More

    ಹ್ಯಾಟ್ರಿಕ್​ ಸಿಕ್ಸರ್ ಮೂಲಕ ಶತಕ ಪೂರೈಸಿದ ಪೂರನ್​, ಗಯಾನಾ ವಾರಿಯರ್ಸ್​ ಜಯಭೇರಿ

    ಪೋರ್ಟ್​ ಆಫ್​ ಸ್ಪೇನ್​: ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ನಿಕೋಲಸ್​ ಪೂರನ್​ (100*ರನ್​, 45 ಎಸೆತ, 4 ಬೌಂಡರಿ, 10 ಸಿಕ್ಸರ್​) ಹ್ಯಾಟ್ರಿಕ್​ ಸಿಕ್ಸರ್​ ಸಿಡಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಪೂರೈಸಿದ್ದು ಮಾತ್ರವಲ್ಲದೆ ಗಯಾನಾ ಅಮೆಜಾನ್​ ವಾರಿಯರ್ಸ್ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಭರ್ಜರಿಯಾಗಿ ಗಮನಸೆಳೆದಿದ್ದಾರೆ. ಪೂರನ್​ ದಾಖಲಿಸಿದ ಹಾಲಿ ಆವೃತ್ತಿಯ ಮೊದಲ ಶತಕದ ನೆರವಿನಿಂದ ಗಯಾನಾ ವಾರಿಯರ್ಸ್​ ತಂಡ ಸೇಂಟ್​ ಕಿಟ್ಸ್​ ಆಂಡ್​ ನೆವಿಸ್​ ಪ್ಯಾಟ್ರಿಯಾಟ್ಸ್​ ವಿರುದ್ಧ 7 ವಿಕೆಟ್​ಗಳಿಂದ ಸುಲಭ ಗೆಲುವು ದಾಖಲಿಸಿತು. 7ನೇ ಪಂದ್ಯದಲ್ಲಿ 3ನೇ ಗೆಲುವು ಒಲಿಸಿಕೊಂಡ ಗಯಾನಾ ಸೆಮಿಫೈನಲ್​ ಆಸೆ ಜೀವಂತ ಉಳಿಸಿಕೊಂಡಿದೆ.

    ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಪ್ಯಾಟ್ರಿಯಾಟ್ಸ್​ ತಂಡ 5 ವಿಕೆಟ್​ಗೆ 150 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಗಯಾನಾ ತಂಡ 25 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಭರ್ಜರಿ ಸಿಕ್ಸರ್​ಗಳ ಮೂಲಕ ಆರ್ಭಟ ಆರಂಭಿಸಿದ ಪೂರನ್​ 45 ಎಸೆತಗಳಲ್ಲೇ ಶತಕ ಪೂರೈಸಿ ಟೂರ್ನಿಯ ಇತಿಹಾಸದ 3ನೇ ಅತಿವೇಗದ ಶತಕ ಸಾಧನೆ ಮಾಡಿದರು. ಈ ಮೂಲಕ ಗಯಾನಾ ತಂಡ 17.3 ಓವರ್​ಗಳಲ್ಲೇ 3 ವಿಕೆಟ್​ಗೆ 153 ರನ್​ ಪೇರಿಸಿ ಗೆಲುವು ದಾಖಲಿಸಿತು. ಪೂರನ್​ಗೆ ಉತ್ತಮ ಸಾಥ್​ ನೀಡಿದ ರಾಸ್​ ಟೇಲರ್​ ಅಜೇಯ 25 ರನ್​ ಗಳಿಸಿದರು. ಇವರಿಬ್ಬರು ಮುರಿಯದ 4ನೇ ವಿಕೆಟ್​ಗೆ 128 ರನ್​ ಪೇರಿಸಿದರು.

    ಇನಿಂಗ್ಸ್​ನ 17 ಓವರ್​ ಪೂರ್ಣಗೊಂಡಾಗ ಗಯಾನಾ ಗೆಲುವಿಗೆ 16 ರನ್​ ಮಾತ್ರ ಬೇಕಿದ್ದರೆ, ಪೂರನ್​ 82 ರನ್​ ಗಳಿಸಿ ಕ್ರೀಸ್​ನಲ್ಲಿದ್ದರು. ಇನಿಂಗ್ಸ್​ನ 18ನೇ ಓವರ್​ ಎಸೆದ ಸ್ಪಿನ್ನರ್​ ಇಶ್​ ಸೋಧಿ ಅವರ ಮೊದಲ 3 ಎಸೆತಗಳಲ್ಲೂ ಸಿಕ್ಸರ್​ ಸಿಡಿಸುವ ಮೂಲಕ ಪೂರನ್​ ಶತಕ ಮತ್ತು ಗೆಲುವು ಎರಡನ್ನೂ ಒಲಿಸಿಕೊಂಡರು.

    ಸೇಂಟ್​ ಕಿಟ್ಸ್​ ಆಂಡ್​ ನೆವಿಸ್​ ಪ್ಯಾಟ್ರಿಯಾಟ್ಸ್​: 5 ವಿಕೆಟ್​ಗೆ 150 (ಎವಿನ್​ ಲೆವಿಸ್​ 15, ಡ ಸಿಲ್ವ 59, ಡಂಕ್​ 19, ರಾಮ್​ದಿನ್​ 37, ಗ್ರೀನ್​ 31ಕ್ಕೆ 2), ಗಯಾನಾ ಅಮೆಜಾನ್​ ವಾರಿಯರ್ಸ್​: 17.3 ಓವರ್​ಗಳಲ್ಲಿ 3 ವಿಕೆಟ್​ಗೆ 153 (ಕಿಂಗ್​ 14, ಹೆಟ್ಮೆಯರ್​ 1, ಪೂರನ್​ 100*, ರಾಸ್​ ಟೇಲರ್​ 25*, ಜಗ್ಗೆಸರ್​ 33ಕ್ಕೆ 2, ಜೋಸೆಫ್​ 24ಕ್ಕೆ 1). ಪಂದ್ಯಶ್ರೇಷ್ಠ: ನಿಕೋಲಸ್​ ಪೂರನ್​.

    ಇದನ್ನೂ ಓದಿ: ಬಯೋ-ಬಬಲ್​ನಲ್ಲಿ ಇಂದಿನಿಂದ ಯುಎಸ್​ ಓಪನ್​ ಗ್ರಾಂಡ್​ ಸ್ಲಾಂ ಟೆನಿಸ್​

    ಅಲ್ಪ ಮೊತ್ತ ರಕ್ಷಿಸಿ ದಾಖಲೆ ಬರೆದ ಜೌಕ್ಸ್​
    ಭಾನುವಾರದ ಮೊದಲ ಪಂದ್ಯದಲ್ಲಿ ಸೇಂಟ್​ ಲೂಸಿಯಾ ಜೌಕ್ಸ್ ತಂಡ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡ ದಾಖಲೆ ಬರೆಯಿತು. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಜೌಕ್ಸ್​ ತಂಡ 18 ಓವರ್​ಗಳಲ್ಲಿ 92 ರನ್​ಗೆ ಆಲೌಟ್​ ಆಯಿತು. ಪ್ರತಿಯಾಗಿ ಬಾರ್ಬಡೋಸ್​ ತಂಡ ನಿಗದಿತ 20 ಓವರ್​ ಪೂರ್ತಿ ಆಡಿದರೂ, 7 ವಿಕೆಟ್​ಗೆ 89 ರನ್​ ಗಳಿಸಲಷ್ಟೇ ಶಕ್ತವಾಯಿತು. ಕೊನೆಯ ಓವರ್​ನಲ್ಲಿ 9 ರನ್​ ಬೇಕಾಗಿದ್ದಾಗ ಬಾರ್ಬಡೋಸ್​ ತಂಡ ಸ್ಪಿನ್ನರ್​ ರೋಸ್ಟನ್​ ಚೇಸ್​ರ ಎಸೆತದಲ್ಲಿ 5 ರನ್​ ಗಳಿಸಲಷ್ಟೇ ಶಕ್ತವಾಗಿ 3 ರನ್​ಗಳಿಂದ ಸೋಲೊಪ್ಪಿಕೊಂಡಿತು. 7ನೇ ಪಂದ್ಯದಲ್ಲಿ 5ನೇ ಗೆಲುವು ಒಲಿಸಿಕೊಂಡ ಜೌಕ್ಸ್​ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.

    ಸೇಂಟ್​ ಲೂಸಿಯಾ ಜೌಕ್ಸ್​: 18 ಓವರ್​ಗಳಲ್ಲಿ 92 (ಕಾರ್ನ್​ವೆಲ್​ 6, ಫ್ಲೆಚರ್​ 6, ಚೇಸ್​ 14, ನಜಿಬುಲ್ಲಾ ಜದ್ರಾನ್​ 22, ನಬಿ 2, ಸ್ಯಾಮ್ಮಿ 2, ಹೇಡನ್​ ವಾಲ್ಶ್​ 19ಕ್ಕೆ 3, ರೈಫರ್​ 5ಕ್ಕೆ 2, ರಶೀದ್​ ಖಾನ್​ 17ಕ್ಕೆ 1, ಹೋಲ್ಡರ್​ 15ಕ್ಕೆ 1 ), ಬಾರ್ಬಡೋಸ್​ ಟ್ರೈಡೆಂಟ್ಸ್​: 20 ಓವರ್​ಗಳಲ್ಲಿ 7 ವಿಕೆಟ್​ಗೆ 89 (ಚಾರ್ಲ್ಸ್​ 39, ಶೈ ಹೋಪ್​ 14, ಹೋಲ್ಡರ್ 1, ಕೋರಿ ಆಂಡರ್​ಸನ್​ 11, ನರ್ಸ್​ 12, ರಶೀದ್​ ಖಾನ್​ 2, ಜಾವೆಲ್​ ಗ್ಲೆನ್​ 11ಕ್ಕೆ 1, ಕೇಸ್ರಿಕ್​ ವಿಲಿಯಮ್ಸ್​ 12ಕ್ಕೆ 2, ನಬಿ 18ಕ್ಕೆ 1, ಚೇಸ್​ 14ಕ್ಕೆ 1). ಪಂದ್ಯಶ್ರೇಷ್ಠ: ಜಾವೆಲ್​ ಗ್ಲೆನ್​.

    ಮಂಗಳವಾರದ ಪಂದ್ಯಗಳು:
    ಟ್ರಿನ್​ಬಾಗೋ ನೈಟ್​ರೈಡರ್ಸ್​-ಜಮೈಕಾ ತಲ್ಲವಾಹ್ಸ್​
    ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)
    ಬಾರ್ಬಡೋಸ್​ ಟ್ರೈಡೆಂಟ್ಸ್​-ಗಯಾನಾ ಅಮೆಜಾನ್​ ವಾರಿಯರ್ಸ್​
    ಆರಂಭ: ಬುಧವಾರ ಮುಂಜಾನೆ 3.00 (ಭಾರತೀಯ ಕಾಲಮಾನ)
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್

    ಜಾವಗಲ್​ ಶ್ರೀನಾಥ್​ಗೆ ಇಂದು 51ನೇ ಜನ್ಮದಿನದ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts