More

    ಪ್ರಭಾಸ್ ಉಗ್ರಾವತಾರ! ಸಲಾರ್‌ನಲ್ಲಿ ರೋರಿಂಗ್ ಲುಕ್‌ನಲ್ಲಿ ಡಾರ್ಲಿಂಗ್ ನಟ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್ 1: ಸೀಸ್‌ಫೈರ್’. ‘ಸಾಹೋ’, ‘ರಾಧೇಶ್ಯಾಮ್’ ಮತ್ತು ‘ಆದಿಪುರುಷ್’ ಚಿತ್ರಗಳ ಸೋಲಿನ ಬಳಿಕ ಪ್ರಭಾಸ್ ನಟಿಸುತ್ತಿರುವ ಚಿತ್ರವಿದು. ಹಾಗೇ ‘ಕೆಜಿಎ್’ ಸರಣಿಯ ಯಶಸ್ವೀ ನಿರ್ದೇಶಕ ಕನ್ನಡಿಗ ಪ್ರಶಾಂತ್ ನೀಲ್ ಆ್ಯಕ್ಷನ್-ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ. ಇಂತಹ ‘ಸಲಾರ್’ ಚಿತ್ರದ ಟ್ರೇಲರ್ ಶುಕ್ರವಾರ (ಡಿ. 1) ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ.

    ದಾಖಲೆ ಸೃಷ್ಟಿಸಿದ ಟ್ರೇಲರ್:
    ಶುಕ್ರವಾರ ರಾತ್ರಿ 7.19ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷಿಸಿದಂತೆಯೇ ಟ್ರೇಲರ್ ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕೇವಲ 24 ತಾಸುಗಳಲ್ಲಿ ಹಿಂದಿ ಟ್ರೇಲರ್ 5.3 ಕೋಟಿ ವೀಕ್ಷಣೆ ಪಡೆದಿದ್ದು, ಕನ್ನಡದಲ್ಲಿ 95 ಲಕ್ಷ, ತೆಲುಗಿನಲ್ಲಿ 3.2 ಕೋಟಿ, ತಮಿಳಿನಲ್ಲಿ 88 ಲಕ್ಷ ಹಾಗೂ ಮಲಯಾಳಂನಲ್ಲಿ 74 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. ಆ ಮೂಲಕ ಐದೂ ಭಾಷೆಗಳಿಂದ ‘ಸಲಾರ್’ ಸುಮಾರು 12 ಕೋಟಿ ವೀವ್ಸ್ ಪಡೆದು ಯೂಟ್ಯೂಬ್‌ನಲ್ಲಿ ಹೊಸ ದಾಖಲೆ ಬರೆದಿದೆ. ಟ್ರೇಲರ್‌ನಲ್ಲಿ ಖನ್ಸಾರ್ ಎಂಬ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯಲು ನೆತ್ತರ ನದಿಯೇ ಹರಿದಿರುವಂತೆ ಕಾಣುತ್ತದೆ.

    ಇದನ್ನೂ ಓದಿ : ಸಿಲ್ಕ್ ಸ್ಮಿತಾ ಹುಟ್ಟುಹಬ್ಬದಂದು ಮತ್ತೊಂದು ಬಯೋಪಿಕ್ ಅನೌನ್ಸ್; ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಯಾರು ಗೊತ್ತಾ?

    ಪ್ರಭಾಸ್ ಉಗ್ರಾವತಾರ! ಸಲಾರ್‌ನಲ್ಲಿ ರೋರಿಂಗ್ ಲುಕ್‌ನಲ್ಲಿ ಡಾರ್ಲಿಂಗ್ ನಟ

    ಪ್ಯಾನ್ ಇಂಡಿಯಾ ನಟರ ಜಾತ್ರೆ
    ಬೇರೆ ಬೇರೆ ಚಿತ್ರರಂಗಗಳ ಹೆಸರಾಂತ ನಟ, ನಟಿಯರು ‘ಸಲಾರ್’ನಲ್ಲಿ ನಟಿಸಿದ್ದಾರೆ. ಪ್ರಭಾಸ್, ಶೃತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ಪೃಥ್ವಿರಾಜ್ ಸುಕುಮಾರನ್, ಮೈಮ್ ಗೋಪಿ, ಟಿನು ಆನಂದ್, ಈಶ್ವರಿ ರಾವ್, ಶ್ರಿಯಾ ರೆಡ್ಡಿ ಸೇರಿ ಹಲವು ಪರಭಾಷಾ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹಾಗೇ ನವೀನ್ ಶಂಕರ್, ಪ್ರಮೋದ್, ಗರುಡ ರಾಮ್, ಮಧು ಗುರುಸ್ವಾಮಿ ಸೇರಿ ಹಲವು ಕನ್ನಡದ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಕನ್ನಡದ ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ. ಆ ಮೂಲಕ ತಾರಾಗಣ ಹಾಗೂ ತಾಂತ್ರಿಕ ತಂಡದಲ್ಲಿ ಹಲವಾರು ಕನ್ನಡಿಗರು ಕೆಲಸ ಮಾಡಿದ್ದಾರೆ.

    ಇದನ್ನೂ ಓದಿ : ಪ್ರಿಯಾಂಕಾ ಚೋಪ್ರಾಗೆ ಇಂಗ್ಲಿಷ್ ಬರುವುದಿಲ್ಲವೇ? ಫ್ಯಾನ್ಸ್​​ ಇಂಗ್ಲಿಷ್ ಪಾಠ ಮಾಡುವಷ್ಟು ತಪ್ಪು ಮಾಡಿದ ನಟಿ!

    ಪ್ರಭಾಸ್ ಉಗ್ರಾವತಾರ! ಸಲಾರ್‌ನಲ್ಲಿ ರೋರಿಂಗ್ ಲುಕ್‌ನಲ್ಲಿ ಡಾರ್ಲಿಂಗ್ ನಟ

    15 ವರ್ಷಗಳ ಹಿಂದಿನ ಆಲೋಚನೆ
    ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಶಾಂತ್ ನೀಲ್ ಕೇವಲ ಮೂರು ಚಿತ್ರಗಳಲ್ಲಿ ನಿರ್ದೇಶಿಸಿದ್ದಾರೆ. ‘ಉಗ್ರಂ’ ಕನ್ನಡದಲ್ಲಿ ಅಬ್ಬರಿಸಿದರೆ, ‘ಕೆಜಿಎ್’ ಸರಣಿಯ ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಬೊಬ್ಬಿರಿದಿವೆ. ಇದೀಗ ‘ಸಲಾರ್’ ಟ್ರೇಲರ್ ಮೂಲಕವೇ ಕುತೂಹಲ, ನಿರೀಕ್ಷೆಗಳನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಬಗ್ಗೆ ಪ್ರಶಾಂತ್, ‘‘ಸಲಾರ್’ ಸಿನಿಮಾ ಬಗ್ಗೆ ನನಗೆ 15 ವರ್ಷಗಳ ಹಿಂದೆಯೇ ಆಲೋಚನೆ ಇತ್ತು. ಆದರೆ, ‘ಉಗ್ರಂ’ ಬಳಿಕ ನಾನು ‘ಕೆಜಿಎ್’ನಲ್ಲಿ ಬಿಜಿಯಾದೆ. ಆ ಸರಣಿಗೆ ಎಂಟು ವರ್ಷ ಸಮಯ ಬೇಕಾಯಿತು. ‘ಸಲಾರ್’ ಬಹುತೇಕ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಮಾಡಿದ್ದೇವೆ. ಕೆಲ ಭಾಗವನ್ನು ಸಮೀಪದ ಸಿಂಗಾನೇರಿ ಗಣಿ ಪ್ರದೇಶದಲ್ಲಿ, ಸೌತ್ ಪೋರ್ಟ್ಸ್, ಮಂಗಳೂರು ಬಂದರು ಹಾಗೂ ವಿಶಾಖಪಟ್ಟಣಂ ಬಂದರಿನಲ್ಲಿ ಶೂಟಿಂಗ್ ನಡೆಸಿದ್ದೇವೆ. ಜತೆಗೆ ಯೂರೋಪ್ ಸೇರಿ ಒಟ್ಟು 114 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts