More

    ಕೃಷಿ ಮೇಳ| ಬಡವಾದ ಕೃಷಿ, ಕೈಗಾರಿಕೆ ಕ್ಷೇತ್ರ: ಆರ್ಥಿಕ ತಜ್ಞ ವಿದ್ಯಾಶಂಕರ್ ಕಳವಳ

    ದೇಶದಲ್ಲಿ ಕೃಷಿ ಮತ್ತು ಕೈಗಾರಿಕೆ ತುಂಬ ಬಡವಾಗಿದೆ. ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ.7 ಮಾತ್ರ ಎಂದು ಆರ್ಥಿಕ ತಜ ್ಞ ಬೆಂಗಳೂರಿನ ವಿದ್ಯಾಶಂಕರ್ ಕಳವಳ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಕೃಷಿ ಉತ್ಪನ್ನಗಳ ಆರ್ಥಿಕ ಆಯಾಮ ಕುರಿತು ವಿಷಯ ಮಂಡಿಸಿದ ಅವರು, ಜಿಡಿಪಿಗೆ ಪಶುಪಾಲನೆ ಪಾಲು ಶೇ.3.9 ಇದ್ದರೆ, ಸೇವಾ ಕ್ಷೇತ್ರದ ಪಾಲು ಅತಿ ಹೆಚ್ಚು (ಶೇ.67) ಇದೆ ಎಂದರು. ರಾಜ್ಯದಲ್ಲಿ ಬೇಸಾಯ ಬಾವಿಗೆ ಬಿದ್ದಿದೆ. 12ನೇ ಪಂಚವಾರ್ಷಿಕ ಯೋಜನೆಗಳ ಅನುಷ್ಠಾನದ ನಂತರವೂ ಕೃಷಿ ಭೂಮಿಗೆ ಜಲಾಶಯದಿಂದ ಸಿಗುತ್ತಿರುವುದು ಶೇ.14 ನೀರು ಮಾತ್ರ. ಬಾವಿಯಿಂದಲೇ ಶೇ.17 ನೀರು ಪಡೆಯುತ್ತಿದ್ದೇವೆ. ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ನದಿ ನೀರನ್ನು ಕೃಷಿಗೆ ನೀಡಲು ಸರ್ಕಾರ ಯೋಜನೆ ರೂಪಿಸಬೇಕಿದೆ. ದೇಶದ ಆರ್ಥಿಕತೆ ಹೆಚ್ಚಿಸುವ ದೃಷ್ಟಿಯಿಂದ ಹಸಿರು ಮೂಲಸೌಕರ್ಯ ಕಲ್ಪಿಸಬೇಕೆಂದು ಪ್ರತಿಪಾದಿಸಿದರು.

    ಸಗಣಿಯಿಂದಲೂ ಲಾಭ: ದನಕರುಗಳ ಸಗಣಿಯನ್ನು ವ್ಯರ್ಥ ಮಾಡುತ್ತಿದ್ದೇವೆ. ಬದಲಾಗಿ ಅದನ್ನು ಬೆರಣಿಯಾಗಿಸಿ ಪುಡಿ ಮಾಡಿ ರೆಡಿಮೇಡ್ ಗೊಬ್ಬರವಾಗಿ ಮಾರಾಟ ಮಾಡಬಹುದು. ಯೂರಿಯಾ ರೀತಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಲಾಭವನ್ನೂ ಕಾಣಬಹುದು. ಇದನ್ನು ರಫ್ತು ಮಾಡುವುದಕ್ಕೂ ಸರ್ಕಾರ ರೂಪುರೇಷೆ ತಯಾರಿಸಿದರೆ ರೈತರ ಆರ್ಥಿಕತೆಯನ್ನು ಉತ್ತಮ ಪಡಿಸಬಹುದು ಎಂದರು.

    ಎಥೆನಾಲ್ ಉತ್ಪಾದಿಸಿ: ಕಬ್ಬಿನಿಂದ ಸಕ್ಕರೆ ತಯಾರಿಕೆ ಅಲ್ಲದೆ ಎಥೆನಾಲ್ ಕೂಡ ಉತ್ಪಾದಿಸಬಹುದು. ಬ್ರೆಜಿಲ್​ನಲ್ಲಿ ಎಥೆನಾಲ್ ಉತ್ಪಾದನೆಗೆ ಉತ್ತೇಜನ ಸಿಕ್ಕಿದೆ. ಕರ್ನಾಟಕದಲ್ಲಿ ಸಕ್ಕರೆ ಬದಲು ಎಥೆನಾಲ್ ಉತ್ಪಾದಿಸುವ ಮೂಲಕ ರೈತರು ಆದಾಯ ಹೆಚ್ಚಳಕ್ಕೆ ಯೋಚಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts