More

    ಕೊವಿಡ್​ -19 ಚಿಕಿತ್ಸೆಗಾಗಿ ಬಳಸುತ್ತಿರುವ ಪಿಪಿಇ ಕಿಟ್​ ಕಳಪೆ; ಹೈಕೋರ್ಟ್​ ಮೆಟ್ಟಿಲೇರಿದೆ ಅಕ್ರಮ ಪ್ರಕರಣ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಬಳಸಲಾಗುತ್ತಿರುವ ಪಿಪಿಇ ಕಿಟ್ ಕಳಪೆಯಾಗಿದ್ದು, ಈ ಕುರಿತು ಸೂಕ್ತ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್​ಗೆ ಮನವಿ ಮಾಡಲಾಗಿದೆ. ಗುಣಮಟ್ಟವಿಲ್ಲದ ಕಿಟ್ ಖರೀದಿ ವಿಚಾರವಾಗಿ ವಿಜಯವಾಣಿ ಪ್ರಕಟಿಸಿದ್ದ ತನಿಖಾ ವರದಿ ಪ್ರತಿಗಳನ್ನೂ ಹೆಚ್ಚುವರಿ ದಾಖಲೆಯಾಗಿ ಪರಿಗಣಿಸುವಂತೆ ಕೋರ್ಟ್​ಗೆ ಸಲ್ಲಿಸಲಾಗಿದೆ. ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಈ ಸಂಬಂಧ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಕಳಪೆ ಪಿಪಿಇ ಕಿಟ್ ಕುರಿತು ‘ವಿಜಯವಾಣಿ’ಯಲ್ಲಿ ಪ್ರಕಟವಾಗಿದ್ದ ‘ಸಂಕಷ್ಟದಲ್ಲೂ ಗೋಲ್​ವಾಲ್’ ವರದಿ ಪ್ರತಿಗಳನ್ನೂ ಅರ್ಜಿ ಜತೆ ದಾಖಲೆಗಳಾಗಿ ಲಗತ್ತಿಸಿದ್ದಾರೆ.

    ಕರೊನಾ ಹರಡುವಿಕೆ ತಡೆಯಲು ಸಾವಿರಾರು ವೈದ್ಯರು, ಶುಶ್ರೂಷಕರು, ಆರೋಗ್ಯ ಕಾರ್ಯಕರ್ತರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಶಂಕಿತರು- ಸೋಂಕಿತರ ಚಿಕಿತ್ಸೆ ವೇಳೆ ಪಿಪಿಇ ಕಿಟ್ ಅತ್ಯಗತ್ಯ. ಆದರೆ, ಆರೋಗ್ಯ ಇಲಾಖೆಗೆ ಪೂರೈಸಲಾಗಿರುವ ಪಿಪಿಇ ಕಿಟ್ ನಿರೀಕ್ಷಿತ ಗುಣಮಟ್ಟ ಹೊಂದಿಲ್ಲ. ಕಿಟ್ ಸರಿಯಾಗಿ ಪ್ಯಾಕ್ ಸಹ ಮಾಡಿಲ್ಲ. ಪ್ಯಾಕ್ ಮೇಲೆ ಗುಣಮಟ್ಟ ಸೂಚಿಸುವ ಸೀಲ್ ಸಹ ಇಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಲಾಭದ ಉದ್ದೇಶದಿಂದಲೇ ಇಂಥ ಕಳಪೆ ಪಿಪಿಇ ಕಿಟ್ ಪೂರೈಸಲಾಗಿದ್ದು, ಮೇಲ್ನೋಟಕ್ಕೆ ಇದೊಂದು ದೊಡ್ಡ ಹಗರಣದಂತೆ ಕಾಣುತ್ತಿದೆ. ಈ ಬಗ್ಗೆ ಏ.19ರಂದು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ನ್ಯಾಯಾಲಯವೇ ವಿಚಾರಣೆ ನಡೆಸಬೇಕು ಎಂದು ಕೋರಲಾಗಿದೆ.

    ಪ್ರಧಾನಿ ಹೆಲಿಕಾಪ್ಟರ್ ಚೆಕ್ ಮಾಡಿದ್ದ ಕರ್ನಾಟಕದ ಐಎಎಸ್ ಅಧಿಕಾರಿಯಿಂದ ಈಗ ತಬ್ಲಿಘಿಗಳ ಪ್ರಶಂಸೆ!: ರಾಜ್ಯ ಸರ್ಕಾರದಿಂದ ನೋಟಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts