More

    ಕಳಸದ ಗುರುಗಳ ಶ್ರಮ ಸಲ

    ಹಿರೇಬಾಗೇವಾಡಿ: ಇಲ್ಲಿಯ ಕರ್ನಾಟಕ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಶ್ರೀಶೈಲಪ್ಪ ಕಳಸದ ಗುರುಗಳು ಷಟ್ಪದಿಯಲ್ಲಿ ರಚಿಸಿದ ‘ಬಡೇಕೊಳ್ಳಮಠದ ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳ ಚರಿತ್ರೆ’ ಪುಸ್ತಕವನ್ನು ಮಠದ ನಾಗಯ್ಯ ಶ್ರೀ, ಮುತ್ನಾಳದ ಕೇದಾರ ಪೀಠದ ಶಿವಾನಂದ ಶಿವಾಚಾರ್ಯರು ಭಾನುವಾರ ಸಂಜೆ ಹಿರೇಬಾಗೇವಾಡಿಯಲ್ಲಿ ಬಿಡುಗಡೆಗೊಳಿಸಿದರು.

    ಸಾಹಿತಿ ಡಾ.ವಿ.ಜಿ.ಕೆಂಪಣ್ಣವರ ಮಾತನಾಡಿ, ಕಳೆದ ಎಷ್ಟೋ ವರ್ಷಗಳಿಂದ ನಾಗೇಂದ್ರ ಸ್ವಾಮಿಗಳ ಇತಿಹಾಸ ಮತ್ತು ಸಾಕಷ್ಟು ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪಕ್ಕೆ ತರುವಲ್ಲಿ ಕಳಸದ ಗುರುಗಳು ಅಪಾರವಾಗಿ ಶ್ರಮಿಸಿದ್ದಾರೆ. ಅದು ಸಲತೆ ಕಂಡಿದ್ದು, ಪುಸ್ತಕ ಬಿಡುಗಡೆಯಾಗಿದೆ ಎಂದರು. ಪರಿವರ್ಧಿನಿ, ಷಟ್ಪದಿಯ ಇತ್ತೀಚಿನ ಮಹಾಕಾವ್ಯಗಳಲ್ಲಿ ಇದೂ ಒಂದಾಗಿದೆ. ಪುಸ್ತಕದಲ್ಲಿ 120 ಪುಣ್ಯಕ್ಷೇತ್ರಗಳ ದರ್ಶನ ಮಾಡಿಸಲಾಗಿದೆ. ಇದೀಗ ಬಡೇಕೊಳ್ಳಮಠದ ನಾಗಯ್ಯ ಸ್ವಾಮಿಗಳಿಂದ ಪರಿಶೀಲನೆ ಮತ್ತು ಒಪ್ಪಿಗೆ ಮೇರೆಗೆ ಪುಸ್ತಕ ಮುದ್ರಿಸಲಾಗಿದೆ ಎಂದು ಡಾ. ಕೆಂಪಣ್ಣವರ ಹೇಳಿದರು.

    ಕಳಸದ ಗುರುಗಳನ್ನು ಉಪಸ್ಥಿತರಿದ್ದ ಶಿಕ್ಷಕರು ಸನ್ಮಾನಿಸಿದರು. ಬಡೇಕೊಳ್ಳಮಠದ ನಾಗಯ್ಯ ಸ್ವಾಮೀಜಿ, ಮುತ್ನಾಳದ ಕೇದಾರ ಪೀಠದ ಶಿವಾನಂದ ಶಿವಾಚಾರ್ಯರು, ವೇದಮೂರ್ತಿ ಕಲ್ಲಯ್ಯಸ್ವಾಮಿ ಉದೇಶಿಮಠ, ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಸುರೇಶ ಇಟಗಿ, ಗ್ರುಪ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ.ವಾಲಿಇಟಗಿ, ಉಳವಪ್ಪ ನಂದಿ, ಅರುಣ ಕುಲಕರ್ಣಿ, ವಿಜಯಲಕ್ಷ್ಮೀ ನಾಶಿ, ಬಸವಣ್ಣೆಪ್ಪ ಗಾಣಗಿ, ಪ್ರಕಾಶ ಕಳಸದ, ಆನಂದ ಕಳಸದ, ನಾಗಪ್ಪ ನಂದಿ, ಜಯರಾಮ ಶೆಟ್ಟಿ, ಚನ್ನಬಸವ ಗಾಣಿಗೇರ, ಶಿವಲಿಂಗ ಗುಂಡಾಣಿ, ಶಿಕ್ಷಕರಿದ್ದರು. ಎಸ್.ಆರ್. ದಂಡಿನ ಸ್ವಾಗತಿಸಿದರು. ಶೈಲಾ ಕಡೇಮನಿ, ಶಶಿಧರ ಗುಂಡ್ಲೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts