More

    ಅಂಚೆ ಮತದಾನ ವ್ಯವಸ್ಥಿತವಾಗಿ ನಡೆಯಲು ಕ್ರಮ

    ರಾಯಚೂರು: ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಕೋವಿಡ್ ಸೋಂಕಿತರಿಗೆ ಚುನಾವಣೆ ಆಯೋಗ ಅಂಚೆ ಮತದಾನಕ್ಕೆ ಅವಕಾಶ ನೀಡಿದೆ. ಜಿಲ್ಲೆಯಲ್ಲಿ 80 ವರ್ಷ ದಾಟಿದ 1,581 ಜನರು, 410 ಅಂಗವಿಕಲರು ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

    ಈ ಕುರಿತು ಶನಿವಾರ ಪ್ರಕಟಣೆ ನೀಡಿ, ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಅಂಚೆ ಮತದಾನ ಮಾಡಿರುವವರಿಗೆ ಮೇ 10ರಂದು ಮತದಾನ ಮಾಡಲು ಅವಕಾಶವಿರುವುದಿಲ್ಲ. ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಮತದಾನ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.

    ಏ.10ರ ನಂತರ ಮತದಾರರ ನೋಂದಣಿ ಮತ್ತು ತೆಗೆದು ಹಾಕುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 8,05,594 ಪುರುಷ ಮತ್ತು 8,29,133 ಮಹಿಳೆಯರು ಸೇರಿ ಒಟ್ಟು 16,34,989 ಮತದಾರರಿದ್ದಾರೆ. ಮತಯಂತ್ರಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದ್ದು, ರಾಯಚೂರು ನಗರ ಕ್ಷೇತ್ರಕ್ಕೆ 18 ಅಭ್ಯರ್ಥಿಗಳಿರುವುದರಿಂದ ಪ್ರತಿ ಮತಗಟ್ಟೆಗೆ ಒಂದು ಹೆಚ್ಚುವರಿ ಬ್ಯಾಲೆಟ್ ಯುನಿಟ್ ನೀಡಲಾಗುತ್ತಿದೆ. ನೌಕರರಿಗೆ ಅಂಚೆ ಮತ ಚಲಾಯಿಸಲು ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ.

    ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ನೀತಿ ಸಂಹಿತೆ ಉಲ್ಲಂಘನೆಯ 15 ಪ್ರಕರಣಗಳ ಪ್ರಥಮ ವಿಚಾರಣಾ ವರದಿ ದಾಖಲಿಸಲಾಗಿದೆ. 58.02 ಲಕ್ಷ ರೂ., 1.32 ಕೋಟಿ ರೂ. ಮೊತ್ತದ 12,772 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. 89.67 ಲಕ್ಷ ರೂ. ಮೊತ್ತದ ಬಂಗಾರ, ಬೆಳ್ಳಿ ಸಾಮಗ್ರಿ ಜಪ್ತಿ ಮಾಡಿಕೊಳ್ಳಲಾಗಿದೆ.

    ಮತದಾನ ಕಾರ್ಯಕ್ಕಾಗಿ 8,432 ಸಿಬ್ಬಂದಿ ನೇಮಕ ಮಾಡಲಾಗಿದ್ದು, ತರಬೇತಿ ನೀಡಲಾಗಿದೆ. 1,840 ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ನೆರಳು ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts