More

    ನಿರ್ಮಾಣ ಹಂತದ ಫ್ಲೈಓವರ್​ ಕುಸಿತ: ಕಾರುಗಳು ಜಖಂ, ಇಬ್ಬರ ಸ್ಥಿತಿ ಗಂಭೀರ

    ಗುರ್ಗಾಂವ್​: ಆರು ಕಿ.ಮೀ ಉದ್ದದ ನಿರ್ಮಾಣ ಹಂತದ ಫ್ಲೈಓವರ್​ನ ಒಂದು ಭಾಗ ಕುಸಿತಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಗುರ್ಗಾಂವ್​ನಲ್ಲಿ ನಡೆದಿದೆ.

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದರು. ಫ್ಲೈವರ್​ ಕುಸಿತಗೊಂಡ ಏರಿಯಾ ಜನನಿಬಿಡ ಸೊಹನ್​ ರಸ್ತೆಯಾಗಿದ್ದರಿಂದ ರಸ್ತೆ ಮೇಲೆ ಬಿದ್ದಿದ್ದ ಭಾರಿ ಗಾತ್ರದ ಸಿಮೆಂಟ್​ ಬ್ಲಾಕ್ಸ್​ ಅನ್ನು ಯಂತ್ರದ ಸಹಾಯದಿಂದ ತೆರವುಗೊಳಿಸಲಾಯಿತು.

    ಇದನ್ನೂ ಓದಿ: ದಾವೂದ್​ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್​; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ…?

    ಘಟನೆಯಲ್ಲಿ ಕೆಲವೊಂದು ಕಾರುಗಳು ಸಹ ಜಖಂಗೊಂಡಿವೆ. ಕಳೆದ ಕೆಲವು ದಿನಗಳಿಂದ ಗುರ್ಗಾಂವ್​ನಲ್ಲಿ ಭಾರಿ ಮಳೆಯಾಗುತ್ತಿದೆ. ಈ ಕಾರಣದಿಂದಲೇ ಫ್ಲೈಓವರ್​ ಒಂದು ಭಾಗ ಕುಸಿದಿದೆ ಎಂದು ಹೇಳಲಾಗಿದೆ. ಆದರೆ, ಕಳಪೆ ಕಾಮಗಾರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಅಪ್ರಾಪ್ತೆ ಮೇಲೆ 30 ಯುವಕರಿಂದ ರೇಪ್​: ಇಸ್ರೇಲ್​ನಲ್ಲಿ ಭುಗಿಲೆದ್ದ ಆಕ್ರೋಶ, ಆರೋಪಿಯ ಅಚ್ಚರಿ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts