ಹಿಂದುಪರ ಸಂಘಟನರ ಮುಖಂಡ ಮುತಾಲಿಕ್ ಟೀಕೆ

    ಕೊಪ್ಪಳ: ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬಿಜೆಪಿಗೆ ಶೋಭೆ ತರುವುದಿಲ್ಲ. ದುಡ್ಡಿದ್ದವರು, ರೌಡಿಗಳು, ಗೂಂಡಾಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿಮಗೆ ತ್ಯಾಗ, ಬಲಿದಾನ ಮಾಡುವ ಹಿಂದು ಕಾರ್ಯಕರ್ತರು ಕಾಣಿವುದಿಲ್ಲವೆಂದು ಹಿಂದುಪರ ಸಂಘಟನೆ ಮುಖಂಡ ಪ್ರಮೋದ ಮುತಾಲಿಕ್ ಟೀಕಿಸಿದರು.

    ಅಂಜನಾದ್ರಿಗೆ ಸೋಮವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

    ನಾನು ಹಾಗೂ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ ರಾಜಕೀಯ ಪ್ರವೇಶ ನಿರ್ಧಾರ ಮಾಡಿದಾಗ ಅದನ್ನು ಕಡೆಗಣಿಸಿದರು. ಇದೀಗ ಗೂಂಡಾಗಳನ್ನ ಸೇರಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ನೈತಿಕತೆ ಕಳೆದುಕೊಂಡಿದ್ದು, ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಹಿಂದುಪರ ಸಂಘಟನೆಗಳ 25 ಪ್ರಮುಖ ನಾಯಕರನ್ನು ಕಣಕ್ಕಿಳಿಸುತ್ತೇವೆ. ಐವರು ಸ್ವಾಮೀಜಿಗಳು ಈಗಾಗಲೇ ತಯಾರಿ ನಡೆಸಿದ್ದಾರೆ ಎಂದರು.

    ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಕೊಟ್ಟಿರುವ ಸರ್ಕಾರದ ಕ್ರಮ ಅಭಿನಂದನೀಯ. ಅದರಂತೆ ಬೆಟ್ಟದ 500 ಮೀಟರ್ ವ್ಯಾಪ್ತಿಯಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ನಿಷೇಧ ಹೇರಬೇಕು. ಅವಕಾಶ ಕೊಟ್ಟರೆ ಹನುಮ ಭಕ್ತರು ಸರಿಯಾದ ಉತ್ತರ ನೀಡುತ್ತಾರೆ. ಚುನಾವಣೆ ಇದೆ ಎಂದು ಸರ್ಕಾರ ಅಂಜನಾದ್ರಿ ಅಭಿವೃದ್ಧಿ ಮಾಡುವುದಾಗಿ ಬೋಗಳೆ ಬೀಡಬಾರದು. ನಿಜವಾಗಿಯೂ ಅಭಿವೃದ್ಧಿ ಕೈಗೊಳ್ಳಬೇಕು. ನೂರಕ್ಕೆ ನೂರರಷ್ಟು ಅಂನಾದ್ರಿ ಅಭಿವೃದ್ಧಿ ಆಗುವ ನಂಬಿಕೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts