More

    ‘ಐಐಐಟಿ-ಬಿ’ಯಿಂದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್

    ಬೆಂಗಳೂರು: ಇಂಟರ್‌ನ್ಯಾಷನಲ್ ಇನ್‌ಸ್ಟ್ಟಿಟ್ಯೂಟ್ ಆಫ್​ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ-ಬಿ) 2024-25ನೇ ಸಾಲಿಗೆ ಡಿಜಿಟಲ್ ಪ್ರಾಡೆಕ್ಟ್ ಡಿಸೈನ್ ಆ್ಯಂಡ್ ಮ್ಯಾನೇಜ್ಮೆಂಟ್‌ನಲ್ಲಿ (ಪಿಜಿಡಿ-ಡಿಪಿಡಿಎಂ) ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಪ್ರಕಟಿಸಿದೆ.

    ಇಂಜಿನಿಯರಿಂಗ್ ಮತ್ತು ಸಮಾಜ ವಿಜ್ಞಾನ ವಿಭಾಗಗಳನ್ನು ಸಂಯೋಜಿಸಿ, ಡಿಜಿಟಲ್ ಉತ್ಪನ್ನ ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಸಮಗ್ರ ಕೌಶಲಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಮುಂಬರುವ ಜುಲೈ ತಿಂಗಳಿನಿಂದ ಆರಂಭವಾಗುವ ಈ ಕೋರ್ಸ್ 12 ತಿಂಗಳ ಅವಧಿಯದ್ದಾಗಿರಲಿದೆ. ಕಲೆ, ವಿಜ್ಞಾನ, ವಾಣಿಜ್ಯ, ವಿನ್ಯಾಸ, ನಿರ್ವಹಣೆ, ಕಾನೂನು ಅಥವಾ ಇಂಜಿನಿಯರಿಂಗ್ ಸೇರಿ ಯಾವುದೇ ವಿಭಾಗದಲ್ಲಿ ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

    ಈ ಕುರಿತು ಮಾತನಾಡಿರುವ ಸಂಸ್ಥೆಯ ನಿರ್ದೇಶಕ ಪ್ರೊ. ದೇಬಬ್ರತ ದಾಸ್, ಪಿಜಿಡಿ-ಡಿಪಿಡಿಎಂ ಕೋರ್ಸ್ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ, ಇದು ಐಐಐಟಿ-ಬೆಂಗಳೂರಿನ ಅಂತರಶಿಸ್ತೀಯ ಶ್ರೇಷ್ಠತೆಯನ್ನು ನೀಡುವ ಪರಂಪರೆಯನ್ನು ನಿರ್ಮಿಸುತ್ತದೆ. ಈ ಉಪಕ್ರಮವು ಡಿಜಿಟಲ್ ತಂತ್ರಜ್ಞಾನಗಳ ವಿಕಸನಗೊಳ್ಳುತ್ತಿರುವ ಭೂದೃಶ್ಯ ಮತ್ತು ಸಮಾಜದ ಮೇಲೆ ಅವುಗಳ ಪ್ರಭಾವದ ಬಗ್ಗೆ ಆಳವಾದ ತಿಳಿವಳಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

    ಪಿಜಿಡಿ-ಡಿಪಿಡಿಎಂ ಪ್ರಾಯೋಗಿಕ ಒಳನೋಟಗಳೊಂದಿಗೆ ಸೈದ್ಧಾಂತಿಕ ಜ್ಞಾನವನ್ನು ಒಳಗೊಂಡ ಕಠಿಣ ಪಠ್ಯಕ್ರಮವನ್ನು ನೀಡುತ್ತದೆ. ಡಿಜಿಟಲ್ ಉತ್ಪನ್ನ ಪರಿಸರ ವ್ಯವಸ್ಥೆಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ. ಈ ಕೋರ್ಸ್ ಮುಂದಿನ ಪೀಳಿಗೆಯ ಆವಿಷ್ಕಾರಕರು ಮತ್ತು ಡಿಜಿಟಲ್ ಉತ್ಪನ್ನ ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ನಾಯಕರನ್ನು ಸಬಲೀಕರಣಗೊಳಿಸುತ್ತದೆ.
    – ಪ್ರೊ. ಅಮಿತ್ ಪ್ರಕಾಶ್, ಪಿಜಿಡಿ-ಡಿಪಿಡಿಎಂ ಸಂಯೋಜಕ, ಐಐಐಟಿ-ಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts