More

    ದಸರಾ ಹಬ್ಬಕ್ಕೆ ‘ಯುವರತ್ನ’ ಕಡೆಯಿಂದ ಬರಲಿದೆ ಪುನೀತ್​ ಬಿಯರ್ಡ್​ ಲುಕ್​

    ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಅವತಾರವನ್ನು ಈಗಾಗಲೇ ನೋಡಿದ್ದೀರಿ. ಲಾಕ್​ಡೌನ್​ ಅವಧಿಯಲ್ಲಿ ಗಡ್ಡಧಾರಿಯಾಗಿಯೂ ಪುನೀತ್​ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಆದರೆ, ಆ ಲುಕ್​ ಯುವರತ್ನ ಚಿತ್ರದಲ್ಲಿ ಇರಲಿದೆಯೇ?

    ಇದನ್ನೂ ಓದಿ: ಉತ್ತರ ಕರ್ನಾಟಕ ಜನರ ನೆರವಿಗೆ ಬಂದ ಕಿಚ್ಚ! ಈ ನಂಬರ್​ಗೆ ಕರೆ​ ಮಾಡಿದ್ರೆ ಸಿಗುತ್ತೆ ಸಹಾಯ

    ಹೀಗೊಂದು ಪ್ರಶ್ನೆ ಕಳೆದ ಕೆಲ ತಿಂಗಳಿಂದ ಹರಿದಾಡುತ್ತಿದೆ. ಇದೀಗ ಅದೆಲ್ಲದಕ್ಕೂ ಚಿತ್ರತಂಡ ಉತ್ತರ ನೀಡಿದೆ. ಅಂದರೆ, ದಸರಾ ಹಬ್ಬದ ಪ್ರಯುಕ್ತ ಯುವರತ್ನ ಚಿತ್ರದಲ್ಲಿ ಪುನೀತ್​ ಅವರ ಬಿಯರ್ಡ್​ ಲುಕ್​ ಅನಾವರಣ ಮಾಡಲು ತಂಡ ಪ್ಲಾನ್​ ಮಾಡಿದೆ.

    ಈ ವಿಚಾರವನ್ನು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ಸ್ ಅಧಿಕೃತವಾಗಿ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲೂ ಸಹಜ ಕುತೂಹಲ ಮನೆ ಮಾಡಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿಕೊಂಡಿರುವ ಪುನೀತ್​, ಸದ್ಯ ಹೊಸಪೇಟೆಯಲ್ಲಿ ನಡೆಯುತ್ತಿರುವ ‘ಜೇಮ್ಸ್’ ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ.

    ಮತ್ತೆ ಒಂದಾದ ‘ರೋಜ’ ಜೋಡಿ ಅರವಿಂದ್​-ಮಧೂ … ಯಾವ ಚಿತ್ರ ಗೆಸ್​ ಮಾಡಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts