More

    ಸಾಧನೆಗೆ ಅಡ್ಡಿಯಾಗದ ಬಡತನ

    ಹಾವೇರಿ: ಪ್ರತಿಭೆಗೆ ಬಡತನ ಅಡ್ಡಿಯಾಗುವುದಿಲ್ಲ. ದುಬಾರಿ ಹಣ ಕೊಟ್ಟು ಟ್ಯೂಶನ್​ಗೆ ಹೋಗಬೇಕೆಂದೇನೂ ಇಲ್ಲ. ಛಲವಿದ್ದರೆ ಏನಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ತಾಲೂಕಿನ ಕನಕಾಪುರ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ಮಾಲತೇಶ ಕರಿಯಣ್ಣನವರ ಉದಾಹರಣೆಯಾಗಿದ್ದಾರೆ.

    ಇವರ ತಂದೆ ನಾಗಪ್ಪ ಹಾವೇರಿ ಕಾಗಿನೆಲೆ ಬಸ್​ನಿಲ್ದಾಣದ ಬಳಿ ಹಮಾಲಿ ಕೆಲಸ ಮಾಡುತ್ತಿದ್ದರೆ, ತಾಯಿ ದುರಗಮ್ಮ, ಹಿರಿಯ ಸಹೋದರ ಮಂಜಪ್ಪ ಬಿಎ ಮುಗಿಸಿ ಕೃಷಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತ ಮಾಲತೇಶನ ಓದಿಗೆ ಸಹಾಯ ಮಾಡಿದರು. ಇನ್ನೋರ್ವ ಸಹೋದರ ಗುಡ್ಡಪ್ಪ ಪಿಯುಸಿ ಮುಗಿಸಿ ಕೆಲಸಕ್ಕೆ ಸೇರಿಕೊಂಡು ಬಾಹ್ಯವಾಗಿ ಪದವಿ ಕಲಿಯುತ್ತಿದ್ದಾನೆ. ಮಾಲತೇಶ ಓದಿನಲ್ಲಿ ಸದಾ ಮುಂದಿದ್ದರಿಂದ ಕುಟುಂಬದವರೆಲ್ಲರೂ ದುಡಿದು ನಗರದ ಜಿಎಚ್ ಕಾಲೇಜ್​ನಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ಕುಟುಂಬದವರ ಶ್ರಮ ವ್ಯರ್ಥ ಮಾಡದ ಮಾಲತೇಶ, ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 558ಅಂಕಗಳಿಸಿ ಶೇ. 93ರಷ್ಟು ಅಂಕಗಳಿಸಿ ಕಾಲೇಜ್​ಗೆ ಮೊದಲ ಸ್ಥಾನ ಪಡೆದಿದ್ದಾನೆ. ಭೌತಶಾಸ್ತ್ರದಲ್ಲಿ 96, ರಸಾಯನಶಾಸ್ತ್ರದಲ್ಲಿ 91, ಗಣಿತದಲ್ಲಿ 99, ಜೀವಶಾಸ್ತ್ರದಲ್ಲಿ 96 ಅಂಕಗಳಿಸಿದ್ದಾನೆ.

    ಕೈ ಹಿಡಿದ ವಿದ್ಯಾರ್ಥಿ ಮಿತ್ರ: ಕುಟುಂಬದ ಬಡತನ ಕಂಡು ಮಾಲತೇಶ ವಿಜ್ಞಾನ ವಿಭಾಗ ಕಲಿಯುತ್ತಿದ್ದರೂ ಯಾವುದೇ ಟ್ಯೂಶನ್​ಗೆ ಹೋಗಲಿಲ್ಲ. ಬದಲಾಗಿ ‘ವಿಜಯವಾಣಿ’ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಪ್ರತಿದಿನವೂ ಮನೆಗೆ ತರಿಸಿ ಓದಿ ಅದರಲ್ಲಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದ್ದ. ಇದು ಹೆಚ್ಚಿನ ಅಂಕಗಳಿಸಲು ಸಹಕಾರಿಯಾಯಿತು ಎನ್ನುತ್ತಾರೆ ಮಾಲತೇಶ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts