More

    ಕಾಂಗ್ರೆಸ್​​​​ನವರು ಮಾಡುವುದು ಒಂದೇ ಧ್ಯಾನ; ಅದು ದುಡ್ಡು, ಅಧಿಕಾರ ಮತ್ತು ಭ್ರಷ್ಟಾಚಾರ..!

    ಧಾರವಾಡ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು 10 ನಿಮಿಷ ಧ್ಯಾನ ಮಾಡಬೇಕಿರುವುದು ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿದ ನಂತರದ ಬೆಳವಣಿಗೆಗಳು, ದಿನಕ್ಕೊಂದು ತಿರುವು ಪಡೆಯತೊಡಗಿವೆ.

    ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್​​​ಗಳ ಮೂಲಕ ಧ್ಯಾನಕ್ಕಿಂತ ಶಿಕ್ಷಣ ಮುಖ್ಯ ಎಂದು ಸಚಿವ ಬಿ.ಸಿ. ನಾಗೇಶ್​​​​ರ ನಡೆಯನ್ನು ಎರಡು ದಿನಗಳ ಹಿಂದೆ ಟೀಕಿಸಿದ್ದರು. ಹೀಗೆ ಧ್ಯಾನ ಕುರಿತ ಪರ-ವಿರೋಧದ ಚರ್ಚೆಗಳ ನಡುವೆ, ಇದೀಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್​​​ಗೆ ತಿರುಗೇಟು ಕೊಟ್ಟಿದ್ದಾರೆ.

    ಕಾಂಗ್ರೆಸ್​​​ನವರು ದುಡ್ಡು, ಅಧಿಕಾರ ಮತ್ತು ಭ್ರಷ್ಟಾಚಾರದ ಧ್ಯಾನ ಮಾಡುತ್ತಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸೋನಿಯಾ, ರಾಹುಲ್ ಗಾಂಧಿ, ಇಟಲಿ ಧ್ಯಾನ ಮಾತ್ರ ಮಾಡುತ್ತಾರೆ ಕಾಂಗ್ರೆಸ್​​​ನವರು ಎಂದು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಭಗವದ್ಗೀತೆಯನ್ನೂ ವಿರೋಧಿಸುತ್ತದೆ, ತ್ರಿವಳಿ ತಲಾಖ್ ಆದೇಶ ಸಹ ತಿರುವು-ಮುರುವು ಮಾಡಿದ್ದರು, ಯೋಗಕ್ಕೂ ಕಾಂಗ್ರೆಸ್​​ ವಿರೋಧವಿತ್ತು, ಮಕ್ಕಳಲ್ಲಿ ಏಕಾಗ್ರತೆ ಬೆಳೆಸಲು ಮಾತ್ರ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

    ಧ್ಯಾನದಿಂದ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುವುದೇ ಹಾಸ್ಯಾಸ್ಪದ; ಸಿದ್ದು ಟ್ವೀಟ್​​ಗೆ ಶಿಕ್ಷಣ ಸಚಿವರ ತಿರುಗೇಟು

    ಶಾಲಾ ಮಕ್ಕಳಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗೆ ಯೋಗ, ಧ್ಯಾನದ ಅವಶ್ಯಕತೆಯಿದೆ ಎಂದ ಸಿದ್ದರಾಮಯ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts