More

    ಅಂಚೆ ವಿತರಣೆ ವ್ಯವಸ್ಥೆ ಸರಿಪಡಿಸಿ

    ಸಾಗರ/ತಾಳಗುಪ್ಪ: ತಾಳಗುಪ್ಪ ವ್ಯಾಪ್ತಿಯಲ್ಲಿ ಅಂಚೆ ವಿತರಣೆ ವ್ಯವಸ್ಥೆಯನ್ನು ಸಮರ್ಪಕಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ತಾಳಗುಪ್ಪ ಅಂಚೆ ಕಚೇರಿ ನಿರೀಕ್ಷಕ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.

    ತಾಳಗುಪ್ಪ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ತುಂಬ ಅವ್ಯವಸ್ಥೆಯಿದೆ. ಕಳೆದ 6 ತಿಂಗಳಿಂದ ಅಂಚೆ ಗ್ರಾಹಕರು ನೆಟ್​ವರ್ಕ್ ಸಮಸ್ಯೆಯಿಂದ ಸಂಕಷ್ಟ ಎದುರಿಸುವಂತಾಗಿದೆ. 5 ನಿಮಿಷದಲ್ಲಿ ಆಗುವ ಕೆಲಸಕ್ಕೆ ದಿನವಿಡೀ ಅಂಚೆ ಕಚೇರಿ ಎದುರು ಕಾಯುವ ಪರಿಸ್ಥಿತಿ ಇದೆ. ನೆಟ್​ವರ್ಕ್ ಇಲ್ಲ, ಸರ್ವರ್ ಇಲ್ಲ ಎನ್ನುವ ಉತ್ತರ ಅಧಿಕಾರಿಗಳು, ಸಿಬ್ಬಂದಿಯಿಂದ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಪ್ರತಿಭಟನಾಕಾರರು ದೂರಿದರು.

    ಗ್ರಾಹಕರಿಗೆ ಸಮರ್ಪಕ ಸೇವೆ ಸಿಗದಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಂಚೆ ಕಚೇರಿ ಮತ್ತು ಬಿಎಸ್​ಎನ್​ಎಲ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತವೆ. ಆದರೆ ಸೂಕ್ತ ಆಡಳಿತ ನಿರ್ವಹಣೆ ಇಲ್ಲದೆ ಎರಡೂ ಇಲಾಖೆಗಳು ನಷ್ಟದಲ್ಲಿವೆ. ಹಾಗಾಗಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

    ಗ್ರಾಪಂ ಪಕ್ಕದಲ್ಲಿ ಅಂಚೆ ಇಲಾಖೆಗೆ ಮಂಜೂರಾದ ವಿಶಾಲ ಜಾಗವಿದೆ. ಆದರೆ ನೂತನ ಕಟ್ಟಡ ನಿರ್ವಣಕ್ಕೆ ಅಧಿಕಾರಿಗಳು ಪ್ರಯತ್ನ ಮಾಡದೆ ಬಾಡಿಗೆ ಕಟ್ಟಡದಲ್ಲಿದ್ದಾರೆ. ಈ ನಿರ್ಲಕ್ಷ್ಯ ಧೋರಣೆ ಸರಿಯಲ್ಲ. ತಕ್ಷಣ ಅಂಚೆ ಇಲಾಖೆಯಲ್ಲಿ ಗ್ರಾಹಕರಿಗೆ ಸಮರ್ಪಕ ಸೇವೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.

    ವೇದಿಕೆ ಪದಾಧಿಕಾರಿಗಳಾದ ಗುರುರಾಜ್, ರಾಮು ಗುಡ್ಡೆಮನೆ, ಎಸ್.ವಿ.ಓಂಕಾರ್, ಕೆ.ಪರಶುರಾಮ, ಲಕ್ಷ್ಮಣ, ಸುಭಾಷ್ ಶೆಟ್ಟಿ, ಕೃಷ್ಣಮೂರ್ತಿ ತಂಗಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts