More

    19 ರಿಂದ ಸತ್ಯನಾರಾಯಣ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ

    ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ಮಾ.19 ರಿಂದ 21 ರವರೆಗೆ ದೇವರ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮ ನಡೆಯಲಿದೆ.

    19ರಂದು ಬೆಳಗ್ಗೆ 6.30ಕ್ಕೆ ಗಣಹೋಮ, 6.30 ಗಂಟೆಗೆ ತಕ್ಕನ ಮನೆಯಿಂದ ಭಂಡಾರ ಇಳಿಸುವುದು. 7ಕ್ಕೆ ಶುದ್ಧ ಕಳಸದೊಂದಿಗೆ ದೇವರ ಬಲಿ ಬರಲಿದೆ. 20ರಂದು ಬೆಳಗ್ಗೆ 10.30ಕ್ಕೆ ಸಾಮೂಹಿಕ ಅಶ್ಲೇಷಾ ಬಲಿ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪಟ್ಟಣಿ, ಮಹಾಪೂಜೆ ನಂತರ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ನೆರಪುಬಲಿ, ಮಹಾಪೂಜೆ, ಶ್ರೀ ದೇವರ ತೀರ್ಥ ಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಮಾ.21ರಂದು ಬೆಳಗ್ಗೆ 8.30ಕ್ಕೆ ಸಾನ್ನಿಧ್ಯ ಕಳಸ, 9.30ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3.30ಕ್ಕೆ ಹಿರಿಯರು ಹಾಗೂ ಮಕ್ಕಳಿಗೆ ತೆಂಗಿನಕಾಯಿ ಕೀಳಾಟ ಹಾಗೂ ಈಡುಗಾಯಿ ಒಡೆಯುವ ಸ್ಪರ್ಧೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. 22 ರಂದು ಬೆಳಗ್ಗೆ 10.30ಕ್ಕೆ ಶುದ್ಧ ಕಳಸ ಮಹಾಪೂಜೆ, ದೇವರ ತೀರ್ಥ ಪ್ರಸಾದ ನಂತರ ಮಂತ್ರಾಕ್ಷತೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts