More

    ವಿದ್ಯುತ್ ಬಿಕ್ಕಟ್ಟು ಪರಿಹಾರಕ್ಕೆ ಸಮೀಕ್ಷೆ ಆರಂಭ

    ಪುರುಷೋತ್ತಮ ಭಟ್ ಬದಿಯಡ್ಕ

    ಮಲಬಾರ್‌ನ ವಿದ್ಯುತ್ ಬಿಕ್ಕಟ್ಟು ಪರಿಹರಿಸಲು 400 ಕೆ.ವಿ. ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಪ್ರಾರಂಭಿಸಲಾಗಿದೆ. ಉಡುಪಿಯಿಂದ ಚೀಮೇನಿವರೆಗಿನ 115 ಕಿ.ಮೀ. ಉದ್ದದ ವಿದ್ಯುತ್ ಲೈನ್ ನಿರ್ಮಾಣಕ್ಕೆ ಸಮೀಕ್ಷೆ ನಡೆಯುತ್ತಿದ್ದು, ವಿವಿಧ ಕಡೆ 400 ಕೆ.ವಿ. ಸಬ್‌ಸ್ಟೇಷನ್ ಸ್ಥಾಪಿಸಲಾಗುವುದು.
    ಕರ್ನಾಟಕದ ನಂದಿಕೂರ್ ಉಷ್ಣ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಸ್ಟರ್ಲೈಟ್ ಕಂಪನಿಗೆ ನೀಡಲಾಗಿದೆ. ಇದರ ಚಟುವಟಿಕೆಗಳನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಯೋಜಿಸಲಿದೆ. ಲೈನ್ ಹಾದುಹೋಗುವಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಮೊದಲ ಹಂತ 1,000 ಮೆಗಾವ್ಯಾಟ್

    ಮೊದಲ ಹಂತದಲ್ಲಿ ಉಡುಪಿಯಿಂದ 1,000 ಮೆಗಾವ್ಯಾಟ್ ವಿದ್ಯುತ್ ಪಡುಬಿದ್ರಿ 400 ಕೆ.ವಿ. ಸಬ್‌ಸ್ಟೇಷನ್‌ನಿಂದ ಚೀಮೇನಿ 400 ಕೆ.ವಿ. ಸಬ್‌ಸ್ಟೇಷನ್ ತಲುಪಲಿದೆ. 1,000 ಮೆಗಾವ್ಯಾಟ್‌ನ ಮೊದಲ ಹಂತವನ್ನು ಈ ಮಾರ್ಗದ ಮೂಲಕ ಕೇರಳಕ್ಕೆ ತಲುಪಿಸಲಾಗುತ್ತದೆ. 2,000 ಮೆಗಾವ್ಯಾಟ್ ಉತ್ಪಾದಿಸುವುದು ಲಕ್ಷೃವಾಗಿದೆ. ಜಿಲ್ಲೆಯ ಮೈಲಾಟ್ಟಿ ಮತ್ತು ಚೀಮೇನಿಗಳಲ್ಲಿ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತದೆ. ಹೊಸ ಯೋಜನೆಯಲ್ಲಿ ನೇರವಾಗಿ ಉಡುಪಿಯಿಂದ ಚೀಮೇನಿಗೆ ವಿದ್ಯುತ್ ಹಸ್ತಾಂತರಗೊಳ್ಳಲಿದೆ.

    15 ವರ್ಷಗಳ ಕನಸು
    ಕೇರಳದ 15 ವರ್ಷಗಳ ಕಠಿಣ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಆರಂಭಿಕ ವೆಚ್ಚ 800 ಕೋಟಿ ರೂ. ಸಬ್‌ಸ್ಟೇಷನ್‌ಗಾಗಿ ಸ್ಥಳವನ್ನು ಸಂಪೂರ್ಣ ಸ್ವಾಧೀನಪಡಿಸಿಕೊಂಡು ಮಣ್ಣು ಪರೀಕ್ಷೆ ನಡೆಸಲಾಯಿತು. ಸಬ್‌ಸ್ಟೇಷನ್‌ಗಾಗಿ ಇಪಿಸಿ ಗುತ್ತಿಗೆದಾರನನ್ನು ಆಗಸ್ಟ್ 2020ರಲ್ಲಿ ನೇಮಿಸಲಾಯಿತು. ಪ್ರಸ್ತುತ ವಿನ್ಯಾಸ ಮತ್ತು ಇಂಜಿನಿಯರಿಂಗ್ ಕಾರ್ಯಗಳು ಪ್ರಗತಿಯಲ್ಲಿವೆ. ಮಾರ್ಚ್ 2022ರೊಳಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಉಡುಪಿ ವಿದ್ಯುತ್ ಸರಬರಾಜು ವ್ಯವಸ್ಥೆಯು ಕೇಂದ್ರ ವಿದ್ಯುತ್ ನಿಗಮದ ನಿರ್ದೇಶಾನುಸಾರ ಸ್ಟರ್ಲೈಟ್ ಕಂಪನಿಗೆ 25 ವರ್ಷಕ್ಕೆ ಗುತ್ತಿಗೆ ನೀಡಿದೆ. ಈಗಾಗಲೇ ಯೋಜನೆಗೆ ರೂಪು ನೀಡಲಾಗಿದ್ದು ಸರ್ವೇ ಕಾರ್ಯ ಪೂರ್ಣಗೊಂಡಿದೆ. ಜನವಸತಿ ರಹಿತ ಪ್ರದೇಶದಲ್ಲೇ ವಿದ್ಯುತ್ ಲೈನ್‌ಗಳು ಹಾದುಹೋಗುವಂತೆ ಸಾಧ್ಯವಾದಷ್ಟು ಟವರ್ ನಿರ್ಮಾಣಕ್ಕೆ ಮ್ಯಾಪಿಂಗ್ ಮಾಡಲಾಗಿದೆ. ಭೂಮಿ ನಷ್ಟ ಆಗುವವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಆಯಾಮಗಳ ಸಭೆ ನಡೆಸಿದ್ದು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಮುಗಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.
    ಪ್ರದೀಪ್, ನೋಡಲ್ ಆಫೀಸರ್ ಕಾಸರಗೋಡು, ಉಡುಪಿ ವಿದ್ಯುತ್ ಪ್ರಸರಣ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts