More

    ದ.ಕ.ದಲ್ಲಿ ಪಾಸಿಟಿವ್ ಸಂಖ್ಯೆ ತುಸು ಏರಿಕೆ

    ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಸೋಂಕಿತರ ಸಂಖ್ಯೆ ಮತ್ತೆ ತುಸು ಏರಿಕೆ ಕಂಡಿದೆ. ಸೋಂಕು ದೃಢಪಟ್ಟು ಮೃತಪಡುವವರ ಸಂಖ್ಯೆಯೂ ಹೆಚ್ಚಿದೆ.

    ಈ ದಿನ ಹೊಸ 385 ಜನರಲ್ಲಿ (4.73 ಶೇ.) ಕೋವಿಡ್ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ 15 ಮಂದಿ ಮೃತಪಟ್ಟಿದ್ದಾರೆ. 744 ಮಂದಿ ಸೋಂಕುಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಕೋವಿಡ್ ಸೋಂಕಿಗೆ ಒಳಗಾದವರು ಒಟ್ಟು ಸಂಖ್ಯೆ 92,513. ಗುಣವಾದವರು 86,295. ಚಿಕಿತ್ಸೆ ಪಡೆಯುತ್ತಿರುವವರು 5,038. ಸೋಂಕು ದೃಢಪಟ್ಟು ಮೃತರಾದವರು 1180 ಮಂದಿ. ಒಂದೇ ಕಡೆ ಅಧಿಕ ಸೋಂಕಿತರು ಪತ್ತೆಯಾದ ಮಂಗಳೂರು, ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ತಲಾ 2ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.

    ಉಡುಪಿ ಜಿಲ್ಲೆಯಲ್ಲಿ 82 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ.3.5ಕ್ಕೆ ಇಳಿಕೆಯಾಗಿದೆ. ಸೋಂಕಿತರಲ್ಲಿ 38 ಮಂದಿ ಉಡುಪಿ, 14 ಮಂದಿ ಕುಂದಾಪುರ, 28 ಮಂದಿ ಕಾರ್ಕಳ ತಾಲೂಕಿನವರು. ಇಬ್ಬರು ಹೊರ ಜಿಲ್ಲೆಯವರು. ಇವರಲ್ಲಿ 55 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 12 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 70 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 98 ಮಂದಿ ಗುಣವಾಗಿದ್ದಾರೆ. 879 ಸಕ್ರಿಯ ಪ್ರಕರಣಗಳಿವೆ.

    ಬ್ಲ್ಯಾಕ್ ಫಂಗಸ್ ರೋಗಿ ಸಾವು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಒಬ್ಬರು ಗುಣವಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯ ವೆನ್ಲಾಕ್ ಸರ್ಕಾರಿ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 27 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯ ತನಕ ರೋಗ ದೃಢಪಟ್ಟ 19 ಮಂದಿ ಮೃತಪಟ್ಟಿದ್ದು, ನಾಲ್ವರು ಜಿಲ್ಲೆಯವರು. ಉಳಿದ 15 ಮಂದಿ ಹೊರ ಜಿಲ್ಲೆಯವರು. ಚಿಕಿತ್ಸೆ ಪಡೆಯುವವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರು ಎಂಟು ಮಂದಿ. ಇತರ 19 ಮಂದಿ ಹೊರ ಜಿಲ್ಲೆಯವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts