More

    ಇನ್ನಾದರೂ ನ್ಯಾಯ ಸಿಗಲಿ; ಕಾಶ್ಮೀರಿ ಪಂಡಿತರ ಬಗ್ಗೆ ಪ್ರಕಾಶ್ ಬೆಳವಾಡಿ ಮಾತು

    ವಿಜಯಾನಂದದಲ್ಲಿ ಶೋಭೆ ತರುವ ಪಾತ್ರ

    ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ನಿರ್ವಣವಾಗುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ಬೆಳವಾಡಿ, ಈ ಬಗ್ಗೆ ಖುಷಿ ವ್ಯಕ್ತಪಡಿಸಿದರು. ‘ನಾವು ಬೇರೆ ರಾಜ್ಯಗಳ ಉದ್ಯಮಿಗಳನ್ನು ಗುರುತಿಸುತ್ತೇವೆ. ಆದರೆ, ನಮ್ಮವರನ್ನು ಗುರುತಿಸುವುದಿಲ್ಲ. ಇದು ಕನ್ನಡದ ಹೆಮ್ಮೆಯ ಮತ್ತು ಮಾದರಿ ಉದ್ಯಮಿಯ ಕಥೆ. ಈ ಚಿತ್ರವನ್ನು ಬಹಳ ಅಭಿಮಾನದಿಂದಲೇ ಒಪ್ಪಿದೆ. ಇದೊಂದು ತೂಕ ಇರುವ ಚಿತ್ರ. ಸಣ್ಣ ಪಾತ್ರವಾದರೂ, ಶೋಭೆ ತರುವ ಪಾತ್ರ. ಈ ಚಿತ್ರವು ಮಾದರಿಯಾಗುತ್ತದೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಪ್ರಕಾಶ್ ಬೆಳವಾಡಿ.

    ‘ಚರ್ಚೆ ಆಗಿ ಸಮಾಧಾನ ಸಿಗಬೇಕು. ಅದು ಬಿಟ್ಟು, ಘಟನೆಯೇ ನಡೆದಿಲ್ಲ, ಕಾಶ್ಮೀರಿ ಪಂಡಿತರಿಗೆ ಏನೂ ಆಗಿಲ್ಲ ಎಂದರೆ ಹೇಗೆ?’ ಸಿಟ್ಟಿನಿಂದಲೇ ಪ್ರಶ್ನಿಸುತ್ತಾರೆ ಪ್ರಕಾಶ್ ಬೆಳವಾಡಿ. ಅವರ ಸಿಟ್ಟಿಗೂ ಕಾರಣವಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ‘ದಿ ಕಶ್ಮೀರ್ ಫೈಲ್ಸ್’ ಚಿತ್ರದಲ್ಲಿ ತೋರಿಸಿದ್ದು ಸುಳ್ಳು, ಅಂತಹ ಘಟನೆಗಳೇ ನಡೆದಿಲ್ಲ ಎಂಬಂತಹ ವಾದವೊಂದು ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಈ ಚಿತ್ರದಿಂದ ದ್ವೇಷ ಬಿತ್ತಲಾಗುತ್ತದೆ ಎಂದೂ ಆರೋಪಿಸಲಾಗುತ್ತಿದೆ. ಈ ಬಗ್ಗೆ ಪ್ರಕಾಶ್ ಬೆಳವಾಡಿ ಏನನ್ನುತ್ತಾರೆ? ಅವರಿಗೇ ಈ ಪ್ರಶ್ನೆ ಕೇಳುವುದಕ್ಕೂ ಕಾರಣವಿದೆ. ಪ್ರಕಾಶ್ ಬೆಳವಾಡಿ ಆ ಚಿತ್ರದಲ್ಲಿ ನಟಿಸುವುದರ ಜತೆಗೆ, ಪತ್ರಕರ್ತರಾಗಿದ್ದವರು. ಸೂಕ್ಷ್ಮಸಂವೇದನೆ ಉಳ್ಳವರು. ಯಾವುದೇ ವಿಷಯದ ಬಗ್ಗೆ ತರ್ಕಬದ್ಧವಾಗಿ ಮಾತನಾಡಬಲ್ಲವರು. ಅವರು ಈ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ಸಹಜ. ‘ಚಿತ್ರದಲ್ಲೊಂದು ಸಂಭಾಷಣೆ ಇದೆ. ಆಗ ನಮ್ಮ ಸಂಖ್ಯೆ ಶೇ. 100ರಷ್ಟು ಇತ್ತು. ಈಗ ಶೇ.5ರಷ್ಟಿದೆ ಎಂಬ ಮಾತಿದೆ. ಹೀಗೆ ಕಡಿಮೆಯಾಗುವುದಕ್ಕೆ ಕಾರಣವೇನು? ಎಷ್ಟೋ ಜನ ಸತ್ತರೆ, ಇನ್ನೆಷ್ಟೋ ಜನ ಊರು ಬಿಟ್ಟು ಹೋಗಿದ್ದಾರೆ, ಇನ್ನೂ ರೆಫ್ಯುಜಿ ಕ್ಯಾಂಪ್​ಗಳಲ್ಲಿದ್ದಾರೆ. ಕಾಶ್ಮೀರದಲ್ಲಿ ಏನೂ ಆಗಿಲ್ಲ, ಗಛಿ ಡಿಜ್ಝಿ್ಝ ಞಟಡಛಿ ಟ್ಞ ಅಂದರೆ, ಅಷ್ಟು ಸುಲಭವಾ? ಅವರಿಗೆ ನ್ಯಾಯ ಸಿಗಬೇಡವೇ? ಅನ್ಯಾಯ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಅದು ಬಿಟ್ಟು ಏನೂ ಆಗಿಲ್ಲ ಎನ್ನುವುದು ತಪು್ಪ. ಏನೂ ಆಗಿಲ್ಲ ಎನ್ನುವ ಮನಸ್ಥಿತಿ ಬದಲಾಗಬೇಕಾದರೆ ಸತ್ಯ ಗೊತ್ತಾಗಬೇಕು ಮತ್ತು ‘ಕಶ್ಮೀರ್ ಫೈಲ್ಸ್’ ಅಂತಹ ಸತ್ಯವನ್ನು ತೋರಿಸಿದೆ. ಇಲ್ಲಿ ತೋರಿಸಿರುವುದು ಶೇ. 10ರಷ್ಟು ಮಾತ್ರ, ಇನ್ನೂ ಸಾಕಷ್ಟು ವಿಷಯಗಳಿವೆ’ ಎಂಬುದು ಅವರ ಅಭಿಪ್ರಾಯ.

    ಸರ್ಕಾರ ಪರಿಹಾರ ಹುಡುಕಬೇಕು: ಹಾಗಾದರೆ, ಕಾಶ್ಮೀರಿ ಪಂಡಿತರು ಅನುಭವಿಸಿದ ನೋವಿಗೆ ಪರಿಹಾರವೇನು? ಎಂದರೆ, ‘ಪುನರ್ವಸತಿ ಕಷ್ಟ. ಆದರೆ, ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗ ಅಂತ ಬಂದಾಗ, ಸರ್ಕಾರ ಏನಾದರೂ ಮಾಡಬೇಕು. ಅದರಲ್ಲೂ, ಮೋದಿ ಸರ್ಕಾರದ ಮೇಲೆ ಕಾಶ್ಮೀರಿ ಪಂಡಿತರಿಗೆ ನಂಬಿಕೆ ಇದೆ. ಎಷ್ಟೇ ಕಷ್ಟ ಆದರೂ ಒಂದು ಪರಿಹಾರ ಹುಡುಕಬೇಕು. ಒಂದು ರಾಜ್ಯದಲ್ಲಿ ಒಬ್ಬರಿಗೆ ದೌರ್ಜನ್ಯವಾದರೆ ಅವರಿಗೆ ಏನು ಪರಿಹಾರ ಸಿಗುತ್ತದೋ, ಇನ್ನೊಂದು ರಾಜ್ಯದಲ್ಲೂ ಸಿಗಬೇಕು’ ಎಂದು ಮನವಿ ಮಾಡಿಕೊಳ್ಳುತ್ತಾರೆ ಅವರು.

    ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ: ‘ದಿ ಕಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಡಾ. ಮಹೇಶ್ ಪಾತ್ರ ಮಾಡುವುದಕ್ಕೆ ಅವಕಾಶ ಸಿಕ್ಕಾಗ, ಈ ಚಿತ್ರ ಪ್ರಭಾವ ಬೀರಲಿದೆ, ಚಿತ್ರಕ್ಕೆ ಜನಸ್ಪಂದನೆ ಸಿಗಲಿದೆ ಎಂದು ಗೊತ್ತಿತ್ತಂತೆ. ‘ವಿವೇಕ್ ಈ ಹಿಂದೆ ‘ದಿ ತಾಷ್ಕೆಂಟ್ ಫೈಲ್ಸ್’ ಚಿತ್ರ ಮಾಡಿದ್ದರು. ಅದು ಸ್ಲೀಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ದೊಡ್ಡ ಮಟ್ಟದ ಶಕ್ತಿ ಇದೆ ಮತ್ತು ಜನಸ್ಪಂದನೆ ಸಿಗುತ್ತದೆ ಎಂದು ಗೊತ್ತಿತ್ತು. ಆದರೆ, ಈ ಮಟ್ಟದ ಪ್ರತಿಕ್ರಿಯೆ ನಿರೀಕ್ಷೆ ಮಾಡಿರಲಿಲ್ಲ’ ಎನ್ನುತ್ತಾರೆ ಪ್ರಕಾಶ್ ಬೆಳವಾಡಿ.

    ಸ್ಕ್ರಿಪ್ಟ್ ಓದಿ ಕಣ್ಣೀರು ಬಂತು: ಸ್ಕ್ರಿಪ್ಟ್ ಓದಿದಾಗ ಅವರಿಗೆ ಮೊದಲು ಶಾಕ್ ಆಯಿತಂತೆ. ‘ಕಾಶ್ಮೀರಿ ಪಂಡಿತರಿಗೆ ಅನ್ಯಾಯ ಆಗಿದೆ ಎಂದು ಗೊತ್ತಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಆಗಿದೆ ಎಂದು ಗೊತ್ತಿರಲಿಲ್ಲ. ಸ್ಕ್ರಿಪ್ಟ್ ಓದಿದಾಗ ಕಣ್ಣೀರು ಬಂತು. ಮೂರು ಬಾರಿ ಚಿತ್ರ ನೋಡಿದಾಗಲೂ ಕಣ್ಣೀರು ಬಂತು. ಕಾಶ್ಮೀರದಲ್ಲಿ ಈ ಘಟನೆಗಳಾದಾಗ ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಆದರೆ, ಏನೂ ಮಾಡುವುದಕ್ಕೆ ಆಗಲಿಲ್ಲ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಏಕೆಂದರೆ, ಇದು ಬರೀ ಸರ್ಕಾರದ ವೈಫಲ್ಯ ಮಾತ್ರವಲ್ಲ. ಅಧಿಕಾರಿಶಾಹಿಗಳು, ಪೊಲೀಸರು ಸೇರಿದಂತೆ ಸಮಾಜದ ಬೇರೆ ವರ್ಗದವರ ವೈಫಲ್ಯವಿದೆ. ತಪು್ಪ ಮಾಡಿದವರಿಗೆ ಶಿಕ್ಷೆ ಆಗಬೇಕು ಮತ್ತು ಅನ್ಯಾಯವಾದವರಿಗೆ ಪರಿಹಾರ ಸಿಗಬೇಕು. ಅವರು ವಾಪಸ್ಸು ಹೋಗಿ ಕಾಶ್ಮೀರ ದಲ್ಲಿ ನೆಲೆಗೊಳ್ಳುವಂತೆ ಮಾಡಬೇಕು’ ಎಂಬ ಸಲಹೆ ಅವರಿಂದ ಬರುತ್ತದೆ.

    ಪುನೀತ್ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ; ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ, ಕುಟುಂಬಸ್ಥರಿಗೆ ಸಾಂತ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts